ಎಸ್‌ಆರ್‌ಎಂಡಿ ಡಿವೈನ್‌ಟಚ್ ಸಂಸ್ಥೆಯಿಂದ ಮಕ್ಕಳಿಗಾಗಿ "ಥ್ರೂ ಅವರ್ ಐಸ್" ಪ್ರದರ್ಶನ


ಬೆಂಗಳೂರು, ಜೂನ್ 14, 2026

ಎಸ್‌ಆರ್‌ಎಂಡಿ ಡಿವೈನ್‌ಟಚ್ ಪ್ರಸ್ತುತಪಡಿಸುವ "ಥ್ರೂ ಅವರ್ ಐಸ್" (ನಮ್ಮ ಕಣ್ಣುಗಳ ಮೂಲಕ) – ಮಕ್ಕಳಿಗಾಗಿ ಒಂದು ತಲ್ಲೀನಗೊಳಿಸುವ ಪ್ರದರ್ಶನ 13-14 ಜೂನ್ 2026 | ಗಾಂಧಿ ಭವನ, ಕುಮಾರಪಾರ್ಕ್, ಬೆಂಗಳೂರು

ಮೌಲ್ಯಾಧಾರಿತ ಶಿಕ್ಷಣದ ಮೂಲಕ ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಮಕ್ಕಳನ್ನು ಪೋಷಿಸುತ್ತಿರುವ ಜಾಗತಿಕ ಉಪಕ್ರಮವಾದ ಎಸ್‌ಆರ್‌ಎಂಡಿ ಡಿವೈನ್‌ಟಚ್ (SRMD Divinetouch), ಇಂದು ವಿಶ್ವದಾದ್ಯಂತ 252 ಕೇಂದ್ರಗಳ ಮೂಲಕ 2,50,000ಕ್ಕೂ ಹೆಚ್ಚು ಮಕ್ಕಳನ್ನು ತಲುಪಿದೆ.
"ಧೂ ಅವರ್ ಐಸ್" – "ಓಪನಿಂಗ್ ಮೈಂಡ್ಸ್, ಕನೆಕ್ಸಿಂಗ್ ಹಾರ್ಟ್ಸ್" (ನಮ್ಮ ಕಣ್ಣುಗಳ ಮೂಲಕ – ಮನಸ್ಸುಗಳನ್ನು ಮುಕ್ತಗೊಳಿಸುವುದು, ಹೃದಯಗಳನ್ನು ಬೆಸೆಯುವುದು) ಎನ್ನುವುದು 4 ರಿಂದ 16 ವರ್ಷ ವಯಸ್ಸಿನ ಮಕ್ಕಳ ಪಯಣವನ್ನು ಅನಾವರಣಗೊಳಿಸುವ ಒಂದು ತಲ್ಲೀನಗೊಳಿಸುವ ಪ್ರದರ್ಶನವಾಗಿದೆ. ಈ ಪ್ರದರ್ಶನದಲ್ಲಿ ಮಕ್ಕಳು ಅನುಭವದ ಕಲಿಕೆಯ ಮೂಲಕ ಮೌಲ್ಯಗಳು, ಭಾವನಾತ್ಮಕ ಬುದ್ದಿವಂತಿಕೆ, ನಾಯಕತ್ವ ಮತ್ತು ಜೀವನ ಕೌಶಲ್ಯಗಳನ್ನು ಹೇಗೆ ಅನ್ವೇಷಿಸುತ್ತಾರೆ ಎಂಬುದನ್ನು ಪ್ರದರ್ಶಿಸಲಾಗುತ್ತದೆ.

ಸಹಾನುಭೂತಿ, ಕೃತಜ್ಞತೆ, ಆತ್ಮವಿಶ್ವಾಸ ಮತ್ತು ಜಾಗೃತಿಯನ್ನು ಬೆಳೆಸಲು ವಿನ್ಯಾಸಗೊಳಿಸಲಾದ ಸಂವಾದಾತ್ಮಕ ಅನುಭವಗಳ ಮೂಲಕ ಮಕ್ಕಳು ಹೇಗೆ ಕಲಿಯುತ್ತಾರೆ, ಆಲೋಚಿಸುತ್ತಾರೆ ಮತ್ತು ತಮ್ಮನ್ನು ತಾವು ವ್ಯಕ್ತಪಡಿಸುತ್ತಾರೆ ಎಂಬುದನ್ನು ಕಣ್ಣಾರೆ ವೀಕ್ಷಿಸಲು ಈ ಪ್ರದರ್ಶನವು ಪೋಷಕರಿಗೆ, ಶಿಕ್ಷಕರಿಗೆ ಮತ್ತು ಸಮಾಜದ ಜನರಿಗೆ ಒಂದು ಉತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತದೆ.

ಈ ಕಾರ್ಯಕ್ರಮವು ಉಚಿತವಾಗಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರುತ್ತದೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium