ಫೆಬ್ರವರಿ 6,7 ಮತ್ತು 8ರಂದು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ 'ಅಂತರರಾಷ್ಟ್ರೀಯ ವ್ಯಾಣಿಜ್ಯ ಮೇಳ' ಆಯೋಜನೆ

ಬೆಂಗಳೂರು ಫೆಬ್ರವರಿ 4,2026: 
ರೈತರನ್ನು ಕೃಷಿ ಉದ್ಯಮಿಗಳಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ,ಕೃಷಿ - ರೈತರ ಸಬಲೀಕರಣ" ಎಂಬ ವಿಶಿಷ್ಟ ಪರಿಕಲ್ಪನೆಯಡಿ "ಅಂತರರಾಷ್ಟ್ರೀಯ ವ್ಯಾಣಿಜ್ಯ ಮೇಳ 2026 ಇದೇ 6,7 ಮತ್ತು 8ರಂದು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ಎಂ.ಚೆಲುವರಾಯ ಸ್ವಾಮಿ, ಈ ವ್ಯಾಣಿಜ್ಯ ಮೇಳವನ್ನು ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಕೃಷಿ-ಪರಿಸರ ವಿಜ್ಞಾನ, ಬ್ಯಾಂಡಿಂಗ್ ಮತ್ತು ಸಾಲ ಸೌಲಭ್ಯ ಎಂಬ ಪ್ರಮುಖ ಉಪಕಲ್ಪನೆಗಳ ಮೇಲೆ ಕೇಂದ್ರೀಕರಿಸಲಿದೆ. ಸಣ್ಣ ಮಟ್ಟದ ಆಹಾರ ಸಂಸ್ಕರಣೆದಾರರು, ರೈತ
ಗುಂಪುಗಳು, ಸ್ವಸಹಾಯ ಗುಂಪುಗಳು ಹಾಗೂ ರೈತ ಉತ್ಪಾದಕ ಸಂಸ್ಥೆಗಳ ನಡುವೆ ಜಾಗೃತಿ ಮೂಡಿಸುವುದು ಮತ್ತು ಸಂಸ್ಕರಣೆ ಹಾಗೂ ಮೌಲ್ಯವರ್ಧನಾ ಉಪಕ್ರಮಗಳ ಪ್ರೋತ್ಸಾಹದ ಮೂಲಕ ರಾಜ್ಯದ ರೈತರನ್ನು ಉದ್ಯಮಿಗಳಾಗಿ ರೂಪಿಸುವುದಕ್ಕೆ ಸೂಕ್ತ ವೇದಿಕೆಯನ್ನು ಒದಗಿಸುವುದೇ ಪ್ರಧಾನ ಉದ್ದೇಶವಾಗಿದೆ ಎಂದರು.
 
ಈ ಸಮ್ಮೇಳನದಲ್ಲಿ ಜರ್ಮನಿ, ಅಮೇರಿಕಾ, ವಿಯೆಟ್ನಾಂ, ಕಾಂಬೋಡಿಯಾ ದೇಶಗಳ ಪ್ರತಿನಿಧಿಗಳು ಸೇರಿದಂತೆ 10 ಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಮತ್ತು 35 ಕ್ಕಿಂತಲೂ ಹೆಚ್ಚು ರಾಷ್ಟ್ರೀಯ ಪ್ರಖ್ಯಾತ ಉಪನ್ಯಾಸಕರು ಸೇರಿದಂತೆ ಒಟ್ಟು 45 ತಜ್ಞರು ಹಾಗೂ ವೃತ್ತಿಪರರು ಮಾಹಿತಿ ನೀಡಲಿದ್ದಾರೆ.ಸಮ್ಮೇಳನದಲ್ಲಿ ಸರ್ಕಾರಿ ಇಲಾಖೆಗಳು, ಸಂಶೋಧನಾ ಹಾಗೂ ಶೈಕ್ಷಣಿಕ ಸಂಸ್ಥೆಗಳು, ರೈತರು, ರೈತ ಉತ್ಪಾದಕ ಸಂಘಗಳ ಪ್ರತಿನಿಧಿಗಳು, ಉದ್ಯಮಿಗಳು, ಅಂತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಗಳು, ಅಭಿವೃದ್ಧಿ ಸಂಸ್ಥೆಗಳು, ಮಹಿಳಾ ನೇತೃತ್ವದ ಉದ್ಯಮಗಳು ಮತ್ತು ನವೋದ್ಯಮಗಳು ಪ್ರತಿನಿಧಿಗಳಾಗಿ ಪಾಲ್ಗೊಳ್ಳಲಿದ್ದಾರೆ ಹಿರಿಯ ನೀತಿ ನಿರ್ಣಾಯಕರು, ವಿಜ್ಞಾನಿಗಳು, ಉದ್ಯಮಿಗಳು, ಹಾಗೂ ವಿದ್ಯಾರ್ಥಿಗಳು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷಿ ಪಂಡಿತ್ ಪ್ರಶಸ್ತಿ ಮತ್ತು ಕೃಷಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು,ಕೃಷಿ ಕ್ಷೇತ್ರದಲ್ಲಿ ವಿಶೇಷ ನವೀಕರಣಗಳು, ಅನನ್ಯ ಸಾಧನೆಗಳು ಹಾಗೂ ಸೃಜನಾತ್ಮಕ ಉಪಕ್ರಮಗಳ ಮೂಲಕ ಕೃಷಿ ಸಮುದಾಯದ ಕಲ್ಯಾಣಕ್ಕೆ ಮಹತ್ತರ ಕೊಡುಗೆ ನೀಡಿದ ಪರಿಣತ ಕೃಷಿಕರನ್ನು ಗುರುತಿಸಿ ಗೌರವಿಸಲು, ರೈತರಿಗೆ ನಗದು ಬಹುಮಾನಗಳೊಂದಿಗೆ ಕೃಷಿ ಪಂಡಿತ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು,



 ರೈತರ ಪರಿಶ್ರಮ ಪ್ರಯತ್ನವನ್ನು ಪ್ರೋತ್ಸಾಹಿಸಲು ಮತ್ತು ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಉತ್ತೇಜಿಸಲು, ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಆಯ್ದ ಬೆಳೆಗಳಲ್ಲಿ ಅತ್ಯಧಿಕ ಇಳುವರಿ ಸಾಧಿಸಿದ ರೈತರಿಗೆ ಕೃಷಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಈ ಪ್ರಶಸ್ತಿ ಕಾರ್ಯಕ್ರಮದಡಿ ಒಟ್ಟು 122 ಕೃಷಿಕರು ಮತ್ತು ರೈತ ಮಹಿಳೆಯರನ್ನು ಗೌರವಿಸಲಾಗುವುದು. ಇದರಲ್ಲಿ 18 ಕೃಷಿ ಪಂಡಿತ ಪ್ರಶಸ್ತಿ ಮತ್ತು 104 ಕೃಷಿ ಪ್ರಶಸ್ತಿ ವಿಜೇತರು ಪ್ರಶಸ್ತಿ ಪಡೆಯಲಿದ್ದಾರೆ,ಮೂರು ದಿನದ ಅಂತರರಾಷ್ಟ್ರೀಯ ವಾಣಿಜ್ಯ ಮೇಳವು ಈ ಕೆಳಗಿನ ಕಾರ್ಯಕ್ರಮಗಳನ್ನು ಒಳಗೊಂಡಿದೆ,300 ಕ್ಕೂ ಹೆಚ್ಚು ಹವಾನಿಯಂತ್ರಿತ ಮಳಿಗೆಗಳು, ಪ್ರಮುಖ ಸಂಶೋಧನಾ ಸಂಸ್ಥೆಗಳು, ಮಾರುಕಟ್ಟೆದಾರರು, ರಫ್ತುದಾರರು, ಚಿಲ್ಲರೆ ಮಾರಾಟಗಾರರು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಸಾವಯವ ಪರಿಕರಗಳ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ವಸ್ತು. ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ ಎಂದು ಹೇಳಿದರು.

ರೈತ ಗುಂಪುಗಳು, ರೈತ ಉತ್ಪಾದಕ ಗುಂಪುಗಳು, ಪ್ರಾದೇಶಿಕ ಸಾವಯವ ಒಕ್ಕೂಟಗಳು, ರೈತ ಉದ್ಯಮಿಗಳು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಕೃಷಿ ವಿಶ್ವವಿದ್ಯಾಲಯಗಳು, ಕೇಂದ್ರ ಸಂಸ್ಥೆಗಳು ಇತ್ಯಾದಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ, ಈ ಕಾರ್ಯಾಗಾರದಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಕೃಷಿ ಪರಿಸರ ವಿಜ್ಞಾನ ಮತ್ತು ಬ್ರಾಂಡಿಂಗ್‌ ಪ್ರಾಮುಖ್ಯತೆ ಮತ್ತು ಸಾಲ ಸೇವೆಗಳ ಅಡಿಯಲ್ಲಿ ಇತ್ತೀಚಿನ ಬೆಳವಣಿಗೆಗಳು, ಉತ್ತಮ ಪದ್ಧತಿಗಳು ಮತ್ತು ತಂತ್ರಜ್ಞಾನದ ಕುರಿತು ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ.
ಮೂರು ದಿನಗಳ ಮೇಳದ ಅವಧಿಯಲ್ಲಿ ವಿವಿಧಮಳಿಗೆಗಳಲ್ಲಿ ವೈವಿದ್ಯಮಯ ಮತ್ತು ರುಚಿಕರವಾದ ಸಾವಯವ ಹಾಗೂ ಸಿರಿಧಾನ್ಯಗಳ ಆಹಾರ ಸೇರಿದಂತೆ, ಉಪಹಾರಗಳನ್ನು ಸವಿಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium