ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ 94ನೇ ವರ್ಷದ ಹುಟ್ಟುಹಬ್ಬ; ಅಪ್ಪಾಜಿ ಕ್ಯಾಂಟೀನ್ ನಲ್ಲಿ ₹1 ಗೆ ಮುದ್ದೆ ಊಟ ವಿತರಣೆ

ಬೆಂಗಳೂರು, ಮೇ 18, 2026 

ಜೆಡಿಎಸ್‌ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಹನುಮಂತ ನಗರದ ಲ್ಲಿರುವ 'ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್'ನಲ್ಲಿ ₹1ಕ್ಕೆ ಮುದ್ದೆ ಊಟವಿತರಿಸಲಾಯಿತು.

ವಿಧಾನ ಪರಿಷತ್ತಿನ ಸದಸ್ಯರೂ ಆಗಿರುವ ಟಿ.ಎ. ಶರವಣ, 'ಅಪ್ಪಾಜಿ ಕ್ಯಾಂಟೀನ್' ನಡೆಸುತ್ತಿದ್ದಾರೆ.

ಮುದ್ದೆ ಊಟದ ಜತೆಗೇ ₹1ಕ್ಕೆ ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಸಾವಿರಾರು ಜನರು ಸರದಿಯಲ್ಲಿ ನಿಂತು ಊಟ, ಉಪಾಹಾರ ಸವಿದರು. ಬಿಗ್‌ಬಾಸ್ ವಿಜೇತ ಗಿಲ್ಲಿ ನಟ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

'ಹಸಿದವರಿಗೆ ಮೊದಲು ಅನ್ನ ನೀಡಬೇಕು ಎಂಬ ದೇವೇಗೌಡರ ಆಶಯದಂತೆ 9 ವರ್ಷಗಳಿಂದ ಈ ಕ್ಯಾಂಟೀನ್ ನಡೆಸಿಕೊಂಡು ಬರುತ್ತಿದ್ದೇನೆ. ಅತಿ ಕಡಿಮೆ ಬೆಲೆಯಲ್ಲಿ ಊಟ, ಉಪಾಹಾರ ಒದಗಿಸಲಾಗುತ್ತಿದೆ.

ಕೋವಿಡ್ ಸಮಯದಲ್ಲಿ ಈ ಕ್ಯಾಂಟೀನ್ ಲಕ್ಷಾಂತರ ಜನರ ಹಸಿವು ನೀಗಿಸಿತ್ತು' ಎಂದು ಶರವಣ ಹೇಳಿದರು.

ಇದೇ ದಿನ ಪೌರ ಕಾರ್ಮಿಕರು ಮತ್ತು ಆಟೊರಿಕ್ಷಾ ಚಾಲಕರಿಗೆ ಉಚಿತವಾಗಿ ಬಟ್ಟೆಗಳನ್ನು ವಿತರಿಸಲಾಯಿತು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium