ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮೇ 27ರಂದು ಮಾದಿಗ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ.


ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮೇ 27ರಂದು ಮಾದಿಗ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. 

ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ. ರೋಸ್ಟರ್ ಬಿಂದು ಮಾರ್ಪಡಿಸಲು, ಬಡ್ತಿ, ಮುಂಬಡ್ತಿ SCSP/TSP ಹಾಗೂ ಮೀಸಲಾತಿ ಇರುವ ಕಡೆಯಲೆಲ್ಲಾ ಒಳ ಮೀಸಲಾತಿ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಿದೆ.

ಕಳೆದ 75 ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಒದಗಿಸಲಾದ ಮೀಸಲಾತಿಯಿಂದ ವಂಚಿತರಾದ ಮಾದಿಗ ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ಒದಗಿಸಿಕೊಡುವ ಹಾಗೂ 101 ಪರಿಶಿಷ್ಟ ಜಾತಿಗಳಿಗೂ ಮೀಸಲಾತಿ ಸಮನಾಗಿ ಹಂಚಿಕೆಯ ಏಕೈಕ ಉದ್ದೇಶದಿಂದ ಒಳ ಮೀಸಲಾತಿ ವ್ಯವಸ್ಥೆ ತಂದಿದೆ.

ಸುಪ್ರೀಂಕೋರ್ಟ್‌ 7 ಜನ ನ್ಯಾಯಾದೀಶರ ತೀರ್ಪು ಬಂದು 2 ವರ್ಷವಾಗಿವೆ. ಆಂಧ್ರ, ತೆಲಂಗಾಣ, ತಮಿಳುನಾಡು, ಪಂಜಾಬ್, ಹರಿಯಾಣ ಇತರೆ ರಾಜ್ಯಗಳು ತತ್‌ಕ್ಷಣ ಒಳಮೀಸಲಾತಿ ಜಾರಿಗೊಳಿಸಿವೆ. ರಾಜ್ಯದಲ್ಲಿ ಗೌರವಾನ್ವಿತ ನ್ಯಾಯಾದೀಶರಾದ ಸದಾಶಿವ,

1. ನಾಗಮೋಹನ್‌ದಾಸ್ ಹಾಗೂ ಜೆ.ಸಿ.ಮಾಧುಸ್ವಾಮಿ ವರದಿಯನ್ನು ಸರ್ಕಾರ ತಳ್ಳಿ ಹಾಕಿತು. ಒಳಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದು ಬೀಸೋ ದೊಣ್ಣೆ ಏಟಿಗೆ ತಪ್ಪಿಸಿಕೊಳ್ಳಲು ಒಳಮೀಸಲಾತಿ ಜಾರಿಗೆ ತಂದಿರುವುದಾಗಿ ಬೀಗುತ್ತಿದೆ. ಇದು ರಾಜಕೀಯ ತಂತ್ರಗಾರಿಕೆಯ ಅವೈಜ್ಞಾನಿಕ ಒಳಮೀಸಲಾತಿಯಾಗಿದೆ.

ಸರ್ಕಾರ ದಿನಾಂಕ: 08/05/2026 ರಂದು ಒಳಮೀಸಲಾತಿ ಜಾರಿಗೊಳಿಸಿ ಹೊರಡಿಸಿರುವ ಅಧಿಸೂಚನೆಯು ಕಾನೂನು ಬಾಹಿರ ಹಾಗೂ ಅವೈಜ್ಞಾನಿಕ ಮತ್ತು ಗೊಂದಲದ ಗೂಡಾಗಿದೆ ಹಾಗೂ ಒಳಮೀಸಲಾತಿಯ ಉದ್ದೇಶ ವಿಫಲವಾಗಿದೆ.

ಅಧಿಸೂಚನೆಯ ಕಂಡಿಕೆ 3 ರಲ್ಲಿ 3 ಕ್ಕಿಂತ ಕಡಿಮೆ ರೋಸ್ಟರ್ ಹುದ್ದೆಗಳು ಲಭ್ಯವಾಗುತ್ತಿದ್ದಲ್ಲಿ ಪರಿಶಿಷ್ಟ 101 ಜಾತಿಗಳು ಈ ಹುದ್ದೆಗೆ ಸ್ಪರ್ಧಿಸಬೇಕು ಎಂದು ಆದೇಶಿಸಿದೆ. (SC General) ಇದು ಒಳಮೀಸಲಾತಿ ಅನ್ವಹಿಸುವುದಿಲ್ಲ. ಈಗಾಗಿ ಪರಿಶಿಷ್ಟ ಜಾತಿಗಳಿಗೆ 3 ಕ್ಕಿಂತ ಹೆಚ್ಚು ಹುದ್ದೆಗಳು ಲಭ್ಯವಿದ್ದರೆ ಮಾತ್ರ ಒಳಮೀಸಲಾತಿ ಕಲ್ಪಿಸಲು ಸೂಚಿಸಿದೆ.

ಅಂದರೆ ಪರಿಶಿಷ್ಟ ಜಾತಿಯ ABC ಗುಂಪುಗಳಿಗೆ ರೋಸ್ಟ‌ರ್ ಸಂಖ್ಯೆ 1,9,15 ಬಿಂದುಗಳು ಲಭ್ಯವಾಗದಿದ್ದರೆ 101 ಪರಿಶಿಷ್ಟ ಜಾತಿಗಳಲ್ಲಿ ಸ್ಪರ್ಧಿಸಲು ಆದೇಶದಲ್ಲಿ ಉಲ್ಲೇಖಿಸಿದೆ.

ಹಾಗಾಗಿ B ಮತ್ತು C ಈ ಬಲಿಷ್ಟ ಜಾತಿಗಳೊಂದಿಗೆ ಮಾದಿಗ ಸಮುದಾಯ ಮತ್ತು ಅಲೆಮಾರಿ ಜಾತಿಗಳು ಸ್ಪರ್ಧಿಸಿ ತನ್ನ ಪಾಲು ಪಡೆಯಲು ಸಾಧ್ಯವಿಲ್ಲ. ಈಗಾಗಿ ಪರಿಶಿಷ್ಟ ಜಾತಿಗಳಿಗೆ ಮೀಸಲಿರಿಸಿರುವ ಬಹುತೇಕ ಹುದ್ದೆಗಳು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬಲಾಡ್ಯರಾಗಿರುವ ಪರಿಶಿಷ್ಟ ಜಾತಿಗಳ ಪಾಲಾಗುವಂತೆ ಹುನ್ನಾರ ನಡೆಸಲಾಗಿದೆ.

ಪರಿಶಿಷ್ಟ ಜಾತಿಗಳಿಗೆ 3 ಕ್ಕಿಂತ ಕಡಿಮೆ ರೋಸ್ಟರ್ ಹುದ್ದೆಗಳು ಲಭ್ಯವಾದರೆ ಪರಿಶಿಷ್ಟ ಸಾಮಾನ್ಯ (SC General) ಎಂಬುದು ಅವೈಜ್ಞಾನಿಕ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಹಾಗೂ ಅಸಂವಿಧಾನಿಕ ಆದೇಶವಾಗಿದೆ.

ಆದುದರಿಂದ ಇದರ ಪರಿಣಾಮ ಬಹುತೇಕ ಗೆಜೆಟೆಡ್ ಕ್ಲಾಸ್ 1, 2 ಹುದ್ದೆಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ವಿಶ್ವ ವಿದ್ಯಾಲಯದ ಕುಲಪತಿ, ಕುಲಸಚಿವ, ಪ್ರಾಧ್ಯಾಪಕ. ಸಹಾಯ ಪ್ರಾಧ್ಯಪಕ, ಹೆಚ್ಚುವರಿ ಪ್ರಾಧ್ಯಾಪಕ ಇತರೆ ಹುದ್ದೆಗಳು ಹಾಗೂ ಹಲವಾರು ಇಲಾಖೆಗಳಲ್ಲಿ ಮತ್ತು ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ನೇಮಕಾತಿಗಳು, ಕಲ್ಯಾಣ ಕರ್ನಾಟಕದ ಮೀಸಲಾತಿ ಹುದ್ದೆಗಳು ಅಲ್ಲದೆ ನೂರಾರು ಅನುದಾನ ಮತ್ತು ಅನುದಾನ ರಹಿತ ಸಂಸ್ಥೆಗಳ ಶಾಲಾ, ಕಾಲೇಜುಗಳಲ್ಲಿನ ಹುದ್ದೆಗಳಲ್ಲಿ ಲಭ್ಯವಾಗುವ ಹುದ್ದೆಗಳಲ್ಲಿ ಒಳಮೀಸಲಾತಿ ದೊರೆಯದಂತೆ ವ್ಯವಸ್ಥಿತ ಷಡ್ಯಾಂತರ ರೂಪಿಸಲಾಗಿದೆ.

ಬಡ್ತಿ ಮತ್ತು ಮುಂಬಡ್ತಿಯಲ್ಲಿ ಮೀಸಲಾತಿ ನೀಡಿಲ್ಲ ಹಾಗೂ ಆದಿ ಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಜಾತಿಗಳಿಗೆ ನಾಗಮೋಹನ್ ದಾಸ್ ಆಯೋಗ ಶೇ.1% ರಷ್ಟು ಮೀಸಲಾತಿ ನೀಡಿತ್ತು. ಆದರೆ ಈ ಗುಂಪನ್ನು ತುಂಡರಿಸಿ ಈ ಜಾತಿಗಳನ್ನು ಗೊಂದಲದಲ್ಲಿ ಕೆಡವಿದೆ.

59 ಅಲೆಮಾರಿ ಮತ್ತು ಅರೆಅಲೆಮಾರಿ ಜಾತಿಗಳು ತೀರ ಹಿಂದುಳಿದಿದ್ದು ಈ ಜಾತಿಗಳಿಗೆ ವಿಶೇಷ ಸ್ಥಾನ ನೀಡಿದ ಆಯೋಗ ಎ ಗ್ರೂಪ್‌ ನಲ್ಲಿ ಶೇ.1% ರಷ್ಟು ಮೀಸಲಾತಿ ನೀಡಿತ್ತು. ಸರ್ಕಾರ ಯಾವ ಆಯೋಗದ ವರದಿಯನ್ನು ಆಧರಿಸಿದೆ. 'ಸಿ' ಗ್ರೂಪ್‌ನ ಬಲಿಷ್ಟ ಜಾತಿಗಳೊಂದಿಗೆ ಸೇರಿಸಿ ತೀವ್ರ ಅನ್ಯಾಯ ಮಾಡಿದೆ. ಈ ಕರಾಳ ಆದೇಶ ಈ ಜಾತಿಗೆ ಮರಣ ಶಾಸನವಾಗಿದೆ.

ಆದ್ದರಿಂದ ಒಳಮೀಸಲಾತಿಗಾಗಿ 35 ವರ್ಷಗಳ ಚರಿತ್ರಾರ್ಹ ಹೋರಾಟ ನಡೆಸಿಕೊಂಡು ಬಂದ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳು ಒಟ್ಟಿಗೆ ರಚಿಸಿಕೊಂಡಿರುವ "ಮಾದಿಗ ಸಂಘಟನೆಗಳ ನೇತೃತ್ವದಲ್ಲಿ ದಿನಾಂಕ: 27/05/2026 ರಂದು ಪ್ರಿಡಂ ಪಾರ್ಕ್‌ನಲ್ಲಿ "ಬೃಹತ್ ಪ್ರತಿಭಟನಾ ಧರಣಿ" ನಡೆಸಲು ತೀರ್ಮಾನಿಸಿದೆ.

ಹಕ್ಕೋತ್ತಾಯಗಳು

1. 3 ಕ್ಕಿಂತ ಕಡಿಮೆ ಹುದ್ದೆಗಳನ್ನು ಎಸ್ ಸಿ ಸಾಮಾನ್ಯ ಎಂದು ಪರಿಗಣಿಸುವ ಅವೈಜ್ಞಾನಿಕ ಷರತ್ತು ಹಿಂಪಡೆಯಬೇಕು.

2. ಪರಿಶಿಷ್ಟ ಜಾತಿಗೆ ಮೀಸಲಾತಿ ಇರುವ ಎಲ್ಲಾಕಡೆ ಒಳ ಮೀಸಲಾತಿ ಅಳವಡಿಸಿ ಆದೇಶಿಸಬೇಕು.

3. ನಾಲ್ಕು ಆಯೋಗಗಳ ವರದಿಯ ಅಂಕಿ ಅಂಶಗಳನ್ನು ಪರಿಗಣಿಸಿ ಜನಸಂಖ್ಯೆಗೆ ಅನುಗುಣವಾಗಿ ಮಾದಿಗ ಸಮುದಾಯಕ್ಕೆ ಶೇಕಡ 6 ಮೀಸಲಾತಿಯನ್ನು ಒದಗಿಸಬೇಕು.

4. ಸರ್ಕಾರದ ನೌಕರರಿಗೆ ಬಡ್ತಿಯಲ್ಲಿ ಮತ್ತು ಮುಂಬಡ್ತಿಯಲ್ಲಿ ಒಳ ಮೀಸಲಾತಿ ಅಳವಡಿಸಿ ಆದೇಶಿಸಬೇಕು.

5. SCSP/TSP 49,000 2៩ ជ ಅನ್ವಯ ಹಂಚಿಕೆಯಾಗಬೇಕು.

6.ಮಾದಿಗ ಸಮುದಾಯಕ್ಕೆ ಪ್ರತ್ಯೇಕ ಸಮಾಜ ಕಲ್ಯಾಣ ಇಲಾಖೆಯನ್ನು ಒದಗಿಸಬೇಕು.

7. ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು ಪರಿಶಿಷ್ಟ ಜಾತಿ ಜನಸಂಖ್ಯೆವಾರು ಒಳ

ಮೀಸಲಾತಿ ಅಳವಡಿಸಿ ಹಂಚಿಕೆ ಮಾಡಬೇಕು. 8. ಅಲೆಮಾರಿ ಸಮುದಾಯಗಳಿಗೆ ಶೇ.1% ಪ್ರತ್ಯೇಕ ಒಳಮೀಸಲಾತಿ ನೀಡಿ ಮತ್ತು

ಇವರಿಗೆ ಪ್ರವರ್ಗ ಎ ಎಂದು ಪರಿಗಣಿಸಬೇಕು.

9. ಮುಂಬರುವ ಸ್ಥಳೀಯ ಒಳಮೀಸಲಾತಿ ಒದಗಿಸಬೇಕು. ಚುನಾವಣೆಗಳಿಗೆ ಮಾದಿಗ ಸಮುದಾಯಕ್ಕೆ

10. ರಾಜ್ಯ ಸರ್ಕಾರದ ವ್ಯಾಪ್ತಿಗೊಳಪಡುವ ಗುತ್ತಿಗೆ ಕಾಮಗಾರಿಗಳು, ಗುತ್ತಿಗೆ ಕಾರ್ಮಿಕರ ನೇಮಕಾತಿ, ತಾತ್ಕಾಲಿಕ ನೇಮಕಾತಿ, ಅತಿಥಿ ಉಪನ್ಯಾಸಕರ ನೇಮಕಾತಿ, ಶಿಕ್ಷಕರ ನೇಮಕಾತಿಯಲ್ಲೂ ಒಳ ಮೀಸಲಾತಿ ಅಳವಡಿಸಬೇಕು.

11. ವಿಧಾನಸಭೆ ಮತ್ತು ವಿಧಾನ ಪರಿಷತ್ತು ಹಾಗೂ ನಿಗಮ ಮಂಡಳಿ ಎಲ್ಲಾ ಕಡೆ ರಾಜಕೀಯ ರಂಗದಲ್ಲಿ ಒಳಮೀಸಲಾತಿ ಅಳವಡಿಸಲಿ.

12. AK, AD ಮತ್ತು AA ಜಾತಿಗಳು ಗ್ರೂಪ್ 'A' ಮತ್ತು 'B' ಎರಡು ಕಡೆ ಸೌಲಭ್ಯ ಪಡೆಯುವಂತೆ ಸೃಷ್ಟಿಸಿರುವ ಗೊಂದಲವನ್ನು ನಿವಾರಿಸಲಿ.

ಈ ರಾಜ್ಯ ಸರ್ಕಾರವು ದಿನಾಂಕ: 22/05/20260 ನಿರ್ಣಾಯಗಳನ್ನು ಕೈಗೊಳ್ಳದಿದ್ದರೆ ದಿನಾಂಕ: 27/05/2026 ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಧರಣಿ ಹಮ್ಮಿಕೊಳ್ಳುವುದರ ಮೂಲಕ ರಾಜ್ಯ ಸರ್ಕಾರವನ್ನು ಎಚ್ಚರಿಸಿ 150 ವಿಧಾನಸಭಾ ಕ್ಷೇತ್ರಗಳಲ್ಲಿ ಒಳಮೀಸಲಾತಿಗಾಗಿ ಮತ ಜಾಗೃತಿ ಅಭಿಯಾನ ಹಮ್ಮಿಕೊಂಡು ರಾಜ್ಯಾದ್ಯಂತ ರಾಜ್ಯ ಸರ್ಕಾರದ ವಿರುದ್ದ ಬೃಹತ್ ಜನಾಂದೋಲನ ಸಮಾವೇಶಗಳನ್ನು ನಡೆಸಲಾಗುವುದು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium