ಜಾತಿ, ಮತ, ಧರ್ಮ ಭೇಧವಿಲ್ಲ, ದೇವರ ಮುಂದೆ ಎಲ್ಲರು ಸಮಾನರು-ಶ್ರೀ ಶ್ರೀ ಶ್ರೀ ಸುಭೇಂದ್ರ ತೀರ್ಥ ಸ್ವಾಮೀಜಿ
ಬೆಂಗಳೂರು, ಜೂನ್ 19, 2026
3000ಸಾವಿರ ಮಹಿಳೆಯರಿಂದ ಲೋಕಕಲ್ಯಾಣಾರ್ಥಕ್ಕಾಗಿ ಶ್ರೀ ಲಲಿತಾ ಸಹಸ್ರನಾಮ ಪೂಜೆ, ಮಂತ್ರ ಪಠಣೆ-ರಕ್ಷಾ ಫೌಂಡೇಷನ್
ಚಂದ್ರಗುಪ್ತಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ ವತಿಯಿಂದ 4ನೇ ವರ್ಷದ ಲಲಿತಾ ಸಹಸ್ರನಾಮ ಸಮಾರಂಭ.
3000ಸಾವಿರಕ್ಕೂ ಹೆಚ್ಚು ಮಹಿಳೆಯರು ಶ್ರೀ ಲಲಿತಾ ಸಹಸ್ತನಾಮ ಕಾರ್ಯಕ್ರಮವನ್ನು ಮಂತ್ರಾಲಯ ಮಠದ ಶ್ರೀ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಸ್ವಾಮಿಗಳು ಚಾಲನೆ ನೀಡಿದರು.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರು, ಶಾಸಕರಾದ ಸಿ.ಕೆ.ರಾಮಮೂರ್ತಿರವರು, ಆರ್.ಎಸ್.ಎಸ್.ಕ್ಷೇತ್ರಿಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ಮತ್ತು ಚಲನಚಿತ್ರ ನಟಿ ಪ್ರಣೀತ ಸುಭಾಶ್, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ನಾಗರತ್ನ ರಾಮಮೂರ್ತಿರವರು ಭಾಗವಹಿಸಿದ್ದರು.
*ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ* ರವರು ಮಾತನಾಡಿ ಉದ್ಯಾನನಗರಿ ಎಂಬ ಪ್ರಸಿದ್ದಿ ಇರುವ ಬೆಂಗಳೂರುನಗರದಲ್ಲಿ ಲಲಿತಾ ಸಹಸ್ರನಾಮ ಪೂಜೆ, ಪಠಣೆ ಕಾರ್ಯಕ್ರಮವನ್ನು ನಾಲ್ಕು ವರ್ಷಗಳಿಂದ ಹಮ್ಮಿಕೊಂಡು ಬರುತ್ತಿದ್ದಾರೆ ಮತ್ತು 14ವರ್ಷದಿಂದ ನೋಟ್ ಪುಸ್ತಕವನ್ನು ರಕ್ಷಾ ಫೌಂಡೇಷನ್ ಕಾರ್ಯಕ್ರಮ ಮಾಡುತ್ತಿದೆ.
ಜಾತಿ ಮತ ಪಂಥ ಭೇದವಿಲ್ಲದೇ ಎಲ್ಲರು ಸೇರಿ ಲಲಿತಾರಾಧನೆ ಮಾಡುತ್ತಿದ್ದಾರೆ. ಶ್ರೀಮಂತರು, ಮಧ್ಯಮ ವರ್ಗ, ಬಡವರು, ಪೌರ ಕಾರ್ಮಿಕರು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಪೌರ ಕಾರ್ಮಿಕರು ಕರ್ತವ್ಯದ ಜೊತೆಯಲ್ಲಿ ದೈವ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ದೇವರ ಮುಂದೆ ಎಲ್ಲರು ಸಮಾನರು. ಸನಾತನ ಹಿಂದೂ ಧರ್ಮದಲ್ಲಿ ವೈಶಿಷ್ಯಗಳನ್ನು ಕಾಣಬಹುದು.
ಲೋಕಕಂಠಕರನ್ನು ನಾಶವಾಗಿ ಶಿಷ್ಟರನ್ನು ರಕ್ಷಣೆ ಮಾಡಲು ಶ್ರೀ ಲಲಿತಾ ಅವತಾರಿಸಿದ್ದಾಳೆ. ಪ್ರತಿನಿತ್ಯ ಶ್ರೀ ಲಲಿತಾ ತಾಯಿ ಉಪಾಸನೆ, ಸ್ಮರಣೆ ಮಾಡಕೊಂಡರೆ ಕಷ್ಟಗಳು ದೂರವಾಗಲಿದೆ.
ನಮ್ಮ ದೇಶ ಪ್ರಗತಿಪಥದಲ್ಲಿ ಸಾಗುತ್ತಿದೆ. ದೇಶದ ಸುರಕ್ಷತೆ, ರಕ್ಷಣೆಗಾಗಿ ಶ್ರೀ ಲಲಿತಾಂಬೆಯ ಕೃಷೆ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದು ಹೇಳಿದರು.
*ಬಿ.ವೈ.ವಿಜಯೇಂದ್ರ* ರವರು ಮಾತನಾಡಿ ರಕ್ಷಾ ಫೌಂಡೇಷನ್ ವತಿಯಿಂದ ಶ್ರೀ ಲಲಿತಾ ಸಹಸ್ರನಾಮ ಪುಣ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಲಲಿತಾಂಬೆಯ ಆರಾಧನೆಯಿಂದ ಮತ್ತು ಸ್ವಾಮೀಜಿರವರ ಆಶೀರ್ವಾದ ಮಾರ್ಗದರ್ಶನ ಎಲ್ಲರಿಗೂ ಲಭಿಸಬೇಕು. ದೇಶ ಮತ್ತು ಸಂಸ್ಕೃತಿ ಸಂಪ್ರಾದಯ ಉಳಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖ ಎಂದು ಹೇಳಿದರು.
*ಸಿ.ಕೆ.ರಾಮಮೂರ್ತಿರವರು* ಮಾತನಾಡಿ ತಾಯಿ,ತಂಗಿ ಅಕ್ಕ, ಪತ್ನಿಯಾಗಿ ಮತ್ತು ಕುಟುಂಬದ ಜೊತೆಯಲ್ಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವಳು.
ಶ್ರೀ ಲಲಿತಾ ಸಹಸ್ರನಾಮ ಪಠಿಸುವುದರಿಂದ ಸಕಲ ಸಂಪತ್ತು ಮತ್ತು ಮಕ್ಕಳಿಗೆ ಜ್ಞಾನವೃದ್ಧಿ , ಪಾಪ ಪರಿಹಾರ,ಗೃಹ ದೋಷ ನಿವಾರಣೆ, ಶತ್ರುಭಯ, ಸಂತಾನಭಾಗ್ಯ ಲಭಿಸುತ್ತದೆ ನಮ್ಮ ಪುರಾಣದಲ್ಲಿ ಉಲ್ಲೇಖವಿದೆ.
ನಾನು ಎಂಬುದು ಅಹಂಕಾರ, ನಾವೆಲ್ಲರು ಎಂದು ಕೂಡಿ ಬಾಳಬೇಕು ಅದು ನಿಜವಾದ ಜೀವನ ಅರ್ಥ. ಅದರಿಂದ ನಮ್ಮ ಜಯನಗರ ಕ್ಷೇತ್ರ ಮತ್ತು ನಾಡಿನ ಜನರ ಒಳಿತಾಗಲಿ ಎಂದು ಸಾವಿರಾರು ಮಹಿಳೆಯರ ಸಮಾಗಮದಲ್ಲಿ ಶ್ರೀ ಲಲಿತಾ ಸಹಸ್ರನಾಮ ಪಠಣಿ ಮತ್ತು ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮಾಜಿ ಪಾಲಿಕೆ ಸದಸ್ಯರುಗಳಾದ ಬಿ.ಸೋಮಶೇಖರ್ , ಶ್ರೀಮತಿ ಮಾಲತಿ ಸೋಮಶೇಖರ್, ಚಂದ್ರಶೇಖರ್ ರಾಜು, ಗೋವಿಂದನಾಯ್ಡು, ಜೆಲ್ಲಿ ರಮೇಶ್, ಧನರಾಜ್, ದೀಪಿಕಾ ಮಂಜುನಾಥ್ ರೆಡ್ಡಿ, ಚನ್ನಗಿರಿಯಪ್ಪರವರು ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಮುಖರು, ಸಾರ್ವಜನಿಕರು ಭಾಗವಹಿಸಿದ್ದರು.
Comments
Post a Comment