ಬೆಂಗಳೂರಿನ ಅರಮನೆ ಮೈದಾನದಲ್ಲಿ 2026ರ ಜನವರಿ 4ರಂದು ದೇವಾಂಗ ಸಂಘದ 'ಶತಮಾನೋತ್ಸವ ಸಮಾರಂಭ'ವನ್ನು ಆಯೋಜಿಸಲಾಗಿದೆ.


ಬೆಂಗಳೂರು ದೇವಾಂಗ ಸಂಘ (ರಿ) 1924 ಫೆಬ್ರವರಿ 12ರಂದು ಸ್ಥಾಪಿತವಾಗಿದ್ದು ನೂರು ವರ್ಷಗಳ ಪಯಣವನ್ನು ಮುಗಿಸಿದೆ. ಶತಮಾನದ ಅವಧಿಯಲ್ಲಿ ಬೆಂಗಳೂರು ದೇವಾಂಗ ಸಂಘವು ಸಮಾಜಕ್ಕೆ, ರಾಷ್ಟ್ರಕ್ಕೆ ನೀಡಿರುವ ಕೊಡುಗೆ ಅಪಾರ.

ನೂರು ವರ್ಷಗಳ ಹಿಂದಿನಿಂದ ಗಂಡು ಮಕ್ಕಳ ಹಾಸ್ಟೆಲ್‌ನ್ನು ನಡೆಸಿಕೊಂಡು ಬಂದು ದೇವಾಂಗ ಸಂಘವು ಸುಮಾರು 8000ದಷ್ಟು ಪದವೀಧರರಾಗಿ, ವಿದ್ಯಾವಂತರಾಗಿ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ.
ಸಾವಿರಾರು ಜನ ಇಂಜಿನಿಯರ್‌ಗಳು, ನೂರಾರು ಜನ ವೈದ್ಯರುಗಳು, ಐ.ಎ.ಎ.ಸ್.. ಐ.ಪಿ.ಎಸ್., ಕೆ.ಎ.ಎಸ್. ಅಧಿಕಾರಿಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ದೊಡ್ಡ, ಸಣ್ಣ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ, ನಿರ್ವಹಿಸುತ್ತಿರುವ ಅಧಿಕಾರಿಗಳು ಹುಟ್ಟಿಕೊಂಡಿರುವುದು ದೇವಾಂಗ ಸಂಘವು ಸ್ಥಾಪಿಸಿದ ಗಂಡು ಮಕ್ಕಳ ಹಾಸ್ಟೆಲ್ ಕಾರಣವಾಗಿದೆ.

ದೇವಾಂಗ ಸಂಘವು ನೂರು ವರ್ಷಗಳ ಹಿಂದೆ ಸ್ಥಾಪಿತವಾಗಿದ್ದು ಅಂದಿನಿಂದ ಇಂದಿನವರೆಗೂ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳನ್ನು ರೂಪಿಸಿಕೊಂಡು ಸಮಾಜದ ಮತ್ತು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಂಘವು ನೂರು ವರ್ಷಗಳನ್ನು ಸಾರ್ಥಕ ರೀತಿಯಲ್ಲಿ ಪೂರೈಸಿದ್ದು ನಮ್ಮೆಲ್ಲರಿಗೂ ಸಂತೋಷದ ವಿಷಯವಾಗಿದೆ. ಈ ನೆನಪಿಗಾಗಿ ಶತಮಾನೋತ್ಸವವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಗಾಯಿತ್ರಿ ವಿಹಾರ ಗೇಟ್ ಸಂಖ್ಯೆ 04ರಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಈ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ, ಮಾನ್ಯ ಉಪ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು, ಲೋಕೋಪಯೋಗಿ ಇಲಾಖೆ ಸಚಿವರು, ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್‌ರವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium