ನೇಮಕಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸದಿರುವುದನ್ನು ವಿರೋಧಿಸಿ ಬಗ್ಗೆ ಉಗ್ರ ಹೋರಾಟ ಮಾಡುವುದಾಗಿ ಡಾ|| ಎನ್.ಮೂರ್ತಿ ಅವರು ಎಚ್ಚರಿಕೆ ನೀಡಿದರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಬಿ) ರಾಷ್ಟೀಯ ಅಧ್ಯಕ್ಷರಾದ ಡಾ|| ಎನ್.ಮೂರ್ತಿ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ನೇಮಕಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸದಿರುವುದನ್ನು ವಿರೋಧಿಸಿ ಬಗ್ಗೆ ಉಗ್ರ ಹೋರಾಟ ಮಾಡುವುದಾಗಿ ಡಾ|| ಎನ್.ಮೂರ್ತಿ ಅವರು ಎಚ್ಚರಿಕೆ ನೀಡಿದರು. 

ಪರಿಶಿಷ್ಟರ ಮೀಸಲಾತಿ 101 ಪರಿಶಿಷ್ಟ ಜಾತಿಗಳ ನಡುವೆ ಸಮಾನವಾಗಿ ಹಂಚಿಕೆಯಾಗಿಲ್ಲ. ಆದ್ದರಿಂದ ಮೀಸಲಾತಿಯನ್ನು ವರ್ಗೀಕರಣ ಮಾಡಬೇಕು ಎಂದು ಮಾದಿಗ ಮತ್ತು ಸಂಭಂದಿತ ಜಾತಿಗಳು ಕಳೆದ 35 ವರ್ಷಗಳಿಂದ ನಿರಂತರ ಹೋರಾಟ ನಡೆಸಿವೆ. ಈ ಹೋರಾಟಕ್ಕೆ ಮಣಿದು ಸುಪ್ರೀಂಕೋರ್ಟ್‌ನ 7 ಜನ ನ್ಯಾಯಾದೀಶರ ಪೀಠ ವರ್ಗೀಕರಣಕ್ಕೆ ತೀರ್ಪು ನೀಡಿತು. ಈ ತೀರ್ಪನ್ನು ಪರಿಗಣಿಸಿ ರಾಜ್ಯ ಸರ್ಕಾರ ರಚಿಸಿದ ಗೌರವಾನ್ವಿತ ನ್ಯಾಯ ಮೂರ್ತಿ ನಾಗಮೋಹನ್‌ದಾಸ್ ಆಯೋಗ ವರದಿಯ ಶಿಫಾರಸ್ಸುಗಳನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರ 'ಎ'-ಮಾದಿಗ ಮತ್ತು ಸಂಬಂಧಿತ ಶೇ.6%, 'ಬಿ' ಹೊಲೆಯ ಮತ್ತು ಸಂಬಂಧಿತ ಶೇ.6%, 'ಸಿ'- '- ಸ್ಪೃಶ್ಯ ಮತ್ತು ಜಾತಿಗಳು ಶೇ.5%, ಒಟ್ಟು ಮೀಸಲಾತಿ ಶೇ.17% ಎಂದು ವಗೀಕರಿಸಿ ವಿಧೇಯಕ ಸಹ ತಂದಿತು.

ರಾಜಕೀಯ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಮಾನ್ಯ ಶ್ರೀ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಗೌರವಾನ್ವಿತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಗೆ ವೈತಿರಿಕ್ತ ನಡೆಯು ಹೈಕೋರ್ಟ್ ಮೆಟ್ಟಿಲೇರಿತು. ಇದನ್ನೆ ಅಸ್ತ್ರವಾಗಿಸಿಕೊಂಡ ವರ್ಗೀಕರಣದ ವಿರೋದಿಗಳು ಧಾರವಾಡ ಇತರೆ ಕಡೆ ಉದ್ಯೋಗಕಾಂಕ್ಷಿಗಳನ್ನು ಎತ್ತಿ ಕಟ್ಟಿ ಹೋರಾಟ ನಡೆಸಲು ಪರೋಕ್ಷ ಬೆಂಬಲ ನೀಡಿ ವರ್ಗೀಕರಣದ ಎಲ್ಲಾ ಆದೇಶವನ್ನು ಮಣ್ಣುಗೂಡಿಸಿದ್ದಾರೆ.

ರಾಜ್ಯದಲ್ಲಿ ಕಳೆದ ವರ್ಷಗಳಲ್ಲಿ 40 ಸಾವಿರಕ್ಕೂ ಹೆಚ್ಚು ಉದ್ಯೋಗ ನೇಮಕಾತಿಗಳು ವಗೀಕರಣವಿಲ್ಲದೆ ಸ್ವಚ್ಚಚಾರವಾಗಿ ನಡೆದಿವೆ. ರಾಜ್ಯದಲ್ಲಿ ಹಾಲಿ 2.85 ಲಕ್ಷ ಹುದ್ದೆಗಳು ಖಾಲಿ ಇವೆ. ಇದರಲ್ಲಿ 56,432 ಉದ್ಯೋಗಗಳನ್ನು ಜರೂರಾಗಿ ಹಳೇ ಮೀಸಲಾತಿ ಅನುಸರಿಸಿ

ನೀಡಲಿ. ಆದರೆ ಕೂಡಲೇ ಕೋರ್ಟ್‌ಗೆ ಮನವರಿಕೆ ಮಾಡಿ ನೇಮಕಾತಿ ಮಾಡಲಿ. ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳುವ ಮೊದಲು ಒಳಮೀಸಲಾತಿ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂಬುದು ಮೋಸ ಹಾಗೂ ವಂಚಿಸುವ ರಾಜಕೀಯ ದಾಳವಾಗಿದೆ.

ಶೇ.17% ರಷ್ಟು ಮೀಸಲಾತಿ ಪ್ರಮಾಣದಲ್ಲಿ ವರ್ಗೀಕರಣ ವಿಧೇಯೆಕದಂತೆ ಉದ್ಯೋಗ ನೇಮಕಾತಿ ಮಾಡಲು ಅಗ್ರಹಿಸಿದೆ. ಸರ್ಕಾರದ ವರ್ಗೀಕರಣ ವಿರೋಧಿ ನಡೆಯನ್ನು ಖಂಡಿಸಿ ಮಂತ್ರ ಮೊದಲನೇ ವಾರದಲ್ಲಿ ರಾಜ್ಯ ಮಟ್ಟದ ಮಹತ್ವದ ಸಭೆ ನಡೆಸಲು RPI(B) ಮತ್ತು ದ.ಸಂಸ ತೀರ್ಮಾನಿಸಿದೆ. ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲು ಹಾಗೂ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ತೀರ್ಮಾನಿಸಲಾಗುವುದು. ರಾಜ್ಯದಲ್ಲಿ ಶಾಸಕರು ಸಚಿವರ ನಡೆಸಲಿರುವ ಸಭೆ ಸಮಾರಂಭಗಳನ್ನು ಬಹಿಸ್ಕರಿಸಿ "ಗೋಬ್ಯಾಕ್" ಚಳುವಳಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗುವುದು. ಎಲ್ಲಾ ಸಮಾನ ಚಿಂತಕರು ಬೆಂಬಲಿಸಲು ಕೋರಿದೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium