ಫೆಬ್ರವರಿ 12 ರಂದು ದೆಹಲಿ ಮಹಾಬೋಧಿ ಮುಕ್ತಿವಿಹಾರ ಆಂದೋಲನ; ರಾಜ್ಯದಿಂದ 10ಸಾವಿರ ಜನ ಭಾಗಿ

ಬೆಂಗಳೂರು ಫೆಬ್ರವರಿ 6, 2026:

 ಫೆಬ್ರವರಿ 12 ರಂದು ದೆಹಲಿ ಚಲೋ ಜಂತರ ಮಂಥರ್ ಮತ್ತು ರಾಮಲೀಲಾ ಮೈದಾನದಲ್ಲಿ ಜರುಗಲಿರುವ ಮಿಷನ್ ಮಹಾಭೋಧಿ ಮಹಾವಿಹಾರ ಮುಕ್ತಿ ಆಂದೋಲನ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಮಿಷನ್ ಮಹಾಬೋಧಿ ಮುಕ್ತಿ ಆಂದೋಲನದಲ್ಲಿ ಬಾಗವಹಿಸಲು ಬೀದರ ರೈಲ್ವೆ ನಿಲ್ದಾಣದಿಂದ 1,300 ಜನ ಪ್ರಯಾಣಿಸುತ್ತಿದ್ದು ಒಟ್ಟಾರೆಯಾಗಿ ಕರ್ನಾಟಕದಿಂದ 10 ಸಾವಿರ ಜನ ಬಾಗವಹಿಸಲಿದ್ದಾರೆ ನಳಂದ ಉಪಾಸಿಕಾ ಮತ್ತು ಉಪಾಸಕಾ ಚಾರಿಟೇಬಲ್ ಟ್ರಸ್ಟ್ ನ ಭಂತೆ ಬೋಧಿದತ್ತ ಥೇರ ತಿಳಿಸಿದರು

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಂದಾಚಾರ ಕರ್ಗತ್ತಲಿನಿಂದ ತುಂಬಿದ ವಿಶ್ವಕ್ಕೆ ಶಾಂತಿ, ಪ್ರೀತಿ, ಕರುಣೆ, ಬೇಳಕನ್ನು ನೀಡಿದ ಭಗವಾನ್ ಬುದ್ಧರ ಸ್ಥಳ, ಮತ್ತು ಸಾಮ್ರಾಟ್ ಅಶೋಕರು ನಿರ್ಮಿಸಿದ ವಿಶ್ವಖ್ಯಾತಿ ಮಹಾಸ್ತೂಪದ ಪಾವನ ಸ್ಥಳ, ಜಗತ್ತಿನ ಬೌದ್ಧರ ಪವಿತ್ರ ಕ್ಷೆ ತ್ರವಾದ ಬುದ್ಧಗಯಾದ ಮಹಾಬೋಧಿ, ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ಧರಿಗೆ ನೀಡದೆ ಬೋಧಗಯಾ ಟೆಂಪಲ್ ಆಕ್ಟ್ 1949 ಎಂಬ ಅಸಂವಿಧಾನಿಕ ಕಾನೂನು ಮೂಲಕ ಹಿಂದುಗಳ ನಿಯಂತ್ರಣಕ್ಕೆ ನೀಡಿ ಅನ್ಯಾಯ ಮಾಡಲಾಗಿದೆ.ಸ್ವಾತಂತ್ರ್ಯ ಪೂರ್ವಾದಿಂದ ನಡೆದ ಈ ಹೋರಾಟಕ್ಕೆ ಇನ್ನೂ ಜಯ ಸಿಕ್ಕಿಲ್ಲ. ಸಂವಿಧಾನದ ಕಲಂ 13, 25,26, 2 29 50ಅನುಷ್ಠಾನಕ್ಕಾಗಿ ಬಿಟಿ ಆ್ಯಕ್ಟ್ 1949 ರದ್ದುಗೊಳಿಸಿ ಬುದ್ಧ ಗಯಾದ ಮಹಾಬೋಧಿ, ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ಧರಿಗೆ ಒಪ್ಪಿಸಬೇಕು ಎಂದು ಹೇಳಿದರು

ಫೆಬ್ರವರಿ 12 ರಂದು "ದೆಹಲಿ ಚಲೋ ಮಿಷನ್ ಮಹಾಬೋಧಿ ಮಹಾವಿಹಾರ ಮುಕ್ತಿಗಾಗಿ" ದೇಶಾದ್ಯಾಂತ ಕರೆಕೊಟ್ಟಿದ್ದಾರೆ. ಆ ಅಂದು 1ಲಕ್ಷ ಬೌದ್ಧ ಅನುಯಾಯಿಗಳು ದೇಶದ ವಿವಿಧ ಸ್ಥಳಗಳಿಂದ ದೇಹಲಿಯಲ್ಲಿ ಸಾಗರೋಪಾದಿಯಲ್ಲಿ ಸೇರಲಿದ್ದಾರೆ ಮತ್ತು ಈ ಕಾರ್ಯಾಕ್ರಮದಲ್ಲಿ ಎಐಸಿಸಿ ರಾಷ್ಟ್ರೀಯ ಅದ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಪಕ್ಷದ ಅಗ್ರಗಣ್ಯ ನಾಯಕ ರಾಹುಲ್ ಗಾಂದಿಜಿಯವರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium