ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ 8ನೇ ಶಾಖೆ ಆರಂಭವಾಯಿತು.

ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ 8ನೇ ಶಾಖೆ ಆರಂಭವಾಯಿತು. 

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಹಾಗೂ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ. ಶರವಣ ಅವರು ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿ ಶಾಖೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಟಿ ರುಕ್ಷ್ಮಿಣಿ ವಸಂತ್ ಹಾಗೂ ಬಿಗ್‌ಬಾಸ್-12ರ ವಿಜೇತ ಗಿಲ್ಲಿ ನಟರಾಜ್ ವಿಶೇಷ ಆಹ್ವಾನಿತರಾಗಿದ್ದರು.  

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, 'ಸಾಯಿಬಾಬಾ ಅವರ ಭಕ್ತರಾದ ಶರವಣ ಅವರು ಸಾಯಿ ಗೋಲ್ಡ್‌ ಪ್ಯಾಲೇಸ್ ಸ್ಥಾಪನೆ ಮಾಡಿದ್ದಾರೆ. ಗ್ರಾಹಕರಿಗೆ ಉತ್ತಮ ಚಿನ್ನಾಭರಣ ಲಭಿಸಬೇಕು ಎಂದು ಇದೀಗ 8ನೇ ಶಾಖೆಯನ್ನು ಪ್ರಾರಂಭಿಸಿದ್ದಾರೆ. 500ಕ್ಕೂ ಹೆಚ್ಚು ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಅವರ ಕುಟುಂಬಗಳಿಗೆ ಆಸರೆಯಾಗಿದ್ದಾರೆ' ಎಂದರು.

ಟಿ.ಎ.ಶರವಣ ಮಾತನಾಡಿ, 'ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಿ ಶಾಪಿಂಗ್ ಮಾಡಲು, ಸಂಚಾರ ದಟ್ಟಣೆಯಿಂದ ಒಂದು ದಿನ ವ್ಯರ್ಥವಾಗುತ್ತದೆ. ಜನರ ಅನುಕೂಲಕ್ಕಾಗಿ ಕನಕಪುರ ರಸ್ತೆಯಲ್ಲಿ ಶಾಖೆ ಆರಂಭಿಸಲಾಗಿದೆ. ಮಂಡ್ಯ, ಚನ್ನಪಟ್ಟಣ, ರಾಮನಗರದ ಜನತೆಗೂ ಇದು ಹತ್ತಿರವಾಗುತ್ತದೆ' ಎಂದರು.

'ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, 
ಅಗತ್ಯಕ್ಕೆ ತಕ್ಕಂತೆ ಚಿನ್ನ ಖರೀದಿಸುವುದು ಒಳ್ಳೆಯದು. 10 ಗ್ರಾಂ ಚಿನ್ನದ ಮೇಲೆ ₹5 ಸಾವಿರ ಹಾಗೂ 1 ಕೆ.ಜಿ ಬೆಳ್ಳಿ ಖರೀದಿಗೆ ₹5 ಸಾವಿರ ರಿಯಾಯಿತಿ ನೀಡಲಾಗುತ್ತಿದೆ. ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಮೇಕಿಂಗ್ ಚಾರ್ಜ್ ಇರುವುದಿಲ್ಲ. ಒಂದು ಕ್ಯಾರೆಟ್ ಡೈಮಂಡ್ ಖರೀದಿಗೆ ₹ 10 ಸಾವಿರ ರಿಯಾಯಿತಿ ಫೆಬ್ರುವರಿ 10ರವರೆಗೆ ಇರುತ್ತದೆ' ಎಂದು ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಗ್‌ಬಾಸ್ ಸ್ಪರ್ಧಿಗಳಾದ ರಕ್ಷಿತಾ, ಅಶ್ವಿನಿ ಗೌಡ, ಕಾವ್ಯ, ರಘು, ಧನುಷ್ ಗೌಡ, ಸ್ಪಂದನ ಉಪಸ್ಥಿತರಿದ್ದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium