'ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ' ಪದಾಧಿಕಾರಿಗಳಿಂದ ಪತ್ರಿಕಾಗೋಷ್ಠಿ

ಬೆಂಗಳೂರು ನಗರದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ಸುಮಾರು 11 ಸಾವಿರ ಸದಸ್ಯರೊಂದಿಗೆ ರೂ. 26 ಕೋಟಿ ಷೇರು ಬಂಡವಾಳ ಹೊಂದಿದೆ.

ಜನವರಿ 2026ರ ಅಂತ್ಯಕ್ಕೆ ಬ್ಯಾಂಕಿನ ಠೇವಣಿ ರೂ.478 ಕೋಟಿಗಳಷ್ಟಿದ್ದು, ರೂ.336 ಕೋಟಿ ಸಾಲ ವಿತರಿಸಲಾಗಿದೆ. ಬ್ಯಾಂಕಿನ ಒಟ್ಟು ಹೂಡಿಕೆಗಳು ರೂ. 204 ಕೋಟಿಗಳಷ್ಟಿದ್ದು, ಇದರಲ್ಲಿ ಶೇ.68% ರಷ್ಟನ್ನು ಸರ್ಕಾರಿ ಹೂಡಿಕೆಗಳಲ್ಲಿ ತೊಡಗಿಸಲಾಗಿದೆ. ಬ್ಯಾಂಕಿನ ಒಟ್ಟಾರೆ ರೂ.814 ಕೋಟಿಗಳಷ್ಟು ವ್ಯವಹಾರ ಹೊಂದಿದೆ ಹಾಗೂ 2024-25 ನೇ ಸಾಲಿನಲ್ಲಿ ರೂ.8.07 ಕೋಟಿಗಳ ನಿವ್ವಳ ಲಾಭಗಳಿಸಿದೆ.

ಮಾರ್ಚ್ 2025ರ ಅಂತ್ಯಕ್ಕೆ ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿಯ ಪ್ರಮಾಣ ಶೇ.1.25 ರಷ್ಟಿದ್ದು (Gross NPA) ಹಾಗೂ ಸತತ ಮೂರು ವರ್ಷಗಳಿಂದ ಶೂನ್ಯ ನಿವ್ವಳ ನಿಷ್ಕ್ರಿಯ ಆಸ್ತಿಗಳನ್ನು (Net NPA) ಹೊಂದಿದೆ.

motor, Phonepay, Google pry, POS ಇ- ಕಾಮರ್ಸ್‌ಗಳೊಂದಿಗೆ ಎಲ್ಲಾ ರೀತಿಯ ಡಿಜಿಟಲ್ ಪೇಮೆಂಟ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಲ್ಲದೇ ಬ್ಯಾಂಕ್ RTGS/NEFT, ATM ಕಾರ್ಡ್, ಲಾಕರ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ರಾಜ್ಯದ ಪ್ರಮುಖ ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಆಡಳಿತ ಮಂಡಳಿಗೆ ಆಯ್ಕೆ:

ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ಇದರ ಆಡಳಿತ ಮಂಡಲಿಗೆ ಮುಂದಿನ 2026-2031ರ ಐದು ವರ್ಷಗಳ ಅವಧಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲಾ 13 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಶ್ರೀ. ಸದಾಶಿವ ರೆಡ್ಡಿ ಮತ್ತು ಉಪಾಧ್ಯಕ್ಷರಾಗಿ ಶ್ರೀ. ಸಿ. ಚೆನ್ನಾ ರೆಡ್ಡಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬ್ಯಾಂಕಿನ ಆಡಳಿತ ಮಂಡಳಿಯು ಸತತವಾಗಿ ಮೂರನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.

ನೂತನ ಶಾಖೆ ಪ್ರಾರಂಭ :

ಈಗಾಗಲೇ ಬ್ಯಾಂಕಿನ ಎಂಟು ಶಾಖೆಗಳು ವಿ.ವಿ.ಪುರಂ, ಬೊಮ್ಮನಹಳ್ಳಿ, ಮಾರತ್ತಹಳ್ಳಿ, ರಘುವನಹಳ್ಳಿ, ಅರೆಕೆರೆ, ಮರಸೂರು, ಹೆಸರಘಟ್ಟ ಮತ್ತು ಆಮೃತಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಗಡಿ ಭಾಗದ ಗ್ರಾಮೀಣ ಪ್ರದೇಶದಲ್ಲಿ ನೂತನ ಶಾಖೆಯನ್ನು ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು, ತಿರುಮಣಿ ಗ್ರಾಮದಲ್ಲಿ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium