ಕಲ್ಟ್ ಫಿಟ್ನೆಸ್ ಕಾರ್ನಿವಲ್ ನಲ್ಲಿ ಬೆಂಗಳೂರಿಗರ ಭರ್ಜರಿ ಸಂಭ್ರಮಾಚರಣೆ; 5,000ಕ್ಕೂ ಹೆಚ್ಚು ಮಂದಿ ಫಿಟ್ನೆಸ್, ಸಂವಾದ ಮತ್ತು ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗಿ
ಬೆಂಗಳೂರು, ಮಾರ್ಚ್ 16, 2026:
ಜನಪ್ರಿಯ ಕಲ್ಟ್ ಸಂಸ್ಥೆಯ ಪ್ರತಿಷ್ಠಿತ 'ಕಲ್ಟ್ ಫಿಟ್ನೆಸ್ ಕಾರ್ನಿವಲ್' ವೈಟ್ ಫೀಲ್ಡ್ ನ ಕೆಟಿಪಿಒ ಆವರಣದಲ್ಲಿ ಅದ್ದೂರಿಯಾಗಿ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಫಿಟ್ನೆಸ್ ಉತ್ಸಾಹಿಗಳು, ಆಸಕ್ತ ಕುಟುಂಬಗಳು ಮತ್ತು ಹೊಸಬರು ಸೇರಿದಂತೆ 5,000ಕ್ಕೂ ಹೆಚ್ಚು ಮಂದಿ ಫಿಟ್ನೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಎಲ್ಲಾ ವಯಸ್ಸಿನವರಿಗೂ ಮತ್ತು ವಿವಿಧ ಫಿಟ್ನೆಸ್ ಮಟ್ಟಗಳವರಿಗೂ ಸಮಾನವಾಗಿ ಅವಕಾಶ ನೀಡುವಂತೆ ಅನುಭವಾಧಾರಿತವಾಗಿ ರೂಪುಗೊಂಡ ಈ ಕಾರ್ನಿವಲ್ನಲ್ಲಿ ಜನರು ಉತ್ಸಾಹದಿಂದ ಭಾಗವಹಿಸಿ ಸಂಭ್ರಮಾಚರಣೆ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿದರು.
ದಿನವಿಡೀ ವಿವಿಧ ರೀತಿಯ ಕಾರ್ಯಾಗಾರಗಳು, ಸ್ಪರ್ಧೆಗಳು, ಸಂವಾದಗಳು ಮತ್ತು ವಿಶೇಷ ಕಾರ್ಯಕ್ರಮಗಳ ಮೂಲಕ ಈ ಸ್ಥಳವು ಒಂದು ಫಿಟ್ನೆಸ್ ಹಬ್ಬದಂತೆ ಕಳೆಗಟ್ಟಿತ್ತು. ಇಂದಿನ ಯುವ ಪೀಳಿಗೆಯಿಂದ ಹಿಡಿದು ಅರವತ್ತು ದಾಟಿದ ಹಿರಿಯರವರೆಗೆ ಎಲ್ಲಾ ವಯೋಮಾನದ ಮಂದಿಯೂ ವಿವಿಧ ಚಟುವಟಿಕಾ ವಲಯಗಳ ನಡುವೆ ಸಂಚರಿಸುತ್ತಾ, ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು, ಬ್ರ್ಯಾಂಡ್ ನ ಅನುಭವಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು ಮತ್ತು ವಿಶಾಲವಾದ ವೆಲ್ನೆಸ್ ವಲಯದಲ್ಲಿ ಪಾಲ್ಗೊಂಡರು.
ಈ ಕಾರ್ಯಕ್ರಮದಲ್ಲಿ ಹಲವಾರು ಸೆಲೆಬ್ರಿಟಿಗಳು ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಬಾಲಿವುಡ್ ಖ್ಯಾತ ನಟಿ ಮಲೈಕಾ ಅರೋರಾ ಅವರೊಂದಿಗೆ ಯೋಗ ಸೆಷನ್, ಜನಪ್ರಿಯ ಸೆಲೆಬ್ರಿಟಿ ತರಬೇತುದಾರ್ತಿ ಯಾಸ್ಮಿನ್ ಕರಾಚಿವಾಲಾ ಅವರೊಂದಿಗೆ ಮ್ಯಾಟ್ ಪಿಲಾಟೆಸ್, ಕಲ್ಟ್ ಸಹ ಸಂಸ್ಥಾಪಕ ರಿಷಬ್ ತೇಲಾಂಗ್ ನೇತೃತ್ವದ ಸ್ಟ್ರೆಂತ್ ಮಾಸ್ಟರ್ ಕ್ಲಾಸ್ ಮತ್ತು ಶ್ವೇತಾಂಬರಿ ಶೆಟ್ಟಿ ಅವರೊಂದಿಗೆ ಡ್ಯಾನ್ಸ್ ಫಿಟ್ನೆಸ್ ಸೆಷನ್-ಇವು ಈ ದಿನದ ಪ್ರಮುಖ ಆಕರ್ಷಣೆಗಳಾಗಿದ್ದವು. ಇವುಗಳ ಜೊತೆಗೆ, ಕಾಫಿ ಮಿಕ್ಸಾಲಜಿ, ಆರ್ಟ್ ರಿಸೆಟ್ ಸೆಷನ್ ಗಳು ಮತ್ತು ಶಾಡೋ ಯೋಗದಂತಹ ವೈವಿಧ್ಯಮಯ ಚಟುವಟಿಕೆಗಳು ಈ ಕಾರ್ನಿವಲ್ ನಲ್ಲಿ ಒಳಗೊಂಡಿದ್ದವು. ಇದು ಕೇವಲ ವ್ಯಾಯಾಮ ಮಾತ್ರವಲ್ಲದೆ, ಫಿಟ್ ನೆಸ್ ಅನ್ನು ವಿವಿಧ ಆಸಕ್ತಿದಾಯಕ ಮಾರ್ಗಗಳ ಮೂಲಕ ಕಂಡುಕೊಳ್ಳುವ ಕಾರ್ನಿವಲ್ ನ ಉದ್ದೇಶವನ್ನು ಪ್ರತಿಬಿಂಬಿಸಿತು.
*ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ ಬಾಲಿವುಡ್ ನಟಿ ಮಲೈಕಾ ಅರೋರಾ ಅವರು ಮಾತನಾಡಿ*, "ನನ್ನ ಪಾಲಿಗೆ, ಫಿಟ್ ನೆಸ್ ಎಂಬುದು ಯಾವಾಗಲೂ ಉತ್ತಮವಾಗಿ ಭಾವಿಸುವುದು ಮತ್ತು ಆ ಪ್ರಕ್ರಿಯೆಯನ್ನು ಆನಂದಿಸುವುದೇ ಆಗಿದೆ. ಕಲ್ಟ್ ಫಿಟ್ ನೆಸ್ ಕಾರ್ನಿವಲ್ ನಲ್ಲಿ ನನಗೆ ತುಂಬಾ ಇಷ್ಟವಾದ ವಿಷಯವೆಂದರೆ, ವಿಭಿನ್ನ ಹಿನ್ನೆಲೆಯ ಜನರು ಒಂದೆಡೆ ಸೇರಿ ಹೊಸ ವಿಷಯಗಳನ್ನು ಅರಿಯಲು ಪ್ರಯತ್ನಿಸುತ್ತಾ, ಫಿಟ್ ನೆಸ್ ಮೂಲಕ ಆನಂದಿಸುವುದನ್ನು ನೋಡುವುದು. ಜನರು ಮುಕ್ತವಾಗಿ ಅನ್ವೇಷಿಸಲು ಮತ್ತು ಆರಾಮವಾಗಿ ಪಾಲ್ಗೊಳ್ಳಲು ಇಂತಹ ವೇದಿಕೆಗಳನ್ನು ನಿರ್ಮಿಸಿದಾಗ, ಕ್ರಿಯಾಶೀಲವಾಗಿರುವುದು ಹೆಚ್ಚು ಆನಂದದಾಯಕ ಎನಿಸುತ್ತದೆ," ಎಂದು ಹೇಳಿದರು.
ವಿವಿಧ ರೀತಿಯ ವ್ಯಾಯಾಮಗಳನ್ನು ಜನರಿಗೆ ಪರಿಚಯಿಸುವ ಬಗ್ಗೆ *ಇದೇ ರೀತಿಯ ಅಭಿಪ್ರಾಯ ಹಂಚಿಕೊಂಡ ಯಾಸ್ಮಿನ್ ಕರಾಚಿವಾಲಾ*, “ದೈಹಿಕ ಚಟುವಟಿಕೆಯು ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸಬೇಕೇ ಹೊರತು ಭಯವನ್ನಲ್ಲ. ಪಿಲಾಟೆ ಜನರಿಗೆ ಸಂಯಮ, ಸಾಮರ್ಥ್ಯ ಮತ್ತು ಎಚ್ಚರಿಕೆಯಿಂದ ಹೇಗೆ ಸಾಗಬೇಕೆಂದು ಕಲಿಸಿಕೊಡುತ್ತದೆ. ಇದನ್ನು ಫಿಟ್ ನೆಸ್ ಪಯಣದ ಯಾವುದೇ ಹಂತದಲ್ಲಿರುವವರೂ ಸಹ ಆರಂಭಿಸಬಹುದು. ಕಲ್ಟ್ ಫಿಟ್ ನೆಸ್ ಕಾರ್ನಿವಲ್ ನಂತಹ ಕಾರ್ಯಕ್ರಮಗಳು ಅದ್ಭುತವಾಗಿರುತ್ತವೆ. ಏಕೆಂದರೆ ಇವು ಜನರಿಗೆ ವಿವಿಧ ರೀತಿಯ ವ್ಯಾಯಾಮ ಪ್ರಕಾರಗಳನ್ನು ಪರಿಚಯಿಸುತ್ತವೆ ಮತ್ತು ಅವರ ದೇಹಕ್ಕೆ ಯಾವುದು ಸೂಕ್ತ ಎಂಬುದನ್ನು ಕಂಡುಕೊಳ್ಳಲು ಸಹಾಯ ಮಾಡುತ್ತವೆ," ಎಂದು ಹೇಳಿದರು.ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ್ದು 'ಕಲ್ಟ್ ಅನ್ ಬೌಂಡ್ ಚಾಂಪಿಯನ್ಶಿಪ್' ಕಾರ್ಯಕ್ರಮ. ಕಾರ್ನಿವಲ್ ನ ಪ್ರಮುಖ ಸ್ಪರ್ಧಾತ್ಮಕ ಭಾಗವಾಗಿದ್ದ ಈ ಚಾಂಪಿಯನ್ ಶಿಪ್, ದೈಹಿಕ ಶಕ್ತಿ, ಸಹಿಷ್ಣುತೆ ಮತ್ತು ಮಾನಸಿಕ ದೃಢತೆಯನ್ನು ಪರೀಕ್ಷಿಸಲು ಹೆಸರುವಾಸಿಯಾಗಿದೆ. ಅನುಭವಿ ಅಥ್ಲೀಟ್ ಗಳು ಮತ್ತು ಗಂಭೀರ ಫಿಟ್ನೆಸ್ ಆಸಕ್ತರು ಇದರಲ್ಲಿ ಭಾಗವಹಿಸಿ, ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವಂತಹ ಫಂಕ್ಷನಲ್ ವರ್ಕೌಟ್ ಫಾರ್ಮ್ಯಾಟ್ ಗಳಲ್ಲಿ ಸ್ಪರ್ಧಿಸಿದರು. ಈ ಸ್ಪರ್ಧೆಯು ಕಾರ್ಯಕ್ರಮಕ್ಕೆ ಒಂದು ಉನ್ನತ ಮಟ್ಟದ ರೋಚಕತೆಯನ್ನು ಒದಗಿಸಿತು.
ಕಾರ್ನಿವಲ್ನ ಹಿಂದಿನ ಉದ್ದೇಶದ ಬಗ್ಗೆ ಮಾತನಾಡಿದ ಕಲ್ಟ್ ಸಹ ಸಂಸ್ಥಾಪಕ ರಿಷಬ್ ತೇಲಾಂಗ್ ಅವರು, “ಫಿಟ್ ನೆಸ್ ಎಂಬುದು ಸುಲಭವಾಗಿ ಅಳವಡಿಸಿಕೊಳ್ಳುವಂತಿರಬೇಕು ಮತ್ತು ಆಕರ್ಷಕವಾಗಿರಬೇಕು ಎಂದು ನಾವು 'ಕಲ್ಟ್'ನಲ್ಲಿ ಯಾವಾಗಲೂ ಪ್ರತಿಪಾದಿಸುತ್ತೇವೆ. ಈ ಕಾರ್ನಿವಲ್ ಆ ತತ್ವಕ್ಕೆ ಜೀವ ತುಂಬುತ್ತದೆ. ಜನರು ವಿವಿಧ ವರ್ಕೌಟ್ ಗಳನ್ನು ಪ್ರಯತ್ನಿಸಲು, ತಮಗೆ ತಾವೇ ಸವಾಲೊಡ್ಡಿಕೊಳ್ಳಲು ಮತ್ತು ಒಂದು ದೊಡ್ಡ ಫಿಟ್ ನೆಸ್ ಸಮೂಹದ ಶಕ್ತಿಯನ್ನು ಅನುಭವಿಸಲು ಇದು ಅವಕಾಶ ನೀಡುತ್ತದೆ. ವ್ಯಾಯಾಮವು ಸವಾಲಿನಿಂದ ಕೂಡಿರುವುದರ ಜೊತೆಗೆ ಆನಂದದಾಯಕವೂ ಆಗಿರಬಹುದು ಎಂದು ಜನರು ಕಂಡುಕೊಂಡಾಗ, ಅದನ್ನು ನಿಯಮಿತ ಅಭ್ಯಾಸವನ್ನಾಗಿ ಮಾಡಿಕೊಳ್ಳುವುದು ಹೆಚ್ಚು ಸುಲಭವಾಗುತ್ತದೆ” ಎಂದು ಹೇಳಿದರು.
ಇಡೀ ಆವರಣದಾದ್ಯಂತ ವಿವಿಧ ಬ್ರ್ಯಾಂಡ್ ಗಳ ಆಕ್ಟಿವೇಶನ್ ಗಳು, ಉತ್ಪನ್ನಗಳ ಸ್ಯಾಂಪ್ಲಿಂಗ್ ಮತ್ತು ಪ್ರಾಯೋಗಿಕ ಅನುಭವಗಳನ್ನು ನೀಡುವ ಇಂಟರಾಕ್ಟಿವ್ ಜೋನ್ ಗಳು ದಿನವಿಡೀ ಉತ್ಸಾಹವನ್ನು ಹಿಮ್ಮಡಿಗೊಲಿಸಿತು. ಫಿಟ್ನೆಸ್ ಕ್ಷೇತ್ರದ ಪ್ರಮುಖ ವ್ಯಕ್ತಿಗಳೊಂದಿಗೆ ನಡೆದ ಸಂವಾದಗಳು, ಬದಲಾಗುತ್ತಿರುವ ಫಿಟ್ನೆಸ್ ಅಭ್ಯಾಸಗಳು, ತರಬೇತಿ ತತ್ವಗಳು ಮತ್ತು ಭಾರತದಲ್ಲಿ ಬೆಳೆಯುತ್ತಿರುವ ದೈನಂದಿನ ದೈಹಿಕ ಚಟುವಟಿಕೆಯ ಸಂಸ್ಕೃತಿಯ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ನೀಡಿದವು.
Comments
Post a Comment