ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘಕ್ಕೆ ನೂತನ ರಾಜ್ಯಾಧ್ಯಕ್ಷರಾಗಿ ಶ್ರೀಮತಿ ಶೈಲಾ ಕೆ.ಡಿ ಆಯ್ಕೆ
ಬೆಂಗಳೂರು, ಫೆಬ್ರವರಿ 17, 2026
ಹಿಂದಿನ ರಾಜ್ಯಾಧ್ಯಕ್ಷರ ರಾಜೀನಾಮೆಯಿಂದ ತರವಾದ ಸ್ಥಾನಕ್ಕೆ ನಡೆದ ಆಯ್ಕೆಯಲ್ಲಿ ನೂತನ ರಾಜ್ಯಾಧ್ಯಕ್ಷರಾಗಿ ಶ್ರೀಮತಿ ಶೈಲಾ ಕೆ.ಡಿ. ರವರನ್ನು ಇಂದು ನಡೆದ ರಾಜ್ಯ ಪರಿಷತ್ ಸಭೆಯಲ್ಲಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಇಂದಿನ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಉಪಾಧ್ಯಕ್ಷರಾದ ಶ್ರೀ ಜಿ. ನೀಲಕಂಠ ಸ್ವಾಮಿರವರು ಸುದ್ದಿ ಗೋಷ್ಠಿಯಲ್ಲಿ ಘೋಷಿಸಿದರು ದಿನಾಂಕ:28-02-2026ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಜರುಗುವ ರಾಜ್ಯ ಪರಿಷತ್ ಸಭೆಯಲ್ಲಿ ನೂತನ ರಾಜ್ಯಾಧ್ಯಕ್ಷರ ಪದಗ್ರಹಣದ ಕಾರ್ಯಕ್ರಮ ಮಾಡುವ ಬಗ್ಗೆ ತೀರ್ಮಾನಿಸಲಾಗಿರುವದರ ಮತ್ತು ವಿವಿದ ಬೇಡಿಕೆಗಳ ಬಗ್ಗೆ ಚರ್ಚಿಸಲು ಕರೆದಿರುವ ಮಹತ್ವದ ಸಭೆಗೆ ಸಂಘದ ಸರ್ವ ಪದಾಧಿಕಾರಿಗಳು, ನಿರ್ದೇಶಕರು ಸದಸ್ಯರುಗಳು, ಹಾಜರಾಗಲು ರಾಜ್ಯ ಜಂಟಿ ಕಾರ್ಯದಶಿಗಳಾದ ಶ್ರೀಲಾಲ್ ಸಾಬ್ ಎಂ ಮನಿಯಾರ್ ರವರು ಕರೆ ನೀಡಿದರು.
ನೂತನ ರಾಜ್ಯಾಧ್ಯಕ್ಷರ ಗುರಿ ಮತ್ತು ಸವಾಲುಗಳು
1. ನೆನಗುದಿಗೆ ಬಿದ್ದಿರುವ ಪೌರಸೇವಾ ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕಳೆದ 16 ವರ್ಷಗಳು ಗತಿಸಿದ್ದರು ಸಹ ಮುನಿಸಿಪಲ್ ವೃಂದದ ಮತ್ತು ನೇಮಕಾತಿ (C& R) ತಿದ್ದು ಪಡಿ ಮಾಡವ ವಿಚಾರ
2. ಕುಟುಂಬ ಕಲ್ಯಾಣ ನಿಧಿಯಿಂದ (FBF) -GIS ಗೆ ಒಳಪಡಿಸುವುದು.
3. ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ KGID ಯನ್ನು ಮುನಿಸಿಪಲ್ ನೌಕರರಿಗೂ ಜಾರಿಗೆ ತರುವುದು.
4. ದಿನಗೂಲಿ ಸಕ್ರಮಾತಿ/ ಸಮಾನ ಕೆಲಸಕ್ಕೆ ಸಮಾನ ವೇತನ/ನೀರು ಸರಬರಾಜು ಆಪರೇಟರ್ಸ್ ಗಳನ್ನು ಸಕ್ರಮಾತಿಗೆ ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸುವುದು.
5. ವೃಂದದ ಮತ್ತು ನೇಮಕಾತಿ (C& R) ಸೆಕ್ಷನ್ 11 ರಲ್ಲಿನ ಎಲ್ಲಾ ಕಾಯ್ದೆಗಳು ಮುನಿಸಿಪಲ್ ನೌಕರರಿಗೂ ಅನ್ವಯಿಸುತ್ತದೆ ಎಂಬುದಾಗಿ ಸ್ಪಷ್ಟವಾಗಿ ತಿಳಿಸಲಾಗಿದ್ದರು ಸಹ ನೌಕರರು ಶಿಸ್ತು ಕ್ರಮಕಷ್ಟೆ KCSR ಸೀಮಿತಗೊಳಿಸಿ ಯಾವುದೇ ಸೌಲಭ್ಯಗಳನ್ನು ವಿಸ್ತರಿಸಬೇಕಾದ್ದಲ್ಲಿ ಪ್ರತ್ಯೇಕ ಆದೇಶ ಹೊರಡಿಸಬೇಕಾದಂತಹ ಪದ್ಧತಿ ಇನ್ನೂ ನಡೆಯುತ್ತಿದ್ದ ಇದರ ಬದಲಾಗಿ KCSR ನಿಯಾಮವಳಿಯನ್ವಯ ಎಲ್ಲಾ ಸೌಲಭ್ಯಗಳನ್ನು ಯತ್ತವತ್ತಾಗಿ ಮುನಿಸಿಪಲ್ ನೌಕರರಿಗೂ ಜಾರಿಗೊಳಿಸುವುದು.
6. ಮುನಿಸಿಪಲ್ ಪರಿಗಣಿಸಬೇಕು ನೌಕರರನ್ನು రాజ్య ಸರ್ಕಾರಿ ನೌಕರರೆಂದು
7. ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸುವುದು.
Comments
Post a Comment