ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.


1. 22ನೇ ಸೆಪ್ಟೆಂಬರ್ 2025ರಿಂದ ಜಾತಿ ಜನಗಣತಿ ಆರಂಭವಾಗುತ್ತಿದೆ.

2. ರಾಜ್ಯ ಸರ್ಕಾರದ 13.08.2025ರ ಆದೇಶದ ಪ್ರಕಾರ ಹಿಂದುಳಿದ ವರ್ಗದ ಆಯೋಗ ಜಾತಿ ಸಮೀಕ್ಷೆಯನ್ನು ಮಾಡಲು ಆದೇಶಿದೆ.

3. ಈ ಆದೇಶದ ಪ್ರಕಾರ ಚುನಾವಣಾ ಆಯೋಗದ ಮತದಾರರ ಪಟ್ಟಿಯಂತೆ ಸಮೀಕ್ಷೆ ನಡೆಸಬೇಕಾಗಿದೆ.

4. ಹಿಂದುಳಿದ ವರ್ಗದ ಆಯೋಗವು ಸರ್ಕಾರದ ಆದೇಶದಂತೆ ಡಿಜಿಟಲ್ ಆ್ಯಪ್ ಮುಖಾಂತರ ಸಮೀಕ್ಷೆ ಮಾಡಬೇಕಾಗಿದೆ.

5. ಹಿಂದುಳಿದ ವರ್ಗದ ಆಯೋಗವು ಸರ್ಕಾರದ ಈ ಸಂಸ್ಥೆ ಇಲಾಖೆಯ ಮುಖಾಂತರ ತಂತ್ರಜ್ಞಾನ (ಸಾಫ್ಟ್‌ವೇ‌ರ್) ಅಭಿವೃದ್ಧಿಪಡಿಸಿದ ಡಿಜಿಟಲ್ ಆ್ಯಪ್ ಮುಖಾಂತರ ಸಮೀಕ್ಷೆ ಮಾಡಬೇಕಾಗಿದೆ.

6. ಅದರೆ ಹಿಂದುಳಿದ ವರ್ಗದ ಆಯೋಗವು ಮತದಾರರ ಪಟ್ಟಿಯ ಬದಲಾಗಿ ವಿದ್ಯುತ್ ಮೀಟರ್ ನಂಬರ್ ಪ್ರಕಾರವಾಗಿ ಸಮೀಕ್ಷೆ ನಡೆಸಲು ತಯಾರಿ ನಡೆಸಿದೆ. ಎಲ್ಲರ ಮನೆಗಳಿಗೂ ಮೀಟರ್ ಇರುವುದು ಪ್ರರ್ಶ್ನಾಹವಾಗಿದೆ. ಇದನ್ನು ಸರ್ಕಾರದ ವಿದ್ಯುತ್ ಇಲಾಖೆಯ ಐದು ಕಂಪನಿಗಳಿಂದ ಜಿಇಓ ಮಾಪಿಂಗ್ (GEO Mapping) ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಐದು ಕಂಪನಿಗಳು ಖಾಸಗಿ ಕಂಪನಿಗಳಾಗಿದ್ದು ಮಾಹಿತಿ ಗೌಪ್ಯತೆ ಕಾಪಾಡುವ ಬಗ್ಗೆ ಸಂದೇಹವಿದೆ.

7. ಅಲ್ಲದೆ ಕ್ರೈಸ್ತ ಬ್ರಾಹ್ಮಣರು, ಮುಜವರ್ ಮುಸ್ಲಿಮ್ ಬ್ರಾಹ್ಮಣರು, ವೇದವ್ಯಾಸಕ್ರೈಸ್ತ ಬ್ರಾಹ್ಮಣರು ಎಂಬ ಹೊಸ ಜಾತಿಗಳನ್ನು ಹಿಂದುಳಿದ ವರ್ಗದ ಆಯೋಗ ಹುಟ್ಟಿಹಾಕಿದೆ.
8. ಬ್ರಾಹ್ಮಣ ಎಂಬ ಶೀರ್ಷಿಕೆ ಅಡಿಯಲ್ಲಿ ಬ್ರಾಹ್ಮಣ ಉಪ ಪಂಗಡಗಳ ಪಟ್ಟಿಯನ್ನು ಮಾಡಬೇಕಾಗಿತ್ತು. ಅದರ ಬದಲು ಎಲ್ಲ ಉಪಜಾತಿಗಳನ್ನು ಸೇರಿಸಿ 1561 ಹೊಸ ಜಾತಿಪಟ್ಟಿಯನ್ನು ಸಮೀಕ್ಷೆ ನಡೆಸುವ ಕೈಪಿಡಿಯಲ್ಲಿ ತೋರಿಸಲಾಗಿದೆ.

9. ಕಳೆದ 30 ವರ್ಷಗಳಲ್ಲಿ ಹಿಂದುಳಿದ ವರ್ಗದ ಆಯೋಗವು ಎಷ್ಟು ಜನಸಂಖ್ಯೆಯನ್ನು ಮುಂದುವರಿದ ಜನಾಂಗವೆಂದು ಘೋಷಿಸಿರುವ ಮಾಹಿತಿಯನ್ನು ನೀಡಿರುವುದಿಲ್ಲ.

10. ಜಾತಿ ಜನಗಣತಿ ಸಮೀಕ್ಷೆ ನಡೆಸುವ ಮೊದಲು ಎಲ್ಲ ಜಾತಿಯ ಮುಖಂಡರನ್ನು ಕರೆದು ಸಭೆ ಮಾಡಿ ಸಹಕಾರವನ್ನು ಕೋರಿ ಎಲ್ಲ ಜಾತಿಯ ಮುಖಂಡರಿಂದ ಉಪಪಂಗಡಗಳ ಪಟ್ಟಿಯನ್ನು ತರಿಸಿಕೊಂಡು ಸಮಸ್ಯೆಗಳು ಇಲ್ಲದಂತೆ ಸಮೀಕ್ಷೆ ನಡೆಸಬಹುದಾಗಿತ್ತು.

11. ಕಳೆದ 30 ವರ್ಷಗಳಲ್ಲಿ ಎಷ್ಟು ಉಪಜಾತಿಗಳನ್ನು ಹಿಂದುಳಿದ ವರ್ಗದಿಂದ ಹೊರತರಲಾಗಿದೆ ಮತ್ತು ಈ ಸಮೀಕ್ಷೆಯಿಂದ ಇನ್ನು ಅನೇಕ ಉಪಜಾತಿಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಇಂಗಿತವಿದೆಯೇ ಎಂಬ ಮಾಹಿತಿಯನ್ನು ನೀಡಿರುವುದಿಲ್ಲ.

12. ಕೇಂದ್ರ ಸರ್ಕಾರ Census Act ಮುಖಾಂತರ ಮಾಡಬೇಕಾದ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಎಂಬ ಹೆಸರಿನಲ್ಲಿ ಜಾತಿ ಜನಗಣತಿ ಮಾಡುತ್ತಿದೆ.

13. ಬ್ರಾಹ್ಮಣ ಜನಾಂಗದಲ್ಲಿ ಬಡತನ ಇದೆ. ಆದರೆ ಬ್ರಾಹ್ಮಣ ಮುಂದುವರಿದ ಜನಾಂಗ ಎಂದು ಸರ್ಕಾರ ತೀರ್ಮಾನಿಸಿರುವುದರಿಂದ ನಮ್ಮ ಸಮುದಾಯವನ್ನು ಪಕ್ಕಕ್ಕೆ ಇಡಲಾಗಿದೆ, ಮತ್ತು ಹಿಂದುಳಿದ ವರ್ಗಕ್ಕೆ ಹಿಂದುಳಿದ ಜನಾಂಗವನ್ನು ಸೇರಿಸುವ ಇಚ್ಛೆ ಇದ್ದಲ್ಲಿ ಸರ್ಕಾರ ಬ್ರಾಹ್ಮಣ ಜನಾಂಗದವರ ಸಮೀಕ್ಷೆ ಮಾಡುವುದರಲ್ಲಿ ಅರ್ಥವಿಲ್ಲ.

14. ಈ ಎಲ್ಲ ಕಾರಣಗಳಿಂದ ನಾವು ಈ ಸಮೀಕ್ಷೆಯನ್ನು ವಿರೋಧಿಸುತ್ತೇವೆ.

15. ನಾವು ಸಹ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅತಿಶೀಘ್ರದಲ್ಲಿ ಸಲ್ಲಿಸುತ್ತೇವೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium