ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದಿಂದ 'ಅಲ್ಪಸಂಖ್ಯಾತ ಹಕ್ಕುಗಳ ದಿನಾಚರಣೆ' ಕಾರ್ಯಕ್ರಮ ನಡೆಯಿತು.


ಆಹಾರ, ಉಡುಪು, ಭಾಷೆ ಮತ್ತು ಸಂಸ್ಕೃತಿಯ ಆಯ್ಕೆಯ ವಿಚಾರದಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ. ಈ ಸತ್ಯವನ್ನು ಒಪ್ಪಿಕೊಂಡು ಮುಂದುವರೆಯದಿದ್ದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರು ಗುರುವಾರ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಗುರುವಾರ ನಗರದಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತ ಹಕ್ಕುಗಳ ದಿನಾಚರಣೆಯ ಕಾರ್ಯಕ್ರಮದಲ್ಲಿ ರಿಜ್ವಾನ್‌ ಅರ್ಷದ್‌ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಇಂತಹ ಸೂಕ್ಷ್ಮಸಮಯದಲ್ಲಿ ಅಲ್ಪಸಂಖ್ಯೆ ಕಡಿತಗೊಳಿಸದೆ ಸಂವಿಧಾನವನ್ನು ಸರಿಯಾಗ ಜಾರಿಗ ತರುತ್ತಿದ್ದಾರೆಯೇ ಎಂಬುದನ್ನು ಗಮನಿಸುವುದು ಅತ್ಯಂತ ಅಗತ್ಯ ಸಂಸತ್ತಿನಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಿರ್ದಿಷ್ಟ ನಿರ್ಣಯಗಳು ಮತ್ತು ಕಾನೂನುಗಳನ್ನು ತರಲಾಗುತ್ತಿದೆ. ಧರ್ಮಾಂತರ ನಿಷೇಧ ಕಾಯ್ದೆ ವಕ್ಸ್ ತಿದ್ದುಪಡಿ ಮಸೂದೆ, ಸಿಎಎ-ಎನ್‌ಆರ್‌ಸಿ ಮುಂತಾದವುಗಳು ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಜಾರಿಗೆ ತರಲಾಗಿದೆ.

ಹೀಗಾಗಿ ಎಲ್ಲಾ ಅಲ್ಪಸಂಖ್ಯಾತರು ಒಗ್ಗೂಡಿ ಭಾರತವನ್ನು 'ವಿಶ್ವಗುರು'ವಾಗಿಸಲು ಕೆಲಸ ಮಾಡಬೇಕೆಂದು ರಿಜ್ವಾನ್‌ ಅರ್ಷದ್‌ ಅವರು ಕರೆ ನೀಡಿದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium