ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರಿಂದ ಸವಿತಾ ಸಮಾಜಕ್ಕೆ ಅವಮಾನ ; ತೀವ್ರ ಖಂಡನೆ. ಕರ್ನಾಟಕ ದ್ವೇಷ ಅಪರಾಧ ತಡೆ ವಿದೇಯಕ ಮಂಡನೆ ಸವಿತಾ ಸಮಾಜ ಸ್ವಾಗತ.

ಬೆಂಗಳೂರು ಡಿಸೆಂಬರ್ 20; ಮಾಜಿ ಸಚಿವ ಮತ್ತು ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಸವಿತಾ ಸಮುದಾಯದ ವಿರುದ್ಧ ನೀಡಿರುವ ಹೇಳಿಕೆಯನ್ನು ಕರ್ನಾಟಕ ಸವಿತಾ ಸಮಾಜ ತೀವ್ರವಾಗಿ ಖಂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸವಿತಾ ಸಮಾಜ ಕಾರ್ಯಾಧ್ಯಕ್ಷ ಬೈಲಪ್ಪ ನಾರಾಯಣ ಸ್ವಾಮಿ, ವೇಣುಗೋಪಾಲ್, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತೆ ನಾಗವೇಣಿ, 
ಮಾಜಿ ಸಚಿವ ಮತ್ತು ಮಧುಗಿರಿ ಶಾಸಕರಾದ ಕೆ ಎನ್ ರಾಜಣ್ಣ ಖಾಸಗಿ ಟಿ.ವಿ ನ್ಯೂಸ್ ಚಾನೆಲ್ ನವರು ನೆಡೆಸಿಕೊಡುವ ಅತಿಥಿ ಸಂದರ್ಶನ ಕಾರ್ಯಕ್ರಮದಲ್ಲಿ ಸನಾತನ ಧರ್ಮದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಸವಿತಾ, ಸಮುದಾಯದವರು ಕ್ಷೌರಿಕ ವೃತ್ತಿ ಮಾಡುತ್ತಾರೆ ಎನ್ನುವ ಬದಲು ಹಜಾಮತ್ ಮಾಡುವವನು ಹಜಾಮತ್ ಮಾಡುತ್ತಾನೆ ಎಂದು ಹೇಳಿದ್ದಾರೆ. ರಾಜಣ್ಣನವರು ತಳಸಮುದಾಯದಿಂದ ಬಂದವರಾಗಿದ್ದು, ತಳಸಮುದಾಯಗಳ ಬಗ್ಗೆ ಕಾಳಜಿ ಇರುವ ಅದರಲ್ಲೂ ಸವಿತಾ ಸಮುದಾಯದ ಮೇಲೆ ಅತ್ಯಂತ ಪ್ರೀತಿವುಳ್ಳವರಾಗಿದ್ದು, ಸವಿತಾ ಸಮುದಾಯಕ್ಕೆ ಅನೇಕ ಅನುಕೂಲ ಮಾಡಿಕೊಟ್ಟಿರುತ್ತಾರೆ. ಇವರ ಬಾಯಲಿ ಸವಿತಾ ಸಮಾಜದ ನಿಷೇಧಿತ ಪದ ಬಳಕೆಯಾಗಿರುವುದು ಅತ್ಯಂತ ಆಶ್ಚರ್ಯ ದಿಗ್ಧಮೆ ಆಘಾತಕಾರಿ ಯಾಗಿದ್ದುಇದು ದುರಂತವೇ ಸರಿ ಎಂದರು.

 ಸವಿತಾ ಸಮೂದಾಯಕ್ಕೆ ಮಾಡಿರುವ ಅಪಮಾನ. ಕ್ಷೌರಿಕ ವೃತ್ತಿ ಎಂದು ಹೇಳಲು ಅನುಕೂಲ ಇದ್ದರೂ ಸಹ ಹಜಾಮತ್ ಎಂದು ಹೇಳಿರುವ ರಾಜಣ್ಣನವರು ಅವರ ಹೇಳಿಕೆಯನ್ನು ಕರ್ನಾಟಕ ರಾಜ್ಯ ಸವಿತಾ ಸಮಾಜ ಖಂಡಿಸುತ್ತದೆ ಎಂದು ಹೇಳಿದರು.

ಕ್ಷೌರಿಕ ವೃತ್ತಿಯನ್ನು ಹಜಾಮತ್ ಎಂದು ಹೇಳಿರುವ ರಾಜಣ್ಣನವರ ಹೇಳಿಕೆಯನ್ನು ಸಂದರ್ಶನದಲ್ಲಿ ಹೇಳಿಕೆ ನೀಡಿದರೂ.ಅದೇ ರೀತಿ ಒಬ್ಬ ಜವಾಬ್ದಾರಿಯುತ ಮಾಧ್ಯಮದ ನಿರೂಪಕರಾಗಿ ಸವಿತಾ ಸಮಾಜದ ನಿಷೇಧಿತ ಪದ ಬಳಕೆ ಮಾಡಿದರೂ ಅದನ್ನು ತಕ್ಷಣ ಪ್ರಶ್ನಿಸದೆ ಮತ್ತು ಕಟ್ ಮಾಡದೆ ನೇರವಾಗಿ ಪ್ರಸಾರ ಮಾಡಿರುವುದು ನಿರೂಪಕರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದರು.

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ವಿಧೇಯಕ 2025 ಅನ್ನು ವಿಧಾನ ಮಂಡಲದಲಿ ಮಂಡಿಸಿದೆ ಇದಕ್ಕೆ ರಾಜ್ಯ ಸರ್ಕಾರಕ್ಕೆ ಸವಿತಾ ಸಮಾಜದಿಂದ ಅಭಿನಂದನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮಂತಹ ಧ್ವನಿ ಇಲ್ಲದ ಸಮುದಾಯಕ್ಕೆ ಧ್ವನಿಯಾಗಲು ಈ ವಿಧೇಯಕ ತಂದಿದ್ದಾರೆ ಎಂದು ವಿಧೇಯಕ ನೋಡಿದಾಗ ಅರ್ಥವಾಗುತ್ತದೆ ಎಂದು ಹೇಳಿದರು

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium