ಸಂಘಟನೆ, ಹೋರಾಟ, ಸಮರ್ಥ ನಾಯಕತ್ವ ಡಿ.ಕೆ.ಶಿವಕುಮಾರ್ ರವರು ಕೊಟ್ಯಂತರ ಯುವಕರಿಗೆ ಸ್ಪೂರ್ತಿ, ಪ್ರೇರಣೆಯಾಗಿದ್ದಾರೆ-ಮಂಜುನಾಥಗೌಡ ಹೆಚ್.ಎಸ್

ಸಂಘಟನೆ, ಹೋರಾಟ, ಸಮರ್ಥ ನಾಯಕತ್ವ ಡಿ.ಕೆ.ಶಿವಕುಮಾರ್ ರವರು ಕೊಟ್ಯಂತರ ಯುವಕರಿಗೆ ಸ್ಪೂರ್ತಿ, ಪ್ರೇರಣೆಯಾಗಿದ್ದಾರೆ-ಮಂಜುನಾಥಗೌಡ ಹೆಚ್.ಎಸ್

ಕೆಪಿಸಿಸಿ ಕಛೇರಿ, ಭಾರತ್ ಜೋಡೋ ಭವನದಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ರಕ್ತದಾನ ಶಿಬಿರ ಮತ್ತು ಪೌರ ಕಾರ್ಮಿಕರು, ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ.

ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್ ರವರು, ವಿಧಾನಪರಿಷತ್ ಸದಸ್ಯರಾದ ಸಲೀಮ್ ಅಹಮದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣರವರು ರಾಜ್ಯ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾದ ಮಂಜುನಾಥ್ ಗೌಡ ಹೆಚ್.ಎಸ್.ರವರು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ, ದಿನಸಿ ಕಿಟ್ ಗಳನ್ನು ವಿತರಿಸಿದರು.
ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಂಜುನಾಥಗೌಡ ಹೆಚ್.ಎಸ್.ರವರು ಮಾತನಾಡಿ ಡಿ.ಕೆ.ಶಿವಕುಮಾರ್ ರವರ ಹೋರಾಟ , ಸಂಘಟನೆ, ನಾಯಕತ್ವ ಗುಣಗಳು ಕೊಟ್ಯಂತರ ಯುವಕರಿಗೆ ಸ್ಪೂರ್ತಿ ಪ್ರೇರಣೆಯಾಗಿದೆ. 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದರೆ ಜನರ ಪ್ರೀತಿ ಎಷ್ಟು ಗಳಿಸಿದ್ದಾರೆ ಎಂಬುದು ಅರ್ಥವಾಗುತ್ತದೆ. ಕಾಂಗ್ರೆಸ್ ಪಕ್ಷ ನನ್ನ ರಕ್ತದಲ್ಲಿ ಇದೆ ಹೆಮ್ಮೆಯಿಂದ ಹೇಳುತ್ತಾರೆ. 

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ರವರ ಅಧ್ಯಕ್ಷತೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣ ಜಾರಿಗೆ ತಂದರು. ಶಕ್ತಿ ಯೋಜನೆ ಮಹಿಳೆಯರಿಗೆ ಬಸ್ ಪ್ರಯಾಣ 500ಕೋಟಿಗಿಂತ ಹೆಚ್ಚು ಮಹಿಳೆಯರು ಉಚಿತ ಬಸ್ ಪ್ರಯಾಣ, ಅನ್ನ ಭಾಗ್ಯ, ಯುವ ನಿಧಿ, ಮನೆಯ ಯಾಜಮಾನಿಗೆ 2 ಸಾವಿರ, 200ಯುನಿಟ್ ವಿದ್ಯುತ್ ಉಚಿತ ಇಂದು ಈ ಯೋಜನೆಯ ರಾಜ್ಯದ ಪ್ರತಿ ಕುಟುಂಬಗಳಿಗೆ ತಲುಪಿದೆ.

ಬೆಂಗಳೂರುನಗರ ಅಭಿವೃದ್ಧಿಗೆ ವಿಶೇಷ ಯೋಜನೆ, ಯೋಚನೆ ಇಟ್ಟಿಕೊಂಡಿರುವ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ನಗರಾಭಿವೃದ್ಧಿ ಸಚಿವರಾಗಿ ಹೊಣೆ ಹೊತ್ತ ಮೇಲೆ ಬೆಂಗಳೂರುನಗರ ಅಭಿವೃದ್ಧಿಗೆ ವೇಗ ಹೆಚ್ಚಿದೆ. ಸಂಚಾರ ಸುಮಗಮಕ್ಕೆ ಟನಲ್ ರಸ್ತೆ ಯೋಜನೆ ಕಾಯಕಲ್ಪ ಕೊಟ್ಟಿದ್ದಾರೆ. 
ಮಾದರಿ ನಗರ ನಿರ್ಮಾಣಕ್ಕೆ ದಿಟ್ಟಹೆಜ್ಜೆ ಇಟ್ಟಿದ್ದಾರೆ.

ಬೆಂಗಳೂರುನಗರ 7ಲಕ್ಷ ಆಸ್ತಿ ಮಾಲೀಕರಿಗೆ ಬಿ.ಖಾತೆಯಿಂದ ಎ.ಖಾತ ಪರಿವರ್ತನಾ ಯೋಜನೆ ಭೂ ಗ್ಯಾರಂಟಿ 6ನೇ ಗ್ಯಾರಂಟಿ ಯೋಜನೆ ಜಾರಿಗೆ ತಂದು ಆಸ್ತಿ ಮಾಲೀಕರಿಗೆ ಆಸರೆಯಾಗಿದ್ದಾರೆ ಎಂದು ಹೇಳಿದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium