ಸನಾತನ ಧರ್ಮವನ್ನು ಕಾಪಾಡುವಲ್ಲಿ 'ಅಖಂಡ' ಬಾಲಕೃಷ್ಣ ಯಶಸ್ವಿ
ಬೊಯ್ಯಾಪಾಟಿ ಶ್ರೀನು ಸಿನಿಮಾ ಎಂದರೆ ಅದರಲ್ಲಿ ಪಕ್ಕ ಮಾಸ್, ಪಕ್ಕ ಫೈಟ್ಸ್, ಮತ್ತು ಪಕ್ಕ ಡೈಲಾಗ್ಸ್ ಎಂಬುದು ಸರ್ವೇಸಾಮಾನ್ಯ, ಆದರೆ ಈ ಅಖಂಡ ತಾಂಡವ ಸಿನಿಮಾದ ಕಥೆ ನಮ್ಮ ಭಾರತದ ಮಹಾಗ್ರಂಥವಾದ' ಭಗವತ್ಗೀತೆಯಲ್ಲಿರುವ ಪ್ರಮುಖ ಅಂಶಗಳನ್ನು ಆಯ್ದುಕೊಂಡು, ಅದರಲ್ಲಿದ್ದ ಪ್ರಕೃತಿಯ ಮಹಾಕಾಲಗಳ ಪ್ರಾಮುಖ್ಯತೆಗಳೊಂದಿಗೆ ಭಾರತ ದೇಶದ ದೈವ ಭಕ್ತಿ, ದೈವ ನಂಬಿಕೆ, ಹಾಗೂ ದೈವ ಶಕ್ತಿಯೊಂದಿಗೆ ಸಂಬಂಧಿಸಿರುವ ಸನಾತನ ಧರ್ಮದ ಬಗ್ಗೆ ಹಾಗೂ ಹಿಂದೂ ಧರ್ಮದ ಭಕ್ತಿಯನ್ನು ಹಾಗೂ ಅದರ ಶಕ್ತಿಯನ್ನು ಸಿನಿಮಾ ಕಥೆಯ ಮುಖಾಂತರ ತೋರಿಸುವಲ್ಲಿ ಈ ನಿರ್ದೇಶಕ ಪ್ರಯತ್ನ ಪಟ್ಟಿರುವುದು ನಿಜಕ್ಕೂ ಆಶ್ಚರ್ಯಕರ ಹಾಗೂ ಸ್ವಾರಸ್ಯಕರ ವಾಗಿದೆ ಎಂದರೆ ತಪ್ಪಾಗಲಾರದು,
ಏಕೆಂದರೆ ಬೊಯಪಾಟಿ ಸೀನು ಸಿನಿಮಾವೆಂದರೆ ಅದರಲ್ಲಿ ಬರಿ ಹೊಡಿ, ಬಡಿ ಹಾಗೂ ನೆತ್ತರು ಇರುತ್ತದೆ, ಹಾಗೂ ಅವರ ಪ್ರತಿಯೊಂದು ಸಿನಿಮಾ ಪ್ರಾರಂಭವಾಗುವ ಮೊದಲು ಅವರ ಡೈಲಾಗ್ ಕೇಳುತ್ತಿತ್ತು, ಆದರೆ ಈ ಸಿನಿಮಾದಲ್ಲಿ ಬರೀ ಘಂಟೆ, ನಾದ, ಮಂತ್ರ ತಂತ್ರಗಳ ವೇದ ಘೋಷಗಳೇ ಸದ್ದು ಸಖತ್ ಆಗಿ ಕೇಳುತ್ತಿದೆ, ಅಷ್ಟರ ಮಟ್ಟಿಗೆ ಸಿನಿಮಾ ಕಥೆ ಕಟ್ಟಿ ರಚಿಸಿದ್ದಾರೆ,
ಹಳೆಯ ಅಖಂಡ ಸಿನಿಮಾ ಮುಂದಿನ ಭಾಗವಾಗಿರುವ ಈ ಸಿನಿಮಾ ಒಳ್ಳೆಯ ಕಾನ್ಸೆಪ್ಟ್ ಮತ್ತು ಪ್ರೇಕ್ಷಕನ ಹೃದಯ ಹಾಗೂ ಮನ ಮುಟ್ಟುವಂತೆ ಗ್ರಾಫಿಕ್ ದೃಶ್ಯಗಳನ್ನು ಅಳವಡಿಸಿರುವುದು ಸಿನಿಮಾಗೆ ಹೈಲೈಟ್ ಮತ್ತು ಪ್ರೇಕ್ಷಕನ ವೀಕ್ಷಣೆಗೆ ನಿಜಕ್ಕೂ ಸಖತ್ ಮಜಾ ಕೊಡುತ್ತದೆ,
ಕಥೆ ಪ್ರಾರಂಭವಾಗುವುದು ರಾಜಕೀಯದಲ್ಲಿ ಉನ್ನತ ಸ್ಥಾನವಾದ ಪ್ರಧಾನಿ ಕುರ್ಚಿಗೆ ಕೈಹಾಕುವ ದೃಷ್ಟಿಯಿಂದ ಅಗೋಚರ ಶಕ್ತಿಗಳನ್ನು ಆಹ್ವಾನಿಸಿ ಅವುಗಳ ಶಕ್ತಿಯ ಚಲನೆ ಮತ್ತು ಮಾಟ ಮಂತ್ರದೊಂದಿಗೆ ದೇಶದ ಪ್ರಧಾನಿ ಹುದ್ದೆಯ ಸ್ಥಾನಕ್ಕೆ ಹೋಗಲು ಒಬ್ಬ ಖಳನಾಯಕ ಪ್ರಯತ್ನಪಟ್ಟರೆ, ಇನ್ನೂ ನಮ್ಮ ವಿರೋಧ ದೇಶದಲ್ಲಿದ್ದ ಒಬ್ಬ ಜನರಲ್ ಅಧಿಕಾರಿ ಇಡೀ ಭಾರತ ದೇಶವನ್ನೇ ನಾಶ ಮಾಡಬೇಕು ಎನ್ನುವ ಹಠದಲ್ಲಿ ಬೀಳುತ್ತಾನೆ, ಅದೇ ರೀತಿ ನಮ್ಮ ಭಗವತ್ಗೀತೆಯನ್ನೇ ಪಠಿಸಿ ದೇಶ ನಾಶ ಮಾಡಲು ಬೇಕಾದ ಸಂಚು, ಹೊಂಚು ಗಳನ್ನು ಹೇಳಿಕೊಡಲು ಹುಟ್ಟಿ ಕೊಳ್ಳುವ ಇನ್ನೊಬ್ಬ ಖಳನಾಯಕ ಕಥೆಯಲ್ಲಿ ಅಡಗಿರುತ್ತಾನೆ,
ಈ ಮೂರು ಜನರ ಕಣ್ಣು ನಮ್ಮ ಭಾರತ ನೆಲದಲ್ಲಿರುವ ದೈವ ನಂಬಿಕೆ, ಧ್ಯಾನ, ಭಕ್ತಿ, ಶಕ್ತಿಯ ಮೇಲೆ ಬಿದ್ದು ಅದನ್ನು ಭಾರತದ ಜನರ ಮನದಿಂದ ತೆಗೆದುಹಾಕಿ ನಂತರ ದೇಶವನ್ನೇ ಹಾಳುಮಾಡಬೇಕು ಎಂಬ ಆಲೋಚನೆಯಲ್ಲಿ ಹುಟ್ಟಿಕೊಳ್ಳುವುದೇ 140 ವರ್ಷಕ್ಕೆ ಒಮ್ಮೆ ಬರುವ ಮಹಾ ಕುಂಭಮೇಳದಲ್ಲಿ ನೆಡೆಯುವ ಘಟನೆ,
ಪ್ರೇಕ್ಷಕನ ದೃಷ್ಟಿಯನ್ನು ತನ್ನ ಹಿಡಿತದಲ್ಲಿರಿಸಲು ಈ ಕೊರೋನ ವೈರಸ್ ರೀತಿಯಲ್ಲಿ ಮತ್ತೊಂದು ವೈರಸ್ ಅನ್ನು ಆ ಕುಂಭಮೇಳದ ನದಿಯಲ್ಲಿ ಬಿಟ್ಟು ಎಲ್ಲ ಭಕ್ತರ ಆರೋಗ್ಯವನ್ನು ಹದಗೆಡಿಸಿ ಲಕ್ಷಾಂತರ ಪ್ರಾಣಗಳನ್ನು ತೆಗೆಯುತ್ತಾರೆ ಇದರಿಂದ ಎಲ್ಲಾ ಜನರ ಮನದಲ್ಲಿ ದೇವರು ಇಲ್ಲಾ ಎಂಬ ಸಂದೇಶ ಹೋಗಲು ನಂಬಿಸುತ್ತಾರೆ, ಇದರಿಂದ ಎಲ್ಲಾ ಜನರು ತಮ್ಮ ದೇವರುಗಳನ್ನು ಪೂಜಿಸಲು ನಿಲ್ಲಿಸಿಬಿಡುತ್ತಾರೆ,
ನಂತರ ಕಥೆ ಬಯೋವಾರ್ ದೃಶ್ಯಗಳೊಂದಿಗೆ ಬದಲಾಗುತ್ತದೆ ಅದಕ್ಕೆ ಬೇಕಾದ ವ್ಯಾಕ್ಸೀನ್ ಕಂಡು ಹಿಡಿಯಲು ಹೆಣಗಾಡುವ ಸರ್ಕಾರ, ಇನ್ನೂ ಯಾವುದೇ ಔಷಧಿ ಸಿಗದೆ ಸಾಯುವ ಜನರು ಈ ರೀತಿಯಲ್ಲಿ ಕಥೆ ಸಾಗುತ್ತದೆ, ಕೊನೆಗೆ ಕಥೆ ನಾಯಕನ ಮಗಳು ತನ್ನ ವಿಜ್ಞಾನ ಅರಿವಿನಿಂದ ವ್ಯಾಕ್ಸೀನ್ ಕಂಡು ಹಿಡಿಯುತ್ತಾಳೆ, ಆ ವ್ಯಾಕ್ಸೀನ್ ಅನ್ನು ಜನರಿಗೆ ತಲುಪಿಸಲು ತಡೆಯುವುದು ಖಳನಾಯಕರ ಕರ್ತವ್ಯ ಈ ರೀತಿಯ ಆಲೋಚನೆಗಳೊಂದಿಗೆ ನಿಜವಾಗಲೂ ದೃಶ್ಯಗಳು ಸಿನಿಮಾದಲ್ಲಿ ಮುಂದೆ ಏನಾಗಬಹುದು, ಮತ್ತೇನ್ಯಾಗಬಹುದು ಎಂದು ಪ್ರತಿಯೊಂದು ಸೀನ್
ಎಂದು ಊಹಿಸಲಾರದ ಟ್ವಿಸ್ಟ್ ಕಡೆಗೆ ಕಥೆ ಸಾಗುತ್ತದೆ, ಇದರಿಂದ ಪ್ರೇಕ್ಷಕನ ದೃಷ್ಟಿ ನಿರ್ದೇಶಕ ಕಥೆಯಲ್ಲಿ ಆವರಿಸಿರುತ್ತದೆ, ಅದಕ್ಕೆ ತಕ್ಕಂತೆ ಸಂಭಾಷಣೆ ಬರೆದಿರುವುದು ರೋಮಾಂಚನವೆನಿಸುತ್ತಿದ್ದಂತೆ ಆದರೆ ಆ ವ್ಯಾಕ್ಸೀನ್ ಅನ್ನು ಡೆಸ್ಟ್ರಾಯ್ ಮಾಡಲು ಮತ್ತು ಅವಳನ್ನು ಸಾಯಿಸಲು ಹೋಗುವ ಖಳನಾಯಕರು, ಈ ಸನ್ನಿವೇಶಗಳಲ್ಲಿ ಹಳೆಯ ಸಿನಿಮಾದ ಕೊನೆಯಲ್ಲಿ ಹೇಳಿದಂತೆ ತಾನು ಎಲ್ಲಿದ್ದರೂ, ಹೇಗಿದ್ದರೂ, ನಿನಗೆ ಆಪತ್ತು ಬಂದಾಗ ಬಂದೇ ಬರುತ್ತೇನೆ ಎಂಬ ಮಾತಿನಂತೆ ದೈವ ಅಂಶ, ದೈವ ನಂಬಿಕೆ,
ಸನಾತನ ಧರ್ಮವನ್ನು ಕಾಯುತ್ತಿರುವ ಮತ್ತು ಎತ್ತಿ ಹಿಡಿಯುವಲ್ಲಿ ಕಾಣಿಸುವವನೇ ಅಖಂಡ ಬಾಲಕೃಷ್ಣ ನಿಜಕ್ಕೂ ಈ ಸನ್ನಿವೇಶ ಮೈ ಜುಂ ಎನ್ನುತ್ತದೆ,
ದ್ವಿಪಾತ್ರದಲ್ಲಿ ನಟಿಸಿರುವ ಬಾಲಕೃಷ್ಣ ಈ ಸಿನಿಮಾ ಕಥೆಗೆ ಹಾಗೂ ಸನ್ನಿವೇಶಗಳಿಗೆ ತಮ್ಮ ಪಾತ್ರದ ಮುಖಾಂತರ ಪ್ರಾಣ ನೀಡಿದ್ದಾರೆ ಎಂದರೆ ತಪ್ಪಾಗಲಾರದು, ಅಷ್ಟರ ಮಟ್ಟಿಗೆ ಅವರು ಅಭಿನಯಿಸಿ ಅಭಿಮಾನಿಗಳಿಂದ
ಜೈ ಬಾಲಯ್ಯ ಎಂಬ ಕೂಗು ಥಿಯೇಟರ್ ನಲ್ಲಿ ಕೇಳಿಸುತ್ತದೆ,
ಈ ವಾಮಾಚಾರವೂ ಸಹ ಒಂದು ಮಾರ್ಗವೇ ಅದನ್ನು ಕೆಟ್ಟದಾಗಿ ಬಳಸಬಾರದು ಎಂಬ ಸಂದೇಶ ನೀಡಿರುವುದು ನಿಜಕ್ಕೂ ಒಂದು ರೀತಿಯಲ್ಲಿ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿದೆ, ಆದರೆ ದೈವ ನಂಬಿಕೆ, ಧರ್ಮ ಯುದ್ಧವನ್ನು ಉಳಿಸಲು ಬೇಕಾಗಿರುವ ಒಂದೇ ಒಂದು ಮಾರ್ಗ ಅದುವೇ ಸನಾತನ ಐಂದವ ಧರ್ಮ ಎಂಬ ವೇದ ವಾಕ್ಯದೊಂದಿಗೆ ತಮ್ಮ ಡೈಲಾಗ್ ಗಳ ಪ್ರಳಯವನ್ನೇ ಸುರಿಸಿದ್ದಾರೆ ತಮ್ಮ ನಟನೆಯನ್ನು ಅಭಿನಯಿಸಿ ಇನ್ನಷ್ಟು ಸಿನಿಮಾವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಡಿದ್ದಾರೆ,
ತಾಯಿ ಮಗ ಸೆಂಟಿಮೆಂಟ್ ಈ ಸಿನಿಮಾದಲ್ಲಿ ಮುಂದುವರೆದಿದ್ದು ನಿಜಕ್ಕೂ ಪ್ರತಿಯೊಬ್ಬ ತಾಯಿ ಪ್ರೇಮಿ ಹಾಗೂ ಮಕ್ಕಳ ಪ್ರೇಮಿಗಳು ಕಣ್ಣೀರು ಸುರಿಸುತ್ತಾರೆ ಆ ರೀತಿಯ ಸೆಂಟಿಮೆಂಟ್ ಸೀನ್ ಗಳನ್ನೂ ನಿರ್ದೇಶಕ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ, ತಾಯಿ ಮತ್ತು ಮಗನ ಹಾಗೂ ತಂದೆ ಮತ್ತು ಮಗಳ ಪ್ರೀತಿಗೆ ಕಥೆ ಹೆಚ್ಚು ಒಲವು ಕೊಟ್ಟಿದ್ದು ನಾಯಕಿ ಜೊತೆಗಿನ ಪ್ರೀತಿ ಪ್ರೇಮದ ದೃಶ್ಯಗಳಿಗೆ ಕತ್ತರಿ ಹಾಕಿದ್ದಾರೆ ಎಂದೆನಿಸಿತು, ಅದು ಬಿಟ್ಟರೆ ಒಂದು 10 ನಿಮಿಷ ದೃಶ್ಯಗಳಲ್ಲಿ ಸಂಯುಕ್ತ ಮೆನನ್ ಪಡ್ಡೆ ಹುಡುಗರ ಮನ ಗೆಲ್ಲುತ್ತಾರೆ, ಸಂಗೀತ ಮತ್ತು ಬ್ಯಾಕ್ಗ್ರೌಂಡ್ ಮ್ಯೂಸಿಕ್ ಬಗ್ಗೆ ಹೇಳುವುದಾದರೆ ತಮನ್ ಮತ್ತೊಮ್ಮೆ ಥಿಯೇಟರ್ ಗಳಲ್ಲಿನ ಸ್ಪೀಕರ್ ಗಳು ಚಿತ್ರದ ಬ್ಯಾಕ್ಗ್ರೌಂಡ್ ಸೌಂಡ್ ಗೆ ತಡೆಯದೆ ಸರ್ವೀಸ್ ಗೆ ಹೋಗುವುದು ಗ್ಯಾರಂಟಿ, ಅನ್ನುವಷ್ಟು ಮ್ಯೂಸಿಕ್ ಬಾರಿಸಿದ್ದಾರೆ.
ಒಬ್ಬ ನಾಯಕ ಸಮಾಜದ ನಡುವೆ ಇರುವ ಕಲ್ಮಶಗಳನ್ನು ತೊಲಗಿಸಲು
ನಿರತರಾದರೆ ಮತ್ತೊಬ್ಬ ನಾಯಕ ಸನಾತನ ಧರ್ಮವನ್ನ ಉಳಿಸುವಲ್ಲಿ ಪ್ರಯತ್ನಪಡುತ್ತಿರುತ್ತಾನೆ, ಆ ಕಡೆ ತನ್ನ ತಾಯಿ ತನ್ನ ದೊಡ್ಡ ಮಗನೆ ಬಂದು ನನಗೆ ಅಂತಿಮ ಸಂಸ್ಕಾರ ಮಾಡಬೇಕು ಎನ್ನುವ ಹಠದಲ್ಲಿ ಸತ್ತು ಹೋಗುತ್ತಾಳೆ, ವ್ಯಾಕ್ಸೀನ್ ಹೇಗೆ ತಲುಪಿಸಬೇಕು ಮತ್ತು ತನ್ನ ಮಗಳ ಮಾತಿಗೆ ಹೇಗೆ ಉತ್ತರ ಕೊಡಬೇಕು ಎಂಬ ಗೊಂದಲದಲ್ಲಿ ಅಖಂಡ ಶಿವನೇ ಜ್ಞಾನಕ್ಕೆ ಕೂತಾಗ ಸಾಕ್ಷಾತ್ ಆ ಪರಮೇಶ್ವರನೆ ಅಖಂಡನ ರೂಪದಲ್ಲಿ
ಹೋಗಿ ತನ್ನ ತಾಯಿಯ ಅಂತಿಮ ಸಂಸ್ಕಾರ ಮಾಡುವುದು ನಿಜಕ್ಕೂ ಕಣ್ಣುಗಳು ಒದ್ದೆಯಾಗುವುದು ಡೌಟ್ ಇಲ್ಲಾ ಆ ರೀತಿಯಲ್ಲಿ ಸೆಂಟಿಮೆಂಟ್
ದೃಶ್ಯಗಳನ್ನು ಕ್ರಿಯೇಟ್ ಮಾಡಿದ್ದಾರೆ,
ಕೊನೆಗೆಯದಾಗಿ, ಭರತ ಖಂಡದ ಸನಾತನ ಧರ್ಮವನ್ನು ಉಳಿಸುವಲ್ಲಿ ಅಖಂಡನ ಶಕ್ತಿ ಜೊತೆಯಾಗಿ, ಈ ಅಗೋಚರ ಶಕ್ತಿಗಳ ಕಣಗಳಲ್ಲಿ ಹುಟ್ಟಿದ್ದ ನರ ಮನುಷ್ಯರು ಮಹಾ ಶಿವನ ದೈವವನ್ನೇ ನಾಶ ಮಾಡುವ ಉದ್ದೇಶದಿಂದ ವಿಫಲರಾಗಿ ಅಖಂಡನ ಭುಜಕ್ಕೆ ಬಜರಂಗಿಯ ತೋಳುಬಲ ಸೇರಿ ಕೊನೆಗೆ ಅಗೋಚರ ಶಕ್ತಿಗಳ ರಾಕ್ಷಸರು ಸಾಯುತ್ತಾರೆ, ಇನ್ನೂ ಖಳನಾಯಕರು ಧರ್ಮವನ್ನು ಹಾಳು ಮಾಡಲು ಪ್ರಯತ್ನಪಡುವುದರಲ್ಲಿ ವಿಫಲರಾಗುತ್ತಾರೆ, ಮುಖ್ಯ ಖಳನಾಯಕರು ಇಡೀ ದೇಶವನ್ನೇ ನಾಶ ಮಾಡುವಲ್ಲಿ ಮುಗ್ಗರಿಸುತ್ತಾರೆ ಚಿತ್ರದ ನಾಯಕ ಅಖಂಡ ಅವರ ಎಲ್ಲಾ ಕೆಟ್ಟ ಆಲೋಚನೆಗಳನ್ನು ಹಾಗೂ ಅವರನ್ನು ನಾಶಮಾಡಿ ಸನಾತನ ಹಿಂದೂ ಧರ್ಮವನ್ನು ಉಳಿಸಿವಲ್ಲಿ ಯಶಸ್ವಿಯಾಗಿ ಧರ್ಮವನ್ನು ಕಾಪಾಡಲು ನಾನು ಯಾವಾಗ ಬೇಕಾದರೂ ಮತ್ತೆ ಬರುತ್ತೇನೆ ಎಂಬ ವಾಕ್ಯದೊಂದಿಗೆ ಶಾಂಬಲ ನಗರಕ್ಕೆ ಹೊರಟು ಹೋಗುತ್ತಾನೆ.
ಇಲ್ಲಿಗೆ ಕಥೆ ಪೂರ್ತಿಯಾಗುತ್ತದೆ ಹಾಗೂ ಪ್ರೇಕ್ಷಕನ ಕಣ್ಣು ಇನ್ನೂ ಸ್ಕ್ರೀನ್ ಮೇಲೆ ಹಾಗೆ ಇರುತ್ತದೆ, ಆ ರೀತಿಯಲ್ಲಿ ನಿರ್ದೇಶಕ ಇಂಟ್ರೆಸ್ಟಿಂಗ್ ಕಥೆಯನ್ನು ಹೇಳುತ್ತಾರೆ.
ಸಿನಿಮಾ ವಿಮರ್ಶಕ
ಮುನಿರಾಜ್
ಬೆಂಗಳೂರು
VNK News 24/7
Comments
Post a Comment