ಫೆರಿಪೆರಲ್ ರಿಂಗ್ ರಸ್ತೆ ನಿರ್ಮಾಣ; ಬಿಡಿಎನಿಂದ ಪರಿಹಾರ ವಿಳಂಬ;ರಾಜ್ಯ ರೈತ ಸಂಘ,ಹಸಿರು ಸೇನೆ ಆರೋಪ.

ಬೆಂಗಳೂರು ಫೆಬ್ರವರಿ 5, 2026: ಫೆರಿಪೆರಲ್ ರಿಂಗ್ ರಸ್ತೆ ಯನ್ನು ನಿರ್ಮಿಸಲು ಬಿಡಿಎ ಸಂಸ್ಥೆಯ ಮುಖಾಂತರ ರೈತರ ಜಮೀನುಗಳಿಗೆ ನೋಟಿಸ್ ನೀಡಿ 20 ವರ್ಷಗಳು ಕಳೆದಿದ್ದು ಇದುವರೆಗೆ ಪರಿಹಾರವನ್ನು ನೀಡಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯ ರೈತ ಸಂಘ ಮತ್ತು ಹಸಿರು ದಳ ಆರೋಪಿಸಿದೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರೈತರು ಹಾಗೂ ಭೂಮಾಲೀಕರಾದ ನಾವು ಸಹ ಈ ಬೆಂಗಳೂರಿನ ಅಭಿವೃದ್ಧಿಗೆ ನಿರೀಕ್ಷಿಸಿ ಇದುವರೆಗೂ ಸಹಕರಿಸಿದ್ದೇವೆ, ಸರ್ಕಾರದ ಮೇಲೆ ಭರವಸೆಯಿಟ್ಟು ನಾವು ನ್ಯಾಯಯುತ ಪರಿಹಾರಕ್ಕಾಗಿ ಕಾಯುತ್ತಿದ್ದು, 2013ರ ಭೂ ಸ್ವಾದೀನ ಹಾಗೂ ಪುನರ್ವಸತಿ ಕಾಯ್ದೆಯಡಿ ಪರಿಹಾರ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಅದನ್ನು ಕಡೆಗಣಿಸಿ ಸರಕಾರವು ಯೋಜನೆಯನ್ನು ಪ್ರಾರಂಭ ಮಾಡಲು ವಾಮ ಮಾರ್ಗದಲ್ಲಿ ಹೊಸ ಸ್ಟ್ರೀಮ್ ನಡಿಯಲ್ಲಿ ಸಚಿವಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿರುವುದು ರೈತರಿಗೆ ಮಾಡಿದ ವಂಚನೆಯಾಗಿದೆ ಎಂದು ಹೇಳಿದರು.

ಫೆರಿಪೆರಲ್ ಯೋಜನೆಗೆ ಜಮೀನು ಕೊಡಲು ಸಿದ್ಧರಿದ್ದೇವೆ, ನಮಗೆ ನ್ಯಾಯವಾದ ಪರಿಹಾರ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ,ರಾಜ್ಯ ಸರ್ಕಾರ ಇದನ್ನು ಪುನ‌ರ್ ಪರಿಶೀಲನೆ ಮಾಡಿ
ಬಿಡಿಎ ಸಂಸ್ಥೆ 2015ರಲ್ಲಿಉಚ್ಚ ನ್ಯಾಯಾಲದಲ್ಲಿ ಪ್ರಕರಣಗಳು ನಡೆಯುವ ಸಂದರ್ಭದಲ್ಲಿ 2013 ರ ಕಾಯ್ದೆಯಂತೆ ಪರಿಹಾರ ನೀಡುತ್ತೇವೆಂದು ಅಫಿಡವಿಟ್‌ ನಲ್ಲಿ ಘೋಷಿಸಿದ್ದು ಅದನ್ನು ಯಥಾವಾತ್ತಾಗಿ ಪಾಲಿಸಬೇಕಾಗಿದೆ. ಅಧಿಕಾರಿಗಳು ನಮ್ಮ ಹಳ್ಳಿಗಳಿಗೆ 20-30 ಜನ ಪೊಲೀಸರನ್ನು ಕರೆದುಕೊಂಡು ಬಂದು ಕಂದಾಯ ಇಲಾಖೆಯ ಕಚೇರಿಗಳಲ್ಲಿ ಕುಳಿತುಕೊಂಡು ರೈತರನ್ನು ಅಲ್ಲಿಗೇ ಕರೆಸಿಕೊಂಡು ಭಯದ ವಾತಾವರಣ ಸೃಷ್ಟಿಸಿ ಅವರೇ ನಿರ್ಣಯಿಸಿರುವ ಸಂಧಾನಿತ ಮೊತ್ತವನ್ನು ನಮೂದಿಸಿ ಒಂದು ಅರ್ಜಿಯನ್ನು ಸಿದ್ಧಪಡಿಸಿದ್ದು, ರೈತರೇ ಕೇಳಿಕೊಂಡು ಅರ್ಜಿ ಕೊಟ್ಟ ರೀತಿಯಲ್ಲಿ ಅದಕ್ಕೆ ಸಹಿಯನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಇದನ್ನು ಈ ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿದರು.

 ಮುಖ್ಯಮಂತ್ರಿಗಳು ರೈತರ ಸಭೆಗೆ ಕರೆದು ನ್ಯಾಯಯುತ್ತ ಪರಿಹರವನ್ನು ಘೋಷಿಸಬೇಕು ಇಲ್ಲವಾದಲ್ಲಿ ಮುಂದಿನ ಹೋರಾಟವನ್ನು ರೈತ ಸಂಘ ನಿರ್ದರಿಸಲಿದೆ ಎಂದು ಹೇಳಿದರು. 

 ಸುದ್ದಿಗೋಷ್ಢಿಯಲ್ಲಿ ನರಸಯ್ಯ ಬ್ಯಾಲಕೆರೆ,ಎನ್. ಗಣಿತ ರೆಡ್ಡಿ
ಗಣೇಶ್ ರೆಡ್ಡಿ ಬ್ಯಾಲಕೆರೆ,
ಜಯರಾಮ ಗುಟ್ಟಹಳ್ಳಿ
ವಿಶ್ವನಾಥ್ ನಾಗೊಂಡಹಳ್ಳಿ
ಕಾವೇರಪ್ಪ ಗಟ್ಟಿ ಹಳ್ಳಿ,
ಕಿರಣ್ ಚನ್ನಸಂದ್ರ ಮತ್ತಿತರರು ಭಾಗವಹಿಸಿದ್ದರು

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium