ಶ್ರೀಗಂಧ ಮರಗಳ ಮಾಲ್ಕಿ ಮೌಲ್ಯ ಅವೈಜ್ಞಾನಿಕವಾಗಿ ನಿಗದಿಗೆ ಶ್ರೀ ಗಂಧ ರೈತರ ವಿರೋಧ.

ಬೆಂಗಳೂರು ಫೆಬ್ರವರಿ 13, 2026: 

ಶ್ರೀಗಂಧ ಮರಗಳ ಮಾಲ್ಕಿ ಮೌಲ್ಯವನ್ನು ಅವೈಜ್ಞಾನಿಕವಾಗಿ ನಿಗದಿಪಡಿಸಿರುವುದು ಸರಿಯಲ್ಲ, ಮೌಲ್ಯ ನಿರ್ಧರಣೆಯಲ್ಲಿ ರೈತರಿಗೆ ತಾರತಮ್ಯ ಮಾಡಲಾಗಿದ್ದು ಅನೇಕ ವರ್ಷಗಳ ಕಾಲ ಶೋಷಣೆ ಮಾಡಿರುವುದರ ಕುರಿತು ಸಿ ಬಿ ಐ ತನಿಖೆ ನಡೆಸಬೇಕೆಂದು ಅಖಿಲ ಕರ್ನಾಟಕ ಶ್ರೀ ಗಂಧ ಮತ್ತು ವನಕೃಷಿ ಬೆಳಗಾರರ ಸಂಘ ಆಗ್ರಹಿಸಿದೆ.

ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರ ನಾರಾಯಣ,ಕೇಂದ್ರ ಸರ್ಕಾರ ಹೊರಡಿಸಿರುವ ಶ್ರೀಗಂಧ ಅಭಿವೃದ್ಧಿ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವುದು ಶ್ರೀಗಂಧ ಮರವನ್ನು ಕೃಷಿ ಉತ್ಪನ್ನವೆಂದು ಘೋಷಿಸಿರುವುದರಿಂದ ಶ್ರೀಗಂಧ ಬೆಳೆಯ ಸಮರ್ಥ ನಿರ್ವಹಣೆಗೆ ತೋಟಗಾರಿಕೆ ಇಲಾಖೆಗೆ ವಹಿಸುವುದು, ತೋಟಗಾರಿಕೆ ಇಲಾಖೆ ಮುಖಾಂತರ ವೈಜ್ಞಾನಿಕವಾಗಿ ಶ್ರೀಗಂಧ ಮರಗಳಿಗೆ ಮಾಲ್ಕಿ ದರ ನಿಗದಿಪಡಿಸಬೇಕು,ಮಾರ್ಚ್ 31ರೊಳಗೆ ಸಂಘದ ಬೇಡಿಕೆಗಳನ್ನು ಈಡೇರಿಸಬೇಕು ತಪ್ಪಿದಲ್ಲಿ ಶ್ರೀಗಂಧ ಬೆಳೆಗಾರರು ಅರಣ್ಯ ಇಲಾಖೆಯ ಯಾವುದೇ ನಿಯಮ ಮತ್ತು ಆದೇಶಗಳನ್ನು ಧಿಕ್ಕರಿಸಿ, ತಮ್ಮ ಉತ್ಪನ್ನಗಳನ್ನು ತಾವೇ ಸ್ವತಂತ್ರವಾಗಿ ಇತರೆ ಕೃಷಿ ಬೆಳೆಗಳಂತೆ ನಿಭಾಯಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ಮಾಫಿಯಾ ಮುಖಾಂತರ ವ್ಯವಸ್ಥಿತವಾಗಿ ನಡೆಯುತ್ತಿರುವ ಶ್ರೀಗಂಧ ಮರಗಳ ಕಳ್ಳತನಗಳ ಬಗ್ಗೆ, ರಾಜ್ಯ ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಿಸಿರುವ ಕಳ್ಳರನ್ನು ಮತ್ತು ಕಳ್ಳ ಮಾಲನ್ನು ಪಡೆಯುತ್ತಿರುವವರನ್ನು ನಿಗ್ರಹಿಸಲು ಸಿ ಬಿ ಐ ತನಿಖೆಗೆ ವಹಿಸಬೇಕು, ಮೇ27 2025ರಂದು ಜರುಗಿದ ಸಭೆಯಲ್ಲಿ ಅರಣ್ಯ ಸಚಿವರು ಗೃಹ ಸಚಿವರೊಡನೆ ಸಮಾಲೋಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು, ಇದುವರೆವಿಗೂ ಕ್ರಮ ವಹಿಸದೆ ಶ್ರೀಗಂಧ ಮರಗಳ ಕಳ್ಳತನ ಪ್ರಕರಣಗಳ ಹೆಚ್ಚಳಕ್ಕೆ ಕಾರಣೀಭೂತರಾಗಿದ್ದಾರೆ, ಅರಣ್ಯ ಸಚಿವರು ನೀಡಿದ ಆಶ್ವಾಸನೆಯನ್ನು ಪಾಲಿಸದಿರುವುದು ಶ್ರೀಗಂಧ ಕಳ್ಳರ ಮಾಫಿಯಾಗೆ ಅನುಕೂಲವಾಗಿದೆ ಮತ್ತು ರೈತರಿಗೆ ಮುಳುವಾಗಿದೆ ಎಂದರು.

ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಆಶಯಗಳಂತೆ, ರೈತರೇ ಮೌಲ್ಯ ವರ್ಧನೆ ಮಾಡಿ, ಆದಾಯ ದ್ವಿಗುಣಗೊಳಿಸುವ ಹಾಗೂ ಸುಸ್ಥಿರ ವರಮಾನಕ್ಕಾಗಿ ರೈತರಿಂದ, ರೈತರಿಗಾಗಿ ಮತ್ತು ರೈತರಿಗೋಸ್ಕರ ನೇರವಾಗಿ ಸಂಘವು ಶ್ರೀಗಂಧದ ಮಾರಾಟದ ವ್ಯವಸ್ಥೆಯನ್ನು ಮಾಡುತ್ತಿದೆ. ಸಂಘವು ಪ್ರಥಮ ಭಾರಿಗೆ ಶ್ರೀಗಂಧ ಮರದ ಮೂಲದ ಪ್ರಮಾಣ ಪತ್ರ ಪಾರದರ್ಶಕತೆಗೆ ಮುನ್ನುಡಿ ಬರೆದಿರುತ್ತದೆ. ಶ್ರೀಗಂಧ ಬೆಳೆಗಾರರ ಪ್ರಾಮಾಣಿಕತೆಗೆ ಇದೊಂದು ಸಾಕ್ಷಿಯಾಗಿದೆ. "ಮನೆ ಬಾಗಿಲಿಗೆ ಶ್ರೀಗಂಧ - ಶ್ರೀ ಸಾಮಾನ್ಯನಿಗೆ ಶ್ರೀಗಂಧ" ಘೋಷವಾಕ್ಯದಡಿ ಶ್ರೀಗಂಧ ಮೌಲ್ಯವರ್ಧನೆ ಹಾಗೂ ಮಾರಾಟದ ವ್ಯವಸ್ಥೆಯನ್ನು ಫೆಬ್ರವರಿ 6ರಿಂದ8ರವರೆಗೆ ಜರುಗಿದ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ. ಇದೇ ಮಾನದಂಡಗಳನ್ನು ಅರಣ್ಯ ಇಲಾಖೆಯು ತನ್ನ ಎಲ್ಲಾ ವ್ಯಾಪಾರ ವಹಿವಾಟುಗಳಲ್ಲಿ ಅನುಸರಿಸಲು ಕ್ರಮ ವಹಿಸ ಬೇಕು ಎಂದು ಹೇಳಿದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium