ಬೆಂಗಳೂರಿನ ರಾಜಾಜಿನಗರದಲ್ಲಿ ಜೋಯಾಲುಕ್ಕಾಸ್‌ನ ಮೊದಲ ಶೋರೂಮ್ : ಏಪ್ರಿಲ್ 17ರಂದು ಶುಭಾರಂಭ

ಬೆಂಗಳೂರು, 17 ಏಪ್ರಿಲ್, 2026:

 ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಜೋಯಾಲುಕ್ಕಾಸ್, ರಾಜಾಜಿನಗರದಲ್ಲಿ ತನ್ನ ಮೊದಲ ಶೋರೂಮ್ ತೆರೆಯಲು ಸಜ್ಜಾಗಿದ್ದು, ಬೆಂಗಳೂರಿನ ಈ ಭಾಗದ ಬೆಂಗಳೂರು ನಿವಾಸಿಗಳಿಗೆ ವಿಶ್ವಾಸ, ಸೊಬಗು ಮತ್ತು ವಿಶ್ವದರ್ಜೆಯ ಆಭರಣಗಳ ಸಮ್ಮಿಲನವನ್ನು ಹತ್ತಿರ ತರುತ್ತಿದೆ. ಏಪ್ರಿಲ್ ೧೭ರಂದು ಸಂಜೆ ೫ ಗಂಟೆಗೆ ಈ ನೂತನ ಆಭರಣ ಮಳಿಗೆಯ ಅದ್ಧೂರಿ ಉದ್ಘಾಟನೆ ನಡೆಯಲಿದ್ದು, ನಗರದಾದ್ಯಂತ ಆಭರಣಪ್ರಿಯರಿಗೆ ಒಂದು ಹೆಗ್ಗುರುತಾಗುವ ಸಮಾರಂಭ ಇದಾಗಲಿದೆ ಎಂಬುದು ನಮ್ಮ ಭರವಸೆ.
ಜೋಯಾಲುಕ್ಕಾಸ್ ಅಂತಾರಾಷ್ಟ್ರೀಯ ಮಾನದಂಡಗಳಲ್ಲಿ `ಸಿಗ್ನೇಚರ್' ಹೊಂದಿರುವ ಹೊಸ ಶೋರೂಮ್ ವಿಶಾಲ ಒಳಾಂಗಣ, ಸಮಕಾಲೀನ ವಿನ್ಯಾಸ ಮತ್ತು ವಿವಿಧ ಆಭರಣ ವಿಭಾಗಗಳಿಗೆ ಮೀಸಲಾದ ವಲಯಗಳನ್ನು ಒಳಗೊಂಡಿರುತ್ತದೆ. ಕಾಲಾತೀತ ಚಿನ್ನಾಭರಣ ಮತ್ತು ಸೊಗಸಾದ ವಧುವಿನ ಸಂಗ್ರಹಗಳಿಂದ ಸೊಗಸಾದ ವಜ್ರ, ಅಮೂಲ್ಯ ಹರಳು ಮತ್ತು ಬೆಳ್ಳಿಯವರೆಗೆ ಆಭರಣಗಳ ವೈವಿಧ್ಯತೆಗಳಿವೆ. ಪ್ರತಿ ಗ್ರಾಹಕರೂ ವ್ಯಕ್ತಿಗತ ಸೇವೆ ಮತ್ತು ನೈಜ ಐಷಾರಾಮಿ ಖರೀದಿ ವಾತಾವರಣವನ್ನು ನಿರೀಕ್ಷಿಸಬಹುದು.
ಉದ್ಘಾಟನೆಯನ್ನು ಸಂಭ್ರಮಾಚರಿಸಲು, ಜೋಯಾಲುಕ್ಕಾಸ್ ವಿಶೇಷ ಕ್ಯಾಷ್‌ಬ್ಯಾಕ್ ವೋಚರ್‌ಗಳನ್ನು ಘೋಷಿಸಿದೆ, ಇದು ಏಪ್ರಿಲ್ ೨೬, ೨೦೨೬ರವರೆಗೆ ಮಾನ್ಯವಾಗಿರುತ್ತದೆ. ರೂ. ೭೫,೦೦೦ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರ, ಕತ್ತರಿಸದ ವಜ್ರ ಮತ್ತು ಪ್ಲಾಟಿನಂ ಆಭರಣಗಳ ಖರೀದಿಯ ಮೇಲೆ ರೂ. ೨,೦೦೦/- ಕ್ಯಾಷ್‌ಬ್ಯಾಕ್ ವೋಚರ್; ರೂ. ೭೫,೦೦೦/- ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನ ಮತ್ತು ಅಮೂಲ್ಯ ಆಭರಣಗಳ ಖರೀದಿಯ ಮೇಲೆ ರೂ. ೨೧,೦೦೦/- ಕ್ಯಾಷ್‌ಬ್ಯಾಕ್ ವೋಚರ್; ಮತ್ತು ರೂ. ೧೫,೦೦೦/- ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಬೆಳ್ಳಿf ಆಭರಣಗಳ ಮೇಲೆ ರೂ. ೨೫೦೦/- ಕ್ಯಾಷ್‌ಬ್ಯಾಕ್ ವೋಚರ್ ಅನ್ನು ಗ್ರಾಹಕರು ಪಡೆಯುತ್ತಾರೆ.
ನೂತನ ಶಾಖೆಯ ಅನಾವರಣವನ್ನು ಘೋಷಿಸಿದ ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಡಾ. ಜೋಯ್ ಆಲುಕ್ಕಾಸ್ ಅವರು ಮಾತನಾಡಿ, "ರಾಜಾಜಿನಗರದಲ್ಲಿ ನಮ್ಮ ಮೊದಲ ಶೋರೂಮ್ ತೆರೆಯಲು ನಾವು ಸಂತಸಪಡುತ್ತೇವೆ. ಇದು ಸಂಸ್ಕೃತಿ ಮತ್ತು ಅತ್ಯುತ್ತಮ ಆಭರಣಗಳ ಬಗ್ಗೆ ಆಳವಾದ ಮೆಚ್ಚುಗೆಗೆ ಹೆಸರುವಾಸಿಯಾಗಿದೆ. ಜೋಯಾಲುಕ್ಕಾಸ್‌ನಲ್ಲಿ, ನಾವು ಪ್ರತಿಯೊಬ್ಬ ಗ್ರಾಹಕರಿಗೆ ಅತ್ಯುತ್ತಮ ವಿನ್ಯಾಸ ಮತ್ತು ಅತ್ಯುತ್ತಮ ಸೇವೆಯನ್ನು ನೀಡಲು ಕಟಿಬದ್ಧರಾಗಿದ್ದೇವೆ. ಈ ಆಚರಣೆಯ ಭಾಗವಾಗಲು ಮತ್ತು ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರ್‌ನೊಂದಿಗೆ ಶಾಪಿಂಗ್ ಆನಂದವನ್ನು ಅನುಭವಿಸಲು ನಾವು ಎಲ್ಲರನ್ನೂ ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ" ಎಂದು ಹೇಳಿದರು.
ತನ್ನ ವಿಶಿಷ್ಟ ವಿನ್ಯಾಸ, ರಾಜಿಯಾಗದ ಗುಣಮಟ್ಟ ಮತ್ತು ಆತ್ಮೀಯ ಗ್ರಾಹಕಸೇವೆಯೊಂದಿಗೆ, ಜೋಯಾಲುಕ್ಕಾಸ್ ರಾಜಾಜಿನಗರದ ನಿವಾಸಿಗಳಿಗೆ ಆಭರಣ ಶಾಪಿಂಗ್ ಅನುಭವವನ್ನು ಮರು ವ್ಯಾಖ್ಯಾನಿಸಲು ಸನ್ನದ್ಧವಾಗಿದೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium