'ಅಖಿಲ ಕರ್ನಾಟಕ ಸರ್ಕಾರಿ ಪರವನಾಗಿ ಭೂ ಮಾಪಕರ ಸಂಘ' ದಿಂದ ಪತ್ರಿಕಾಗೋಷ್ಠಿ
ಪರವಾನಗಿ ಭೂಮಾಪಕರ ಸರ್ಕಾರಿ ಹುದ್ದೆಯಲ್ಲಿ ಎಲಿನಗೊಳ್ಳಿಸಲು ವಿಶೇಷ ನೇಮಕಾತಿ ಬಗ್ಗೆ
ಅಥವಾ
ಸಮಾನ ಕೆಲಸಕ್ಕೆ ಸಮಾನ ವೇತನ ಶೀರ್ಷಿಕೆ ಅಡಿಯಲ್ಲಿ ಕ್ರಮ ವಹಿಸುವ ಬಗ್ಗೆ
1. ಪರವಾನಗಿ ಭೂಮಾಪಕರನ್ನು 2000 ರಲ್ಲಿ ಕೆ.ಎಲ್.ಆರ್ ಆಕ್ಟ್ 46 ರ ತಿದ್ದುಪಡಿಯಂತೆ ಇಲಾಖೆಗೆ ಪರಿಚಯಿಸಲಾಗಿತ್ತು.
2. 2002 ರಲ್ಲಿ ಸುಮಾರು 800 ರಿಂದ 1000 ಪರವಾನಗಿ ಭೂಮಾಪಕರಿಗೆ ನಿಯಮಾನುಸಾರ ಇಲಾಖೆಯಲ್ಲಿ ತರಭೇತಿ ನೀಡಿ ಜಿಲ್ಲಾವಾರು ಕೆಲಸ ನಿರ್ವಹಿಸಲು ಅನುವು ಮಾಡಿಕೊಡಲಾಗಿತ್ತು.
3. ಇಲಾಖೆಯಲ್ಲಿ ಎರಡನೇ ದರ್ಜೆ ಭೂಮಾಪಕರ ಸಂಭಾವನೆಯನ್ನು ಆಧಾರವಾಗಿ ಇಟ್ಟುಕೊಂಡು ಮತ್ತು ಬಾಂದುಜವಾನನ ವೇತನವನ್ನು ಆಧಾರವಾಗಿ ಇಟ್ಟುಕೊಂಡು ಪ್ರತಿ ಮಾಹೆ 18 ಅಡತಗಳು ಪ್ರತಿ ಕಡತಕ್ಕೆ 300 ರೂಗಳಂತೆ ಖಚಿತ ಪಡಿಸಿ ರೈತರಿಂದ ನೇರವಾಗಿ ಹಣಪಡೆದು ಅದರಲ್ಲಿ 20% ಹಣವನ್ನು ಇಲಾಖೆಗೆ ಕಟ್ಟಿ ಸಂಬಂಧಪಟ್ಟ ದಾಖಲೆಗಳನ್ನು ಪಡೆದು ರೈತರ ಕೆಲಸ ಮಾಡಿಕೊಡಲು ಅಂದಿನ ಆಯುಕ್ತರು
ನಡವಳಿಯನ್ನು ಮಾಡಿ ಇದನ್ನು ವ್ಯವಸ್ಥೆಗೆ ತರಲಾಗಿತು. 4. ಪರವಾನಗಿ ಭೂಮಾಪಕರಿಗೆ ನಿಯೋಜಿಸಲಾದ ಕೆಲಸಗಳು ಈ ರೀತಿ ಇವೆ.
1. ವಿಭಾಗ, ದಾನ, ಕ್ರಯ, ಇದಕ್ಕೆ ಸಂಬಂಧಪಟ್ಟಂತೆ 11-ಇ ನಕ್ಷೆ ತಯಾರಿಸುವುದು.
2. ತತ್ಕಾಲ್ ಪೋಡಿ ಮಾಡಲು
3. ಅಲಿನೇಷನ್ ಪೂರ್ವ ನಕ್ಷೆ ತಯಾರಿಸುವುದು. ಇವುಗಳನ್ನು ಮಾತ್ರ ಮೀಸಲಾಗಿಟ್ಟು ಕೆಲಸ ನಿರ್ವಹಿಸಲು ಅನುವು ಮಾಡಿಕೊಟ್ಟಿರುತ್ತದೆ.
4. ಇದಾದನಂತರ ಕೆಎಲ್‌ಆರ್ ಆಕ್ಟ್ ತಿದ್ದುಪಡಿ ಮಾಡಿ ಹೊಸ ಹುದ್ದೆಗಳನ್ನು ಸೃಜೀಸಲು ಆವಕಾಶ ಮಾಡಿಕೊಡಲಾಗಿತು.
5. 2005, 2008, 2011, 2013, 2017, 2020, 2021, 2022, 2023, 2024 ರೀತಿಯಾಗಿ ಸುಮಾರು 7500 ಪರವಾನಗಿ ಭೂಮಾಪಕರನ್ನು ಇಲಾಖೆಗೆ ಸಿಇಟಿ ಪರೀಕ್ಷೆ ಮೂಲಕ ತೆಗೆದುಕೊಳ್ಳಲಾಗಿತ್ತು. ಇದರಲ್ಲಿ ಹಾಲಿ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತೀರುವ ಪರವಾನಗಿ ಭೂಮಾಪಕರ ಸಂಖ್ಯೆ 5000 ಗಳಷ್ಟು ಇರುತ್ತದೆ
6. ಇದಾದನಂತರ ಇಲಾಖೆ ತತ್ಕಾಲ್ ಪೋಡಿ ಆಂದೋಲನ ಮಾಡಿ ಪರವಾನಗಿ ಭೂಮಾಪಕರನ್ನು ಭೂಮಾಪಕರಿಗೆ ಪ್ರತಿ ಕಡತಕ್ಕೆ 800 ರೂಗಳಂತೆ ಸಂಭಾವಣೆಯನ್ನು ನೀಡಲಾಗಿತ್ತು.
7. 2021 ರಲ್ಲಿ ಕೆಎಲ್‌ಆರ್ ಆಕ್ಟ್ ತಿದ್ದುಪಡಿ ಮಾಡಿ ಸರ್ಕಾರಿಗೆ ಭೂಮಾಪಕರು ನಿರ್ವಹಿಸಬಹುದಾದ ಎಲ್ಲಾ ಕೆಲಸವನ್ನು ಪರವಾನಗಿ ಭೂಮಾಪಕರು ನಿರ್ವಹಿಸಲು ಆವಕಾಶ ಮಾಡಿಕೊಡಲಾಗಿತ್ತು. ಅದರಂತೆ ವಿಭಾಗ, ದಾನ, ಕ್ರಯ, ಇದಕ್ಕೆ ಸಂಬಂಧಪಟ್ಟಂತೆ 11-ಇ ನಕ್ಷೆ ತಯಾರಿಸುವುದು.
Comments
Post a Comment