IAT, KABDC ಹಾಗೂ KAPPEC ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಷ್ಟ್ರ ಮಟ್ಟದ ಒಂದು ದಿನದ ವಿಚಾರ ಸಂಕಿರಣ


ಕೃಷಿ ತಂತ್ರಜ್ಞರ ಸಂಸ್ಥೆ (IAT) ಬೆಂಗಳೂರು, ಕರ್ನಾಟಕ ರಾಜ್ಯ ಕೃಷಿ ವ್ಯವಹಾರ ಅಭಿವೃದ್ಧಿ ನಿಗಮ (KABDC) ಹಾಗೂ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಮರಣೆ ಮತ್ತು ರಫ್ತು ನಿಗಮ (KAPPEC) ಇವರ ಸಂಯುಕ್ತಾಶ್ರಯದಲ್ಲಿ "ಮುಕ್ತ, ವ್ಯಾಪಾರ ಒಪ್ಪಂದ (FTA): ದೇಶದ ಕೃಷಿ ವಹಿವಾಟಿನ ಹಿತಾಸಕ್ತಿ, ರಕ್ಷಣೆ" ಕುರಿತು ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ದಿನಾಂಕ 12.09.2025 ರಂದು ಬೆಳಗೆ,, 10 ಗಂಟೆಯಿಂದ ಕೃಷಿ ತಂತ್ರಜ್ಞರ ಸಂಸ್ಥೆ (IAT), ಕ್ಲೀನ್ಸ್ ರಸ್ತೆ, ಬೆಂಗಳೂರು ಹಮ್ಮಿಕೊಂಡಿರುತ್ತಾರೆ.

ಈ ಕಾರ್ಯಕ್ರಮವನ್ನು ಮುಕ್ತ ವ್ಯಾಪಾರ ಒಪ್ಪಂದಗಳಿಂದ ಸಂಭವಿಸುವ ಸವಾಲುಗಳು ಮತ್ತು ಅವಕಾಶಗಳ ಕುರಿತು ವಿಶ್ವತವಾಗಿ ವಿಚಾರ ವಿನಿಮಯ ಮಾಡುವ ಹಾಗೂ ತನ್ಮೂಲಕ ದೇಶದ ಕೃಷಿ ಕ್ಷೇತ್ರವನ್ನು ಹಾಗೂ ಕೃಷಿ-ವಹಿವಾಟಿನ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಏರ್ಪಡಿಸಲಾಗಿರುತ್ತದೆ.

ಭಾರತೀಯ ಮ್ಯಾನೇಜ್ ಮೆಂಟ್ ಸಂಸ್ಥೆ (IIM), ಭಾರತೀಯ ರಿಸರ್ವ್ ಬ್ಯಾಂಕ್ (RBI), ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ (FIEO), ಸಾಮಾಜಿಕ-ಆರ್ಥಿಕ ಬದಲಾವಣೆ ಸಂಸ್ಥೆ (FIEO), ರಪ್ಪು-ಆಮದು ನೀತಿ ಬ್ಯಾಂಕ್ (EXIM Bank) ಮುಂಬೈ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA), ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ನಂತಹ ಪ್ರಮುಖ ರಾಷ್ಟ್ರೀಯ ಸಂಸ್ಥೆಗಳ ವಿವಿಧ ವಿಷಯ ತಜ್ಞರು ಭಾಗವಹಿಸಿ ವಿಷಯದ ಕುರಿತಾಗಿ ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ.

ಈ ಕಾರ್ಯಕ್ರಮದವು APEDA ದಲ್ಲಿ ನೋಂದಾಯಿತ ರಫ್ತುದಾರರು, ಕೃಷಿ-ಸ್ಮಾರ್ಟ್ ಅಪ್ಗಳು, KAPPEC-PMFME ಫಲಾನುಭವಿಗಳು, Google-ನೋಂದಾಯಿತ ಕೃಷಿ ಉದ್ಯಮಾಸಕ್ತರು, IAT ಸದಸ್ಯರು, ರಾಜ್ಯದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕೃಷಿ-ವ್ಯವಹಾರ ನಿರ್ವಹಣಾ ಸಂಸ್ಥೆ, ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ಕೃಷಿ-ಅರ್ಥಶಾಸ್ತ್ರ ವಿಭಾಗದ ಅಧ್ಯಾಪಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಕೃಷಿ ಉತ್ಪನ್ನಗಳ ರಫ್ತು ಆಸಕ್ತರನ್ನು ಏಕಕಾಲಕ್ಕೆ ಒಂದೆಡೆ ಸೇರುವಂತೆ ಮಾಡಿ ಅಗತ್ಯ ಚರ್ಚೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸುತ್ತದೆ.
2..

ಭಾರತದಲಿ. 2024-25ನೇ ವರ್ಷದಲಿ.. 355 ಮಿಲಿಯನ್ ಟನ್ ಆಹಾರ ಧಾನ್ಯಗಳು ಮತ್ತು 367 ಮಿಲಿಯನ್ ಟನ್ ತೋಟಗಾರಿಕೆ ಉತ್ಪನ್ನಗಳನ್ನು ಉತ್ಪಾದಿಸಲಾಗಿರುತ್ತದೆ. 2019-2020ರ ವರೆಗೆ ಆಹಾರ ಆಮದು ಮಾಡಿಕೊಳ್ಳು ತ್ತಿದ್ದ ಭಾರತವು, 2020-21 ರಿಂದ ಆಹಾರ ರಫ್ತು ಮಾಡುವ ದೇಶವಾಗಿದೆ. ಕೃಷಿ ರಫ್ತು ಸುಮಾರು 50 4 ແຍກ, ຫ : 6.5 5 4. 2030 5 ಸರ್ಕಾರವು 100 ಬಿಲಿಯನ್ ಡಾಲರ್ ಮೌಲ್ಯದ ಕೃಷಿ ಆಹಾರ ರಫ್ತು ಸಾಧಿಸುವ ಗುರಿಯನ್ನು ಹೊಂದಿದೆ.

భారకపు అన్ని (ట్రియా యున్నటిడా తింగోడమా, యుఎఇ. సింగామారో. సౌతో ఓసారియా.. ಮೌರೀಷಿಯಸ್ ಹಾಗೂ ಮುಂತಾದ ದೇಶಗಳೊಂದಿಗೆ ಮುಕ್ತ ಹಾಗೂ ಬಹುಮುಖ ವ್ಯಾಪಾರ ಒಪ್ಪಂದಕ್ಕೆ ಯಶಸ್ವಿಯಾಗಿ ಸಹಿ ಹಾಕಿದೆ. ಮತ್ತು ಭೌಗೋಳಿಕ ಮತ್ತು ರಾಜಕೀಯ ಬದಲಾದ ಸನ್ನಿವೇಶದಲ್ಲಿ ಅನೇಕ ದೇಶಗಳು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ತೋರಿಸುತ್ತಿವೆ.

ನಮ್ಮ ದೇಶವು ಕಳೆದ ನಾಲ್ಕು ವರ್ಷಗಳಿಂದ ಮಾತುಕತೆ ನಡೆಸುತ್ತಿದ್ದರೂ ಅಮೆರಿಕಾದೊಂದಿಗೆ FTA ಗೆ ಸಹಿ ಹಾಕುವಲಿ, ಯಶಸ್ವಿಯಾಗಿರುವುದಿಲ್ಲ. ಭಾರತೀಯ ಸರಕುಗಳ ಮೇಲೆ ಅಮೇರಿಕಾ ದೇಶವು ಭಾರತದಿಂದ ರಫ್ತಾಗಲಿರುವ ವಸ್ತುಗಳಿಗೆ ಇತ್ತೀಚೆಗೆ ವಿಧಿಸಲಾಗಿರುವ ಶೇಕಡಾ 50 ರಷ್ಟು ಸುಂಕಗಳು ಮತ್ತು ನಮ್ಮ ದೇಶದ ವಿರುದ್ಧದ ನಿರ್ಬಂಧಗಳು ಅಮೆರಿಕ ಮತ್ತು ಭಾರತದ ನಡುಪಿನ FTA ಒಪ್ಪಂದವನ್ನು ವಿಳಂಬಗೊಳಿಸಿವೆ,

ಈ ಎಲಾ ಕಾರಣಗಳಿಂದಾಗಿಯೇ, ದೇಶದಲ್ಲಿ ಜಿಎಸ್‌ಟಿ ದರಗಳನ್ನು ಇಳಿಸುವುದು. ನಮ್ಮ ದೇಶದ ಕೃಷಿ ರಫ್ತುಗಳನ್ನು ಇತರ ಏಷ್ಯನ್ ಮತ್ತು ಯುರೋಪಿಯನ್ ದೇಶಗಳ ಕಡೆ ಹೇಗೆ ಮಾರ್ಗ ಬದಲಿಸುವುದು ಹಾಗೂ ಡೈರಿ ಉತ್ಪನ್ನಗಳು ಮತ್ತು GMO ಬೆಳೆಗಳ ಆಮದಿನಿಂದ ಭಾರತೀಯ ಕೃಷಿ ವ್ಯವಹಾರವನ್ನು ಹೇಗೆ ರಕ್ಷಿಸುವುದು ಎಂಬುದರ ಕುರಿತು ಚರ್ಚಿಸಲು ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು. ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ವೇದಿಕೆಯು ರಫ್ತುದಾರರು, ನೀತಿ ನಿರೂಪಕರು, ಶಿಕ್ಷಣ ತಜ್ಞರು ಮತ್ತು ನವೋದ್ಯಮಗಳು ಸೇರಿಕೊಂಡು ಭಾರತೀಯ ಕೃಷಿ ರಫ್ರಿನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ತಂತ್ರಗಳನ್ನು ಚರ್ಚಿಸಲು ಹಾಗೂ ತನ್ಮೂಲಕ ಜಾಗತಿಕ ವ್ಯಾಪಾರ ಒಪ್ಪಂದಗಳ ಜಾಲದಲಿ., ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಸೂಕ್ತ ಅವಕಾಶ ಕಲ್ಪಿಸುತ್ತದೆ.

ಸದರಿ ಸಮಯೋಚಿತ ಕಾರ್ಯಕ್ರಮದ ಅಂಶಗಳನ್ನು ಪ್ರಚುರ ಪಡಿಸಲು ಅನುವಾಗುವಂತೆ ಎಲ್ಲಾ.. ಆಸಕ್ಷ ಪಾಲುದಾರರನ್ನು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಪ್ರತೂ ರ್ವಕವಾಗಿ ಆಹ್ವಾನಿಸಿ ಸಾರ್ವಜನಿಕರಿಗೆ ಮಾಹಿತಿಯನ್ನು ಮಾಧ್ಯಮಗಳ ಮೂಲಕ ಪ್ರಸಾರ ಮಾಡಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ: ಶ್ರೀ ಯೋಗೇಶ್ ಜಿ.ಹೆಚ್, ಕಾರ್ಯದರ್ಶಿಗಳು, ಕೃಷಿ ತಂತ್ರಜ್ಞರ ಸಂಸ್ಥೆ (IAT), ಕ್ಲೀನ್ಸ್ ರಸ್ತೆ,, ಬೆಂಗಳೂರು ರವರನ್ನು ಸಂಪರ್ಕಿಸುವುದು.



Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.