ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ರಾಜ್ಯ ಯುವ ಕಾಂಗ್ರೆಸ್ ಸಮಿತಿ ಬೃಹತ್ ಪ್ರತಿಭಟನೆ, ರಾಜಭವನ ಚಲೋ

ಬೆಂಗಳೂರು ಮೇ 21, 2026: 

ಪ್ರಧಾನಿ ನರೇಂದ್ರಮೋದಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೋರಬೇಕು, ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು-ಸಿ.ಎಂ.ಸಿದ್ದರಾಮಯ್ಯ

ಫೀಡಂ ಪಾರ್ಕ್ ಅವರಣದಲ್ಲಿ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಮತ್ತು ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಬೃಹತ್ ಪ್ರತಿಭಟನೆ ಮತ್ತು ರಾಜಭವನ ಚಲೋ ಕಾರ್ಯಕ್ರಮ ಮತ್ತು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿರವರ ಪುಣ್ಯಸ್ಮರಣೆ ಕಾರ್ಯಕ್ರಮ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು, ರಾಜ್ಯ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ, ಅಭಿಷೇಕ್ ದತ್ತ, ಸಚಿವರುಗಳಾದ ಕೃಷ್ಣಬೈರೇಗೌಡ, ಬೈರತಿ ಸುರೇಶ್, ಶರಣಪ್ರಕಾಶ ಪಾಟೀಲ್, ಈಶ್ವರ್ ಖಂಡ್ರೆ, ಮಧು ಬಂಗಾರಪ್ಪ, ಸುಧಾಕರ್, ಶಾಸಕರುಗಳಾದ ರಿಜ್ವಾನ್ ಅರ್ಹದ್, ಪ್ರದೀಪ್ ಈಶ್ವರ್, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉದಯಭಾನು ಚಿಬ್, , ರಾಜ್ಯ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾದ ಮಂಜುನಾಥ್ ಗೌಡ ಹೆಚ್.ಎಸ್. ಮತ್ತು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಬಂಡಾರಿ, ಐ.ವೈ.ಸಿ. ಕಾರ್ಯದರ್ಶಿ ತಾರೀಖ್ ಭಗವಾನ್ ರವರು ಮಾಜಿ ಪ್ರಧಾನಿ ರಾಜೀವ್ ಗಾಂಧಿರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪ್ರತಿಭಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಮಾತನಾಡಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ವಿರುದ್ದ ಯುವ ಕಾಂಗ್ರೆಸ್ ಬೃಹತ್ ಮಟ್ಟದ ಹೋರಾಟ ಹಮ್ಮಿಕೊಂಡಿದ್ದಾರೆ. ಪ್ರದಾನಿ ಮೋದಿ, ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ರವರ ನೀಟ್ ಮರು ಪರೀಕ್ಷೆ ಮಾಡುತ್ತಿದ್ದಾರೆ. ನೀಟ್ ಪ್ರಶ್ನೆ ಸೋರಿಕೆಯನ್ನು ಮೋದಿ, ಧರ್ಮೇಂದ್ರ ಪ್ರಧಾನ್ ರವರ ಹೊಣೆ ಹೋರಬೇಕು.

ಸಿಇಟಿ ಪರೀಕ್ಷೆ ಚನ್ನಾಗಿ ನಡೆಯುತ್ತಿತ್ತು. 2016ರಲ್ಲಿ ನೀಟ್ ಪದ್ದತಿ ಜಾರಿಗೆ ಬಂತು 10ವರ್ಷಗಳಲ್ಲಿ 5 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ನೀಟ್ ಪರೀಕ್ಷೆ ಬರೆಯಬೇಕಾದರೆ ಹಲವಾರು ತಿಂಗಳ ಕಾಲ ತಯಾರಿ ಮಾಡಿಕೊಂಡಿರುತ್ತಾರೆ. ಕೋಚಿಂಗ್ ಸೆಂಟರ್ ನಲ್ಲಿ ಸೇರಿಕೊಂಡು ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. 

ಹಣವಿದ್ದ ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್ ಸೇರುತ್ತಾರೆ ಹಣ ಇಲ್ಲದವರು ಕೋಚಿಂಗ್ ಸೆಂಟರ್ ಸೇರಲು ಆಗುವುದಿಲ್ಲ.
ಬಡವರು, ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗದವರನ್ನು ನೋಡಿದರೆ ಮೋದಿರವರಿಗೆ ಆಗುವುದಿಲ್ಲ.

ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ, ಪರೀಕ್ಷೆಗಳ ರಾಜ್ಯ ಸರ್ಕಾರ ನಡೆಸಬೇಕು ಸಿಇಟಿ ಪರೀಕ್ಷೆ ಮತ್ತೇ ಆರಂಭಿಸಬೇಕು ಎಂದು ವಿದ್ಯಾರ್ಥಿಗಳ ಆಶಯ ವ್ಯಕ್ತಪಡಿಸುತ್ತಾರೆ.

ಯಡಿಯೂರಪ್ಪ, ಬಸವರಾಜ್ ಎಸ್.ಬೊಮ್ಮಾಯಿರವರ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪೇಪರ್ ಗಳು ಲೀಕ್ ಆಗಿತ್ತು. ಬಿಜೆಪಿ ಸರ್ಕಾರಗಳ ಆಡಳಿತದಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತಿದೆ.

ಚಿನ್ನ, ಬೆಳ್ಳಿ ಖರೀದಿ ಮಾಡಬೇಡಿ, ಪೆಟ್ರೋಲ್ ಕಡಿಮೆ ಬಳಸಿ ಎಂದು ಹೇಳಿ ವಿದೇಶ ಪ್ರಯಾಣ ಮಾಡುತ್ತಿದ್ದಾರೆ ಪ್ರಧಾನಿ ಮೋದಿರವರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿ ಯುವಕ-ಯುವತಿಯರಿಗೆ ಕೊಡುತ್ತೇನೆ ಎಂದು ಹೇಳಿದ್ದರು 12ವರ್ಷಗಳಲ್ಲಿ 24ಕೋಟಿ ಉದ್ಯೋಗ ನೀಡಬೇಕಿತ್ತು. ಅದರೆ 2ಕೋಟಿ ಉದ್ಯೋಗ ಕೊಟ್ಟಿಲ್ಲ. 

ಹಿಂದೂ-ಮುಸ್ಸಿಂ ಕೋಮುವಾದ ಹರಡಲು ಬಿಜೆಪಿ, ಆರ್.ಎಸ್.ಎಸ್. ಪ್ರಯತ್ನ ಮಾಡುತ್ತಿದೆ. ಐದು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಇದರ ಜವಾಬ್ದಾರಿ ಹೊರಬೇಕು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರವರು ಕೊಡಲೇ ರಾಜೀನಾಮೆ ನೀಡಬೇಕು. 

ಒಂದು ವರ್ಷ ಕಷ್ಟಪಟ್ಟು ಅಭ್ಯಾಸ ಮಾಡಿ ನೀಟ್ ಪರೀಕ್ಷೆ ರದ್ದು ಮಾಡಿದ ಕಾರಣದಿಂದ ವಿದ್ಯಾರ್ಥಿಗಳು ಅತ್ಮಹತ್ಯೆ ಮಾಡಿಕೊಂಡರು. ಮೃತಪಟ್ಟ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಪರಿಹಾರ ಕೊಡಬೇಕು.

ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರನ್ನ ಬಂಧಿಸಬೇಕು. ದೇಶ ಯುವಕರಲ್ಲಿ ಬೇಷರತ್ ಕ್ಷಮೆಯಾಚಿಸಬೇಕು.
ದೇಶದಲ್ಲಿ ಸಮಸ್ಯೆಯಾದರೆ ಪ್ರಧಾನಿ ವಿದೇಶಕ್ಕೆ ಹೋಗುತ್ತಾರೆ ಎಂದು ಹೇಳಿದರು.

ರಣದೀಪ್ ಸಿಂಗ್ ಸುರ್ಜೆವಾಲರವರು ಮಾತನಾಡಿ ರಾಜ್ಯ ಯುವ ಕಾಂಗ್ರೆಸ್ ನೀಟ್ ಪ್ರಶ್ನೆ ಸೋರಿಕೆ ವಿರುದ್ದ ಸಂಘಟಿತ ಹೋರಾಟ ಮಾಡುತ್ತಿದೆ. ಕಳೆದ 12ವರ್ಷಗಳಲ್ಲಿ ಮೋದಿ ಸರ್ಕಾರ ಆಡಳಿತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಾಫಿಯದವರ ಕೈಯಲ್ಲಿ ಇದೆ. 

ಬಿಜೆಪಿ ಸರ್ಕಾರ ಪೇಪರ್ ಲೀಕ್ ಹಗರಣ ಖ್ಯಾತಿ ಪಡೆದಿದೆ. ಹಲವಾರು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಬಿಜೆಪಿ ಸರ್ಕಾರ ಅಡಿಯಲ್ಲಿ ಈ ಪ್ರಕರಣ ನಡೆಯುತ್ತಿದೆ. ಪೇಪರ್ ಲೀಕ್ ಚರ್ಚಾ ಆರಂಭ ಮಾಡಬೇಕು ಪ್ರಧಾನಿಗಳು.

 ವ್ಯಾಪಂ ಹಗರಣದಿಂದ ಮಧ್ಯಪ್ರದೇಶ ನೂರು ಯುವಕರು ಅತ್ಯಹತ್ಯೆ ಮಾಡಿಕೊಂಡರು. ಎಲ್ಲ ಪರೀಕ್ಷೆಗಳು ಲೀಕ್ ಆಗುತ್ತಿರುವುದು ಆಡಳಿತ ವೈಫಲ್ಯ. ಬಿಜೆಪಿ ಸರ್ಕಾರಗಳು ಇರುವ ರಾಜ್ಯವಾದ ರಾಜಸ್ತಾನ್, ಹರಿಯಾಣ, ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶಗಳಲ್ಲಿ ಸೋರಿಕೆಯಾಗಿದೆ. 

2024ರಲ್ಲಿಯೊ ಸಹ ನೀಟ್ ಪರೀಕ್ಷೆ ಸೋರಿಕೆಯಾಗಿತ್ತು. ಯುವಕರ ಭವಿಷ್ಯ ಕುರಿತು ಚಿಂತನೆ ಮಾಡಬೇಕಾದ ಸಂದರ್ಭ ಬಂದಿದೆ.

2026ನೀಟ್ ಪರೀಕ್ಷೆಯಲ್ಲಿ ಹಗಲು ದರೋಡೆ ಮಾಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಯಿತು. 140ಪ್ರಶ್ನೆಗಳು ಹೇಗೆ ಬಹಿರಂಗವಾಯಿತು ಎಂದು ಪ್ರಧಾನಿ ಮೋದಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರವರು ದೇಶ ಯುವಕರಿಗೆ ಉತ್ತರಿಸಬೇಕು ಎಂದು ಹೇಳಿದರು.

ಉದಯಭಾನು ಚಿಬ್ ರವರು ಮಾತನಾಡಿ ದೇಶದ ಮಕ್ಕಳ ಭವಿಷ್ಯ ಜೊತೆಯಲ್ಲಿ ಬಿಜೆಪಿ ಕೇಂದ್ರ ಸರ್ಕಾರ ಆಟವಾಡುತ್ತಿದೆ. ಪ್ರಧಾನಿ ನರೇಂದ್ರಮೋದಿ ರವರ ಸ್ನೇಹಿತರ ಒಳಿತಿಗಾಗಿ ದೇಶವನ್ನು ಮಾರಾಟ ಮಾಡುತ್ತಿದ್ದಾರೆ.

ದೆಹಲಿ ವಿದ್ಯಾರ್ಥಿ ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ ನಾಲ್ಕು ಅಂಕ ಕಡಿಮೆ ಬಂದಿತ್ತು ಈ ಬಾರಿ ಉತ್ತಮ ಅಭ್ಯಾಸ ಮಾಡಿದ್ದ ಅದರೆ ನೀಟ್ ಪರೀಕ್ಷೆ ರದ್ದಿನಿಂದ ಅತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಕಾಂಗ್ರೆಸ್ ಪಕ್ಷ ನಿಷ್ಚಾವಂತ ಕಾರ್ಯಕರ್ತರು ಹುಲಿಗಳಂತೆ ಇದರ ವಿರುದ್ದ ಹೋರಾಟ ಮಾಡಲಾಗುತ್ತದೆ.
*ಮಂಜುನಾಥಗೌಡ ಹೆಚ್.ಎಸ್.ರವರು* ಮಾತನಾಡಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ದ ರಾಜ್ಯಾದ್ಯಂತ ಬಿಜೆಪಿ ಸರ್ಕಾರದ ವಿರುದ್ದ ಹೋರಾಟ ಮಾಡಲಾಗುತ್ತಿದೆ. ನೀಟ್ ಪರೀಕ್ಷೆ ರದ್ದತಿಯಿಂದ 5ವಿದ್ಯಾರ್ಥಿಗಳು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ನೀಟ್ ಪರೀಕ್ಷೆಯಲ್ಲಿ 1ಲಕ್ಷ 80ಸಾವಿರ ವಿದ್ಯಾರ್ಥಿಗಳು ಬರೆದಿದ್ದರು.

ಅಂಬೇಡ್ಕರ್ ಸಂವಿಧಾನ ಕೊಟ್ಟಿರುವುದು ಹೋರಾಟ ಮಾಡಲು ಅನ್ಯಾಯ ವಿರುದ್ದ ನಮ್ಮಹೋರಾಟ ನಿರಂತರ ಎಂದು ಹೇಳಿದರು.

ಮಾಜಿ ಲೋಕಸಭಾ ಸದಸ್ಯರಾದ ನಾರಾಯಣಸ್ವಾಮಿ,ಮಾಜಿ ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ, ಅಬ್ದುಲ್ ವಾಜಿದ್, ವಿ.ಎಸ್.ಉಗ್ರಪ್ಪ, ಜೆ.ಹುಚ್ಚಪ್ಪ, ರಾಮಚಂದ್ರಪ್ಪ, ರವರು ಭಾಗವಹಿಸಿದ್ದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium