ಲ್ಯಾಂಡ್ ಲಾರ್ಡ್ ಸಿನಿಮಾ ಒಂದು ಅದ್ಬುತ ಕಥೆ, ಉಳ್ಳವರ ಮಾನಸಿಕ ಸ್ಥಿತಿ, ಮನೋಭಾವ ಅನಾವರಣ
ಧಣಿಗಳ ಕ್ರೌರ್ಯ, ಕ್ರೂರತೆ, ಮತ್ತು ಕಾರ್ಯಾಂಗ ವ್ಯವಸ್ಥೆಯಲ್ಲಿ ಕಠಿಣತೆಯ ಮುಂದೆ ಕೆಳವರ್ಗದ ಜನರ ಅಲ್ಪಬಲ, ಹಾಗೂ ನ್ಯಾಯಾಂಗ ಅಡಿಯಲ್ಲಿ ವಿಚಾರಣೆಗೆ ಸಿಕ್ಕಿ ಅಸಹಾಯಕನಾಗಿ ಕಾಣುವ ನಾಯಕನಟ,
ಹುಟ್ಟುಬಟ್ಟೆಗೆ, ಬದುಕಿಗೆ ಅಗತ್ಯವುಳ್ಳವ ಜನರು ಅನುಭವಿಸುವ ಕಠಿಣ ಸವಾಲು, ಜಟಿಲ ಜಂಜಾಟ, ಈ ಅಸಹಾಯಕದ ಕಥೆಯಲ್ಲಿ ತಮ್ಮವರೇ ತಮಗೆ ಶತ್ರುಗಳು ಎಂದು ತೋರಿಸುವ ವಿಭಿನ್ನವಾದ ದೃಶ್ಯಗಳು, ಇವೆಲ್ಲವನ್ನೂ ಅನುಭವಿಸಿ, ಎದೆಯೊಡ್ಡಿ ಮೆಟ್ಟಿ ನಿಲ್ಲುವ ನಾಯಕ ದುನಿಯಾ ವಿಜಯ್ (ರಾಚೆಯ್ಯನ ಪಾತ್ರ) ಅದಕ್ಕೆ ಸಾರಥಿಯಾಗಿ ನಾಯಕ ನಟಿ ರಚಿತಾ ರಾಮ್ (ನಿಂಗವ್ವನಾಗಿ) ತಂದೆ ತಾಯಿಗೆ ಸಾಥ್ ಕೊಡುವ ನಾಯಕ ನಟನ ಮಗಳು ಮೋನಿಕಾ ವಿಜಯ್ ( ಭಾಗ್ಯ ಪೊಲೀಸ್ ಕಾನ್ಸ್ಟೇಬಲ್ ನ ಪಾತ್ರದಲ್ಲಿ) ಇವೆಲ್ಲರ ಪಾತ್ರಗಳು ನಿಜಕ್ಕೂ ಅದ್ಬುತ ಹಾಗೂ ಇದು ಸಿನಿಮಾದ ಕಥೆಗೆ ಒಂದು ರೀತಿಯ ಪ್ಲಸ್ ಪಾಯಿಂಟ್,
ಈ ಸಿನಿಮಾದಲ್ಲಿರುವ ಪ್ರತಿಯೊಂದು ಸೀನ್ ಈ ಸಿನಿಮಾದ ಹೊಸ ಕಥೆಯನ್ನು ಹೇಳಲು ಪ್ರಾರಂಭಿಸುತ್ತದೆ, ನಾಯಕನಟ, ನಾಯಕಿ, ಮತ್ತು ನಾಯಕನ ಮಗಳು ತಮ್ಮಗಳ ಪಾತ್ರದಲ್ಲಿ ಹೋರಾಟಗಾರರಾಗಿ ಪರವರ್ತನೆ ಆಗುವುದು ಮತ್ತು ವ್ಯವಸ್ಥೆಯ ದಿಕ್ಕನ್ನು ಬದಲಾಯಿಸುಲು ಛಲ ತೊಡುವುದು, ಒಂದು ಸೂರಿಗಾಗಿ ಒಂದು ಇಡಿ ತುತ್ತಿಗಾಗಿ ಉಳ್ಳವರು ಇಲ್ಲದವರ ಮೇಲೆ ಮಾಡುವ ಸಂಘರ್ಷ, ಎರಡು ಎಕರೆ ಜಮೀನು ಪಡೆಯಲು ಉಮಾಶ್ರೀ ರವರ ಛಲ, ಮತ್ತು ಸವಾಲು, ಇವೆಲ್ಲದರ ದೃಶ್ಯ ಮತ್ತು ಅದರ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಪ್ರೇಕ್ಷಕರನ್ನು ಕುಂತಲ್ಲೇ ನೃತ್ಯ ಮಾಡುವಂತೆ ಮಾಡುತ್ತದೆ,
ದುನಿಯಾ ವಿಜಯ್ ರವರ ಪಾತ್ರದ ಮೊದಲ ಭಾಗದಲ್ಲಿ ಸ್ವಲ್ಪ ದುನಿಯಾ ಸಿನಿಮಾದ ರೀತಿಯಲ್ಲಿದ್ದ ಆ ಮೌನ, ಕರುಣೆ, ನೋಡ ನೋಡುತ್ತಲೇ ಉಗ್ರ ರೂಪ ತಾಳುವುದು ಮತ್ತು ಪ್ರತಿ ಮರವನ್ನು10 ಏಟಿನಲ್ಲಿ ಬೀಳಿಸುವಂಥ ಭೀಮನ ತಾಕತ್ತು ಬಹು ಪರಾಕ್ರಮಿ ಒಂದೊಂದು ಸೀನ್ ನಲ್ಲೂ ಅವರು ಪಾತ್ರಕ್ಕೆ ಪ್ರಾಣ ನೀಡಿದ್ದಾರೆ, ಮತ್ತು ಒಂದು ಗತ್ತಿನ ಪ್ರದರ್ಶನ ಮಾಡಿದ್ದಾರೆ.
ಇರುವವರು ಇಲ್ಲದವರನ್ನು ಕೆಲಸಗಳಿಗೆ ಬಳಸಿಕೊಳ್ಳುವುದು ಒಂದು ಹೊತ್ತಿನ ಊಟಕ್ಕೆ ಹಿಡಿ ರಾಗಿ ತೆನೆಗಳನ್ನು ಕೊಡುವುದು, ಜಮೀನುದಾರಿಕೆ ಪದ್ಧತಿ, ಜೀತಗಾರಿಕೆ ಪದ್ಧತಿಯ ಪ್ರತಿಯೊಂದು ದೃಶ್ಯ ಮನಕಲಕುವ ಹಾಗೆ ತೋರಿಸಿದ್ದಾರೆ ನಿರ್ದೇಶಕರು. ಕಠಿಣ ನಿರ್ಧಾರಗಳನ್ನ ಪ್ರಶ್ನಿಸಿ, ನಿಷ್ಪಕ್ಷಪಾತವನ್ನು ಎತ್ತಿ ಹಿಡಿಯುವವಲ್ಲಿ ಹೋರಾಟ ಮಾಡುವ ಜನರು, ಅದಕ್ಕೆ ಈ ಕಾರ್ಯಾಂಗ, ಶಾಸಕಾಂಗ, ಮತ್ತು ನ್ಯಾಯಾಂಗ ಎಂಬ ಅಂಶಗಳ ಅಡಿಯಲ್ಲಿ ಬದುಕುತ್ತಿರುವ ಬಡಬಲ್ಲ ಜನರಿಗೆ ಕಾನೂನಿನ ಅರಿವು, ಅದರ ಪ್ರಾಮುಖ್ಯತೆ, ಅದರ ಸದುಪಯೋಗದ ಪ್ರಕ್ರಿಯೆ ಮತ್ತು ಸಂವಿಧಾನದ ಪಾಠವೇ ಲ್ಯಾಂಡ್ ಲಾರ್ಡ್ ಸಿನಿಮಾ.
ನಿಜಕ್ಕೂ ನಿರ್ದೇಶಕ ಚಿತ್ರದ ಕಥೆಯನ್ನು ತುಂಬ ವಿಭಿನ್ನವಾಗಿ, ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ, ಏಕೆಂದರೆ ಸಿನಿಮಾ ನೋಡುವಾಗ ಕಥೆ ಪ್ರೇಕ್ಷಕನ ದೃಷ್ಟಿಯನ್ನು ಹಿರಿಯರ ಕಾಲಕ್ಕೆ ಕರೆದೊಯ್ಯುತ್ತದೆ ಹಾಗೂ ಅವರು ಪಟ್ಟ ಕಷ್ಟ, ನೋವುಗಳನ್ನು ನೆನಪಿಸುತ್ತದೆ, ಉಳ್ಳವರ ಕಾರ್ಯಗಳನ್ನು ಪರಿಚಯಿಸುತ್ತದೆ, ಇವೆಲ್ಲದರ ಮದ್ಯ ಕೆಲವೊಂದು ವಿಷಕಾರಿ ಪದ್ಧತಿ ಏನೆಂದರೆ? ಇಲ್ಲದವರು ಒಂದು ಅಡಿ ಜಮೀನು ಪಡೆಯಬಾರದು ಅವರು ಲ್ಯಾಂಡ್ಲಾರ್ಡ್ ಆಗಬಾರದು ಎನ್ನುವ ಡೈಲಾಗ್ಗಳ ಸುರಿಮಳೆಯಲ್ಲಿ ಸಾಯುವುದು ಅಥವಾ ಸಾಯಿಸುವುದು ಇಷ್ಟರ ಮಟ್ಟಿಗೆ ಇಲ್ಲದವರು ಕಷ್ಟ ಪಟ್ಟಿದ್ದಾರ ಎಂಬ ಕುತೂಹಲ ಮೂಡುತ್ತದೆ,
ಊರಿನ ಜಮೀನುದಾರ ರಾಜ್ ಬಿ ಶೆಟ್ಟಿಯವರ ನಟನೆ ಅವರ ಮುಂದಿನ ಸಿನಿಮಾಗಳ ಭವಿಷ್ಯಗಳನ್ನು ಹೆಚ್ಚಾಗಿಸಿದೆ ಅಂದರು ತಪ್ಪಾಗಲಾರದು, ಅಷ್ಟರ ಮಟ್ಟಿಗೆ ಅವರ ಪಾತ್ರದಲ್ಲಿ ಜೀವಿಸಿದ್ದಾರೆ, ಅವರ ನಟನೆ, ಡೈಲಾಗ್ಸ್ ಗೋಸ್ಕರವಾದರೂ ಇನ್ನೊಮ್ಮೆ ಸಿನಿಮಾ ನೋಡಬೇಕು ಅನ್ನುವಷ್ಟು ಅವರ ಪಾತ್ರಕ್ಕೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ,
ಒಟ್ಟಾರೆಯಾಗಿ, ಸಿನಿಮಾ ಕಥೆಯನ್ನು ಎಷ್ಟೇ ವಿವರಿಸಿದರೂ ಸಾಲಲ್ಲ ಏಕೆಂದರೆ ಪ್ರತಿಯೊಂದು ದೃಶ್ಯದಲ್ಲಿ ಮತ್ತೊಂದು ಸಿನಿಮಾ ಕಥೆ ಬರೆಯಬಹುದು ಆ ರೀತಿಯ ವಿನ್ಯಾಸವಿದೆ, ವಿಶಿಷ್ಟತೆವಿದೆ, ಧಣಿಗಳು, ಜಮೀನ್ದಾರರು ಉಳ್ಳವರು ರಾಜ ಪ್ರಭುತ್ವದ ಪಾಲಿಸುತ್ತಾರೆ ಹೊರತು ಸಂವಿಧಾನದ ಪ್ರಜಾಪ್ರಭುತ್ವವನ್ನು ಒಪ್ಪಲು ಸಿದ್ಧರಿಲ್ಲದ ವ್ಯವಸ್ಥೆಯಲ್ಲಿ ಬಡವರ ಜೀವನ ಕಠಿಣತೆಯಿಂದ ಕೂಡಿದ್ದರೂ ತಮ್ಮ ಜೀವಗಳನ್ನು ಪಣವಿಟ್ಟು ಕಾಪಾಡುವ ನಾಯಕನಟ ದುನಿಯಾ ವಿಜಿರವರ ಆಕ್ಟಿಂಗ್, ಲುಕ್, ಫೈಟ್ಸ್, ಡೈಲಾಗ್ಸ್ ಪ್ರೇಕ್ಷಕನ ಎದೆಯಲ್ಲಿ ಕುಂತು ಬಿಡುತ್ತದೆ.
ಲ್ಯಾಂಡ್ ಲಾರ್ಡ್ ಸಿನಿಮಾ ಒಂದು ಅದ್ಬುತ ಕಥೆ, ಉಳ್ಳವರ ಮಾನಸಿಕ ಸ್ಥಿತಿ, ಮನೋಭಾವ, ಚಿತ್ತವೃತ್ತಿ ಮತ್ತು ಮನೋವೃತ್ತಿ ಅವರ ದೃಷ್ಟಿಕೋನ ಹೇಗಿತ್ತು, ಜೀತದಾಳು ಹೇಗಿದ್ದ, ಒಂದು ಹಿಡಿ ಜಮೀನಿಗೆ ಒಂದು ಹಿಡಿ ತುತ್ತಿಗೆ ಹೇಗೆ ಪರದಾಡಿದರು, ಹೋರಾಡಿದರು, ಬದುಕಿದರು ಎಂಬುದರ ಬಗ್ಗೆ ಅತ್ಯುತ್ತಮವಾಗಿ ತೋರಿಸಿದ್ದಾರೆ, ಮೇಕಿಂಗ್ ಸಖತ್ ಪವರಪುಲ್ ಆಗಿದೆ, ಸ್ಟಂಟ್ಸ್ ಅಂತು ಎಕ್ಸಲೆಂಟ್ ಆಗಿದೆ,
ನನ್ನ ರೇಟಿಂಗ್ ಈ ಸಿನಿಮಾಗೆ 4.8/5 ಮತ್ತು ಈ ಲ್ಯಾಂಡ್ಲಾರ್ಡ್ ಸಿನಿಮಾ ಪ್ರತಿಯೊಬ್ಬರು ನೋಡಲೇಬೇಕು.
ಮುನಿರಾಜಪ್ಪ. ಎಂ
ಹಿರಿಯ ವರದಿಗಾರರು
ವಿ.ಎನ್.ಕೆ ಸ್ಟಾರ್ ನ್ಯೂಸ್
ಬೆಂಗಳೂರು
VNK STAR NEWS 24/7
Comments
Post a Comment