ಬೆಂಗಳೂರಿನ ಸರ್ಕಾರಿ ಸರ್ಕಾರಿ ನೌಕರರ ಸಭಾಂಗಣ ಕ್ಲಬ್‌ ನಲ್ಲಿ "ಶೋಷಿತ ಸಮುದಾಯಗಳ ವಿಮೋಚನಾ ದಿನ" ಆಚರಣೆ ಮಾಡಲಾಯಿತು.


ಬೆಂಗಳೂರಿನ ಸರ್ಕಾರಿ ಸರ್ಕಾರಿ ನೌಕರರ ಸಭಾಂಗಣ ಕ್ಲಬ್‌ ನಲ್ಲಿ "ಶೋಷಿತ ಸಮುದಾಯಗಳ ವಿಮೋಚನಾ ದಿನ" ಆಚರಣೆ ಮಾಡಲಾಯಿತು.

  ಈ ಕಾರ್ಯಕ್ರಮದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ, ಬಿ.ಕೃಷ್ಣಪ್ಪ ಟ್ರಸ್ಟ್ ಮುಖ್ಯಸ್ಥೆ ಇಂದಿರಾಕೃಷ್ಣಪ್ಪ ಅವರು ಉಪಸ್ಥಿತರಿದ್ದರು. 
ದಸಂಸ ರಾಜ್ಯ ಪ್ರಧಾನ ” ಸಂಚಾಲಕ ಮಾವಳ್ಳಿ ಶಂಕರ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. 

ಈ ಕಾರ್ಯಕ್ರಮದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿದರು. ವೈಯಕ್ತಿಕ ಜೀವನ ಎಂಬುದು ಮನುಷ್ಯನಿಗೆ ಸಹಜವಾಗಿ ಇರುವ ಮೊದಲ ಆದ್ಯತೆ. ಅದರಲ್ಲೂ ಕುಟುಂಬ ಎಂಬ ಸಮಾಜದ ಮೂಲ ಘಟಕವನ್ನು ನಿರ್ವಹಿಸುವಲ್ಲಿ ದೇಶದ ಮಹಿಳೆಯರ ಪಾತ್ರವೂ ದೊಡ್ಡದು.

ಆದರೆ ದೇಶದ ಎಲ್ಲಾ ಜನರ ಬದುಕನ್ನು ಹಸನಾಗಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದ ದೇಶದ ಸಂವಿಧಾನ ಮತ್ತು ಇಲ್ಲಿನ ಶೋಷಿತರ ಬದುಕಿನ ಏಳಿಗೆಗಾಗಿ ಬಾಬಾ ಸಾಹೇಬರು ಮಾಡಿದ ಅಧ್ಯಯನ ಮತ್ತು ಪ್ರಯತ್ನಗಳ ಹಿಂದೆ ಇದ್ದವರೇ ಮಾತೆ ರಮಾ ಬಾಯಿ ಅವರು.

ಅಪೌಷ್ಟಿಕತೆ, ರಕ್ತ ಹೀನತೆ ಮತ್ತು ಇನ್ನಿತರೆ ಸಮಸ್ಯೆಗಳ ಕಾರಣಕ್ಕೆ ತಮ್ಮ ಮಕ್ಕಳು ತೀರಿ ಹೋದಂತಹ ದುಃಖಕರ ಸಂದರ್ಭವನ್ನೂ ಸಹ ಗಂಡನೊಡನೆ ಹಂಚಿಕೊಳ್ಳದೇ ಎಲ್ಲರ ಬದುಕಿಗಾಗಿ ಪ್ರಯತ್ನಿಸಿ ಎಂಬ ಮಹಾನ್‌ ತ್ಯಾಗವನ್ನು ಮಾಡಿದವರು ರಮಾಬಾಯಿ ಎಂದು 
ಸಚಿವ ಎಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium