ಜೆಡಿಎಸ್ ಗ್ರೇಟರ್ ಬೆಂಗಳೂರು ಸಮಿತಿಯ ವಿವಿಧ ವಿಭಾಗಗಳಿಗೆ ಪದಾಧಿಕಾರಿಗಳ ನೇಮಕ

ಬೆಂಗಳೂರು, ಮೇ 25, 2026

ಜೆಡಿಎಸ್ ಪಕ್ಷದ ರಾಜ್ಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾರ್ಗದರ್ಶನದ ಮೇರೆಗೆ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ ಹಾಗೂ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ ರಮೇಶ್ ಗೌಡ ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಪತ್ರಗಳನ್ನು ಹಸ್ತಾಂತರ ಮಾಡಿದರು. 

ಸೋಮವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂದಿನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಲಾಯಿತು.  ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಶೈಲಾ ಸಂತೋಜಿ ರಾವ್, ಯುವ ಜನತಾದಳ ಅಧ್ಯಕ್ಷರಾಗಿ ಆರ್. ಸ್ಯಾಮಿಯಲ್, ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಎಂ ಗೋಪಾಲ್, ಸೇವಾ ವಿಭಾಗದ ಅಧ್ಯಕ್ಷರಾಗಿ ಪಿ.ಮಹೇಶ್, ಪರಿಶಿಷ್ಟ ಪಂಗಡ ಅಧ್ಯಕ್ಷರಾಗಿ ವಿ.ಜನಾರ್ದನ್, ಮಾಹಿತಿ ತಂತ್ರಜ್ಞಾನ ಅಧ್ಯಕ್ಷರಾಗಿ ಫಣಿರಾಜ್ ಹಿರಿಯಣ್ಣ ಗೌಡ, ಮುಸ್ಲಿಂ ಅಲ್ಪಸಂಖ್ಯಾತರ ಅಧ್ಯಕ್ಷರಾಗಿ ಅಫ್ರೋಜ್ ಬೇಗ್, ಕ್ರೈಸ್ತ ಅಲ್ಪಸಂಖ್ಯಾತರ ಅಧ್ಯಕ್ಷರಾಗಿ ಚಂದ್ರನ್ ಚಾರ್ಲ್ಸ್, ಕಾನೂನು ವಿಭಾಗದ ಅಧ್ಯಕ್ಷರಾಗಿ ಆದಿತ್ಯ ಎನ್.ರಾಜ್, ಇದೇ ವಿಭಾಗದ ಕಾರ್ಯಧ್ಯಕ್ಷರಾಗಿ ವಿನಯ್ ಕುಮಾರ್, ಮಹಾಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ಸೂರ್ಯ ಮತ್ತು ವೈದ್ಯಕೀಯ ವಿಭಾಗದ ಅಧ್ಯಕ್ಷರಾಗಿ ಡಾ. ಎಂ.ಭಾರದ್ವಾಜ್ ಅವರುಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.

ಗ್ರೇಟರ್ ಬೆಂಗಳೂರು ಜೆಡಿಎಸ್ ನೂತನ ಪದಾಧಿಕಾರಿಗಳಿಗೂ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಮುಖ್ಯವಾಗಿ ಕಾರ್ಯಧ್ಯಕ್ಷರಾಗಿ ಟಿ.ಆರ್. ತುಳಸಿ ರಾಮ್, ಮಹಾಪ್ರದಾನ ಕಾರ್ಯದರ್ಶಿಯಾಗಿ ಎಸ್ ರಮೇಶ್, ಹಿರಿಯ ಉಪಾಧ್ಯಕ್ಷರುಗಳಾಗಿ ಬಿ.ಅಂದಾನಪ್ಪ, ಕೆ.ಬಾಗೇಗೌಡ, ಹೆಚ್.ಎಂ. ರಾಮಯ್ಯ ಮತ್ತು ಶ್ರೀರಾಮೇಗೌಡ ಎನ್ ಕೃಷ್ಣಪ್ಪ, ಉಪಾಧ್ಯಕ್ಷರಾಗಿ ಬಿ. ಭದ್ರೆಗೌಡ, ಹೆಚ್.ಜಿ. ಉಮೇಶ್, ಲಕ್ಷ್ಮೀನಾರಾಯಣ್, ಸುರೇಶ್ ನಾಗವಾರ, ಎ.ರುದ್ರಪ್ಪ, ತಾರಾ ಲೋಕೇಶ್, ಎಂ. ಚಂದ್ರೇಗೌಡ ಅವರುಗಳನ್ನು; ಪ್ರಧಾನ ಕಾರ್ಯದರ್ಶಿಗಳಾಗಿ ಆರ್. ಅಭಿಷೇಕ್, ಶ್ವೇತಾ ಯಾದವ್, ಕೆ.ಬಿ. ಶ್ರೀನಿವಾಸ್, ಹೆಚ್.ಪಿ. ರತ್ನ ರಾಜೇಗೌಡ ಅವರನ್ನು ನೇಮಿಸಿ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಆದೇಶ ಪತ್ರಗಳನ್ನು ಪಕ್ಷದ ಕಚೇರಿಯಲ್ಲಿ ಹಸ್ತಾಂತರ ಮಾಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ  ಹೆಚ್.ಎಂ. ರಮೇಶ್ ಗೌಡ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರು ಚುನಾವಣೆಗೆ ಬಿರುಸಿನ ತಯಾರಿ ನಡೆಸುವಂತೆ ಸ್ಪಷ್ಟವಾಗಿ ಸೂಚಿಸಿದ್ದಾರೆ. ಹೀಗಾಗಿ ನೂತನ ಪದಾಧಿಕಾರಿಗಳು ಹಾಗೂ ನಗರದ ಎಲ್ಲಾ ಮುಖಂಡರು, ಕಾರ್ಯಕರ್ತರು ಸಮರ್ಪಣಾ ಭಾವದಿಂದ ಪಕ್ಷದ ಗೆಲುವಿಗೆ ದುಡಿಮೆ ಮಾಡಬೇಕು ಎಂದು ನಿರ್ದೇಶನ ನೀಡಿದರು.

ವಾರ್ಡ್ ಹಾಗೂ ಮತಗಟ್ಟೆ ಮಟ್ಟದಲ್ಲಿ ಪದಾಧಿಕಾರಿಗಳು ಅತ್ಯಂತ ಉತ್ತಮವಾಗಿ ಪಕ್ಷವನ್ನು ಸಂಘಟಿಸಬೇಕು. ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರು ಕೆಲ ಸೂಚನೆಗಳನ್ನು ನೀಡಿ ಅವುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಸ್ಪಷ್ಟವಾಗಿ ಆದೇಶ ಮಾಡಿದ್ದಾರೆ ಎಂದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium