ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ ಅಸೋಸಿಯೇಷನ್' ನಿಂದ ಪತ್ರಿಕಾಗೋಷ್ಠಿ

ಸರ್ಕಾರದ ರಾಜಧನ ಪಾವತಿ ಅವ್ಯವಸ್ಥೆ - ಗಣಿಗುತ್ತಿಗೆದಾರರಿಗೆ ಸಂಕಷ್ಟ ಬಗ್ಗೆ ಪತ್ರಿಕಾಗೋಷ್ಠಿ 

ಸರ್ಕಾರದ ಬೊಕ್ಕಸಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ರಾಜಧನ ಸಂಗ್ರಹಣೆ ವ್ಯವಸ್ಥೆ ಜಾರಿಯಲ್ಲಿದೆ. ಇದನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸದೇ ಸರ್ಕಾರಕ್ಕೆ ದಿನಃಪ್ರತೀ ಕೋಟ್ಯಾಂತರ ರೂ. ನಷ್ಟವಾಗುತ್ತಿದೆ. ಮಾತ್ರವಲ್ಲದೇ ಗಣಿಗುತ್ತಿಗೆದಾರರಿಗೂ ಗಣಿಗಾರಿಕೆ ನಡೆಸಲು ಕಷ್ಟವಾಗುತ್ತಿದೆ.

ಶ್ರೀ ಅರುಣ್ ಕುಮಾರ್ ಉಪಾಧ್ಯಕ್ಷರು

ಶ್ರೀ ಪುರುಷೋತ್ತಮ ಪ್ರಧಾನ ಕಾರ್ಯದರ್ಶಿ

ಶ್ರೀ ಎನ್ ಮಂಜುನಾಥ್

ಹಿಂದಿನ ಸರ್ಕಾರದ ಅವಧಿಯಲ್ಲಿ ವಿಧಾನಸಭೆಯ ಸಾರ್ವಜನಿಕ ಲೆಕ್ಕ-ಪತ್ರಗಳ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀ ಕೃಷ್ಣ ಬೈರೇಗೌಡರ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕ-ಪತ್ರಗಳ ಸಮಿತಿಯು ಕೇವಲ ಕಟ್ಟಡಕಲ್ಲು ಗಣಿ ಉದ್ಯಮದಿಂದಲೇ ವರ್ಷಕ್ಕೆ ಸುಮಾರು ರೂ. 18,000-20,000 ಕೋಟಿಯಷ್ಟು ನಷ್ಟವಾಗುತ್ತಿದೆ ಎಂದು ವರದಿಯನ್ನು ನೀಡಿರುತ್ತಾರೆ. ಮಾತ್ರವಲ್ಲದೇ Report of the Comptroller and Auditor General of India on Revenue Sector-2017 ವರದಿಯಲ್ಲಿಯೂ ಕೂಡಾ ಸರ್ಕಾರಕ್ಕೆ ನಷ್ಟವಾಗುತ್ತಿರುವ ಬಗ್ಗೆ ಪದೇ ಪದೇ ಉಲ್ಲೇಖಿಸಿರುತ್ತಾರೆ.

ಸಂಘಟನಾ ಕಾರ್ಯದರ್ಶಿ

ಈ ಬಗ್ಗೆ ನಮ್ಮ ಮನವಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರು ದಿನಾಂಕ: 12.10.2023 ರಂದು ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ಸಭೆ ಕರೆದು ಗಣಿಗುತ್ತಿಗೆದಾರರಿಂದಲೇ ರಾಜಧನವನ್ನು ಪಾವತಿಸಿ ಖನಿಜಗಳನ್ನು ಖರೀದಿಸಿ ಕಾಮಗಾರಿಗಳಿಗೆ ಉಪಯೋಗಿಸಬೇಕೆಂದು ತೀರ್ಮಾನವನ್ನು ತೆಗೆದುಕೊಂಡಿರುತ್ತಾರೆ. ಅದರಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಾನ್ಯ ನಿರ್ದೇಶಕರು ದಿನಾಂಕ: 06.02.2024 ಮತ್ತು 14.02.2024 ರಂತೆ 2 ಸುತ್ತೋಲೆಗಳನ್ನು ಹೊ ಹೊರಡಿಸಿರುತ್ತಾರೆ. ಇದರಂತೆ ಎಲ್ಲಾ ಜಿಲ್ಲೆಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ರಾಜಧನ ಕ್ಲಿಯರೆನ್ಸ್ ಪತ್ರ ಪಡೆದು ಸರ್ಕಾರಿ ಕಾಮಗಾರಿಗಳಿಗೆ ಬಿಲ್ -02-

ಪಾವತಿ ಮಾಡಬೇಕಾಗಿರುತ್ತದೆ. ಇದನ್ನು ಯಾವುದೇ ಇಲಾಖೆಗಳು ಪಾಲಿಸಿರುವುದಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿರುತ್ತದೆ. ಮಾತ್ರವಲ್ಲದೇ ಖಾಸಗೀ ಕಾಮಗಾರಿ ವಲಯಗಳಲ್ಲಿ ಉಪಯೋಗಿಸುವ ಕಟ್ಟಡಕಲ್ಲು ಉತ್ಪನ್ನಗಳ ಮೇಲೆ ಸರ್ಕಾರ ತೆರಿಗೆ ಸೋರಿಕೆ ಬಗ್ಗೆ ಕ್ರಮ ಕೈಗೊಳ್ಳದೆ ಖಾಸಗೀ ಕಾಮಗಾರಿ ನಿರ್ವಹಿಸುವಾಗಲೂ ತೆರಿಗೆ ಸೋರಿಕೆಯಾಗುತ್ತಿದೆ.

ಸರ್ಕಾರಿ ಕಾಮಗಾರಿ ನಿರ್ವಹಣಾ ಇಲಾಖೆಗಳಿಂದ ಕಳೆದ ವರ್ಷ 975.62 ಕೋಟಿ ರೂ. ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಂದಾಯವಾಗಿದ್ದರೂ ಇದು ರಾಜಧನವೋ/ ದಂಡವೋ ಎಂಬುದರ ಬಗ್ಗೆ ಸರ್ಕಾರದಲ್ಲಿ ಸ್ಪಷ್ಟತೆ ಇರುವುದಿಲ್ಲ.

ಈ ಅವ್ಯವಸ್ಥೆಗಳಿಂದಾಗಿ ಪ್ರತೀ ಟನ್‌ಗೆ ಕೇಂದ್ರ ಸರ್ಕಾರಕ್ಕೆ ರಾಜಧನದ ಮೇಲೆ G.S.T 9%, ಮಾರಾಟದ ಮೇಲೆ G.S.T 2 1/2%,,, ರಾಜ್ಯ ಸರ್ಕಾರಕ್ಕೆ ರಾಜಧನದ ಮೇಲೆ G.S.T 9%, ಮಾರಾಟದ ಮೇಲೆ G.S.T 2 1/2%, ರಾಜಧನದ ಮೇಲೆ A.P 28 ರೂ. D.M.F 7 ರೂ. ರಾಜಧನ ಪಾವತಿಸಿಲ್ಲವಾದರೆ ದಂಡ 5 ಪಟ್ಟು ಎಲ್ಲವೂ ಸೋರಿಕೆಯಾಗುತ್ತಿದೆ.

ಹಿಂದಿನ ಸರ್ಕಾರ ಕಾನೂನುಬದ್ಧ ಗಣಿಗಾರಿಕೆ ನಡೆಸಲು ಹಾಗೂ ಸರ್ಕಾರಕ್ಕೆ ಆಗುತ್ತಿರುವ ತೆರಿಗೆಯನ್ನು ತಡೆಗಟ್ಟಲು ನಿಯಮಗಳಲ್ಲಿ ತಿದ್ದುಪಡಿ ತಂದಿದ್ದರೂ ಕೂಡಾ ಈ ಸರ್ಕಾರದ ಅವಧಿಯಲ್ಲಿ ಗಣಿಗುತ್ತಿಗೆ ಮಂಜೂರಾತಿಗಳನ್ನು ತ್ವರಿತವಾಗಿ ನೀಡುತ್ತಿಲ್ಲ. ಗಣಿಗುತ್ತಿಗೆ ಮಂಜೂರಾತಿ ಪ್ರದೇಶಗಳು ಲಭ್ಯವಿಲ್ಲದಿದ್ದಲ್ಲಿ ಸರ್ಕಾರಕ್ಕೆ ತೆರಿಗೆ ಸೋರಿಕೆಯಾಗುತ್ತದೆ.

ಲಾರಿ ಮಾಲಕರುಗಳಿಗೆ ಆಗುತ್ತಿರುವ ತೊಂದರೆಯನ್ನು ತಾಳಲಾರದೇ ರಾಮನಗರ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಕಛೇರಿಯ ಎದುರೇ ಹಾಡು-ಹಗಲೇ ನೇಣು ಬಿಗಿದು ಲಾರಿ ಮಾಲಕ ಶ್ರೀ ನಾಗೇಶ್‌ರವರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ.

ಕರ್ನಾಟಕ ರಾಜ್ಯದ ರಾಜಧನ ಮತ್ತು G.S.T ಪಾವತಿ ಅವ್ಯವಸ್ಥೆಗಳಿಂದಾಗಿ ಹೊರ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಕರ್ನಾಟಕಕ್ಕೆ ಯಥೇಚ್ಛವಾಗಿ ಕಟ್ಟಡಕಲ್ಲು ಉತ್ಪನ್ನಗಳು ಪೂರೈಕೆಯಾಗಿ ಕರ್ನಾಟಕ ರಾಜ್ಯಕ್ಕೆ ಎಲ್ಲ ತೆರಿಗೆಗಳು ಸೋರಿಕೆಯಾಗುತ್ತಿದೆ.

ರಾಜಧನ ಪಾವತಿ ವ್ಯವಸ್ಥೆಯನ್ನೇ ಸರಿಪಡಿಸದೇ ಗಣಿಗುತ್ತಿಗೆದಾರರನ್ನು ಬ್ಲಾಕ್‌ಮೇಲ್ ಮಾಡಿ ಸುಲಿಗೆ ಮಾಡಲು ವಿದ್ಯುತ್ ಬಿಲ್‌ನೊಂದಿಗೆ ಕ್ರಷರ್ ಘಟಕದ ಉತ್ಪಾದನಾ ಸಾಮರ್ಥ್ಯವನ್ನು ಲೆಕ್ಕ ಹಾಕಿ ದಂಡ ವಿಧಿಸುವುದು, ಗಣಿಗುತ್ತಿಗೆದಾರರಿಗೆ ದ್ರೋಣ್ ಸರ್ವೆ ಮುಖಾಂತರ ಅವೈಜ್ಞಾನಿಕವಾಗಿ ದಂಡ ವಿಧಿಸುವುದು, ಗೂಡ್ಸ್ ಲಾರಿಗಳಿಗೆ ಜಿ.ಪಿ.ಎಸ್ ಅಳವಡಿಸಿ ಅವೈಜ್ಞಾನಿಕವಾಗಿ ದಂಡ ವಿಧಿಸುವುದು ಮುಂತಾದ ಅವೈಜ್ಞಾನಿಕ ಕ್ರಮಗಳನ್ನು ಸರ್ಕಾರದಿಂದ ಕೈಗೊಳ್ಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ಸಂದಾಯವಾಗತಕ್ಕ  -03-

ರಾಜಧನ ಸಂಗ್ರಹಣೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಸರ್ಕಾರಕ್ಕಾಗುವ ನಷ್ಟವನ್ನು ತಡೆಗಟ್ಟಬೇಕು. ರಾಜಧನ ಪಾವತಿ ವ್ಯವಸ್ಥೆ ಸಮರ್ಪಕವಾಗುವವರೆಗೆ ಯಾವುದೇ ದಂಡವನ್ನು ವಿಧಿಸಬಾರದು. ವಿಧಿಸಿರುವ ದಂಡದ ಪ್ರಮಾಣವನ್ನು ಸ್ಥಗಿತಗೊಳಿಸಬೇಕು. ಈ ಮುಖಾಂತರ ಗಣಿಗುತ್ತಿಗೆದಾರರಿಗೆ ಆಗುತ್ತಿರುವ ಸಮಸ್ಯೆಗಳನ್ನು ಸರ್ಕಾರ ಹೋಗಲಾಡಿಸಬೇಕೆಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್(ರಿ), ಬೆಂಗಳೂರು ಆಗ್ರಹಿಸುತ್ತದೆ. ಹಾಗೂ ಇದನ್ನು ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನ್ಯಾಯಕ್ಕಾಗಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಿರುತ್ತದೆ ಎಂಬುದನ್ನು ಈ ಮೂಲಕ ಸರ್ಕಾರದ ಗಮನಕ್ಕೆ ತಿಳಿಯಪಡಿಸುತ್ತೇವೆ.

ನಮ್ಮ ಕಾನೂನುಬದ್ಧ ನ್ಯಾಯಯುತ ಬೇಡಿಕೆಗಳು:-

01. ಖಾಸಗೀ ಮತ್ತು ಸರ್ಕಾರಿ ಕಾಮಗಾರಿಗಳಿಗೆ ಉಪಯೋಗಿಸುವ ಖನಿಜಗಳ ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಬೇಕು. ಮತ್ತು G.S.T ತೆರಿಗೆ ಪಾವತಿ ವ್ಯವಸ್ಥೆಯಲ್ಲಿರುವಂತೆ ಸರಳೀಕೃತವಾಗಿ ಎಲ್ಲಾ ರೀತಿಯ ತೆರಿಗೆ ಪಾವತಿ ವ್ಯವಸ್ಥೆಗೆ ಕ್ರಮ ವಹಿಸಬೇಕು.

02.ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಖನಿಜ ಉತ್ಪನ್ನಗಳು ರವಾನೆಯಾಗಿ ದಿನಃಪ್ರತೀ ಕೋಟ್ಯಾಂತರ ರೂ. ರಾಜಧನ, G.S.T, D.M.F, A.A.P.P ನಷ್ಟವಾಗುತ್ತಿದೆ. ಮಾತ್ರವಲ್ಲದೇ ಕರ್ನಾಟಕ ರಾಜ್ಯದಲ್ಲಿ ಗಣಿಗಾರಿಕೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಹೊರರಾಜ್ಯಗಳಿಂದ ಬರುವ ಕಟ್ಟಡಕಲ್ಲು ಉತ್ಪನ್ನಗಳ ಪರವಾನಗಿ ಪರ್ಮಿಟ್ ಹಾಗೂ ಟ್ಯಾಕ್ಸ್ ಬಿಲ್‌ಗಳನ್ನು ಪರಿಶೀಲಿಸುವುದಕ್ಕೆ ಕ್ರಮ ವಹಿಸಬೇಕು.

03. ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಬೇಕು. ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕಗೊಳಿಸುವವರೆಗೆ ವಿಧಿಸಿರುವ ದಂಡ ಮತ್ತು ವಿಧಿಸುತ್ತಿರುವ ದಂಡಗಳನ್ನು ಮನ್ನಾ ಮಾಡಬೇಕು.

04. ಸರ್ಕಾರದ ಧೋರಣೆ ತಾಳಲಾರದೇ ರಾಮನಗರ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಕಛೇರಿಯ ಎದುರು ಆತ್ಮಹತ್ಯೆ ಮಾಡಿಕೊಂಡ ಲಾರಿ ಮಾಲಕ ಶ್ರೀ ನಾಗೇಶ್ ರವರ ಕುಟುಂಬಕ್ಕೆ ರೂ. 1 ಕೋಟಿ ಪರಿಹಾರ ನೀಡಬೇಕು.

05. ಕಾನೂನುಬದ್ಧವಾಗಿ ಗಣಿಗುತ್ತಿಗೆ ಕೋರಿ ನೀಡಿರುವ ಅರ್ಜಿಗಳಿಗೆ ಅದಾಲತ್ ಮುಖಾಂತರ ತ್ವರಿತವಾಗಿ ಗಣಿಗುತ್ತಿಗೆ ಮಂಜೂರಾತಿ ನೀಡಬೇಕು. ಮತ್ತು ನಿಯಮಾನುಸಾರ ನೀಡಿರುವ ಎಲ್ಲಾ ಗಣಿಗುತ್ತಿಗೆ ಮಂಜೂರಾತಿ ಅರ್ಜಿಗಳನ್ನು ಮಂಜೂರಾತಿಗೆ ಪರಿಗಣಿಸಬೇಕು. (ಉದಾ: 17.03.2023 ರ ಹಿಂದೆ ಸಲ್ಲಿಸಿರುವ ಅರ್ಜಿಗಳಲ್ಲಿ 2 1/2 ಎಕರೆಗಿಂತ ಕಡಿಮೆ ವಿಸ್ತೀರ್ಣ ಪ್ರದೇಶ ಹೊಂದಿರುವ ಅರ್ಜಿಗಳು ಮತ್ತು ದಿ: 12.08.2016 ರ ಹಿಂದೆ ಗಣಿಗುತ್ತಿಗೆಗೆ ಅರ್ಜಿ ಸಲ್ಲಿಸಿ ಅದು ತಿರಸ್ಕೃತಗೊಂಡು J.D (Joint Director) ಕೋರ್ಟ್ ಅಥವಾ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಅರ್ಜಿಗಳು ಅರ್ಜಿ ಸಲ್ಲಿಸಿರುವ ಸಂದರ್ಭದ ನಿಯಮಗಳ ಅನುಸಾರ ಇದ್ದರೆ ಅದನ್ನು ಪುರಸ್ಕರಿಸಬೇಕು).
-04-

06.ರಾಜಧನ ಪಾವತಿ ವ್ಯವಸ್ಥೆ ಸಮರ್ಪಕವಾದ ನಂತರ ಮುಂದಿನ ಲೆಕ್ಕ-ಪರಿಶೋಧನೆಗೆ ಡೋಣ್ ಸರ್ವೆ ಮುಖಾಂತರ ಪ್ರಸ್ತುತ ಭೂಮಟ್ಟವನ್ನು ದಾಖಲಿಸಿ ಅಳವಡಿಸುವುದಕ್ಕೆ ಕ್ರಮ ವಹಿಸಬೇಕು. ಅಲ್ಲದೇ ಕ್ರಷರ್‌ನಲ್ಲಿ ವಿದ್ಯುತ್ ಬಿಲ್‌ನೊಂದಿಗೆ ಉತ್ಪಾದನಾ ಸಾಮರ್ಥ್ಯವನ್ನು ಲೆಕ್ಕ ಹಾಕುವುದು. ಮತ್ತು ಲಾರಿಗಳಿಗೆ G.P.S ಅಳವಡಿಸುವುದನ್ನು ಕೂಡಾ ರಾಜಧನ ಪಾವತಿ ವ್ಯವಸ್ಥೆ ಸಮರ್ಪಕವಾದ ನಂತರವೇ ಪರಿಗಣಿಸಬೇಕು.

07. ಈಗಾಗಲೇ ಡೋನ್ ಸರ್ವೆ ನಡೆದಿದೆ ಎಂದು ತಿಳಿಸಿರುತ್ತಾರೆ. ಆದರೆ ಇದು ಕಟ್ಟಡಕಲ್ಲು ಗಣಿಗುತ್ತಿಗೆದಾರರ ಗಮನಕ್ಕೆ ಬಂದಿರುವುದಿಲ್ಲ. ಈ ಡೋಣ್ ಸರ್ವೆಯ ವರದಿಯಂತೆ ಬೇಡಿಕೆ ಪತ್ರಗಳನ್ನು ನೀಡುತ್ತಿದ್ದಾರೆ. ಕಟ್ಟಡಕಲ್ಲು ಗಣಿಗುತ್ತಿಗೆದಾರರ ಗಮನಕ್ಕೆ ಬಾರದೆ ಏಕಪಕ್ಷೀಯವಾಗಿ ದ್ರೋಣ್ ಸರ್ವೆ ನಡೆಸಿ ಲೆಕ್ಕ-ಪರಿಶೋಧನೆ ಸಂದರ್ಭದಲ್ಲಿಯೂ ಗಮನಕ್ಕೆ ತಾರದೇ, ದಂಡದ ಬಗ್ಗೆ ಶೋಕಾಸ್ ನೋಟೀಸನ್ನೂ ಕೂಡಾ ನೀಡದೇ ಬೇಡಿಕೆ ಪತ್ರವನ್ನು ನೀಡಿರುವುದು ಕಾನೂನಿಗೆ ವಿರುದ್ಧವಾಗಿರುತ್ತದೆ. ಅಲ್ಲದೇ ಪ್ರತ್ಯೇಕ ಸಂಸ್ಥೆಯಿಂದ ಡೋಣ್ ಸರ್ವೆ ನಡೆಸಿದಾಗ ದಾಖಲಾತಿಗಳಲ್ಲಿ ವ್ಯತ್ಯಾಸವಾಗಿರುತ್ತದೆ. ಇದನ್ನು ಪ್ರಶ್ನಿಸಿ ಗಣಿಗುತ್ತಿಗೆದಾರರು ನ್ಯಾಯ ಪಡೆಯಲು ನಿಯಮದಲ್ಲಿ ಅವಕಾಶವಿದ್ದರೂ ಕೂಡಾ ಇಲಾಖೆಯಲ್ಲಿ ಇದನ್ನು ಅನುಷ್ಠಾನಗೊಳಿಸುತ್ತಿಲ್ಲ.

08. ನಾವು ನಮ್ಮ ಸಂಘಟನೆ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್(ರಿ), ಬೆಂಗಳೂರು ಇದರ ಮುಖಾಂತರ ದಿನಾಂಕ: 28.12.2022 ರಂದು ಬೆಳಗಾವಿಯಲ್ಲಿ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆಯನ್ನು ಮಾಡಿ ಮತ್ತು ಸತತ 15 ದಿನಗಳ ಕಾಲ ರಾಜ್ಯದ ಎಲ್ಲಾ ಕ್ವಾರಿ ಮತ್ತು ಕ್ರಷರ್ ಘಟಕಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿರುತ್ತೇವೆ. Karnataka State Remote Sensing Applications Centre. (K.S.R.S.A.C) ರವರಿಂದ ಡೋಣ್ ಸರ್ವೆ ಮುಖಾಂತರ ಪ್ರಸ್ತುತ ರೆಡ್ಯೂಸ್ಟ್ ಲೆವೆಲ್ ಗಳನ್ನು ದೃಢೀಕರಿಸಿ ಮುಂದಿನ ಲೆಕ್ಕಪರಿಶೋಧನೆಗೆ ಉಪಯೋಗಿಸಬೇಕು ಸರ್ಕಾರಕ್ಕೆ ಬರಬೇಕಾದ ರಾಜಧನ ಸರ್ಕಾರಿ ಕಾಮಗಾರಿ ನಿರ್ವಹಣಾ ಇಲಾಖೆಗಳಿಂದ ಬಂದಿರುವುದರಿಂದ ಮತ್ತು ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕಗೊಳಿಸದೇ ಇರುವುದರಿಂದ ಇದುವರೆಗಿನ ಎಲ್ಲಾ ದಂಡ ವಿಧಿಸುವ ಪ್ರಕ್ರಿಯೆಗಳನ್ನು ಕೈಬಿಡಬೇಕೆಂದು ದಿನಾಂಕ: 06.01.2023 ರಂದು ಮುಖ್ಯಮಂತ್ರಿಯವರ ಗೃಹಕಛೇರಿ ಕೃಷ್ಣಾದಲ್ಲಿ ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಮ್ಮ ಕಾನೂನುಬದ್ಧ ಬೇಡಿಕೆಯನ್ನು ತಿಳಿಸಿರುತ್ತೇವೆ. ಆದರೆ ಈಗಿನ ಪ್ರಸ್ತುತ ತಿದ್ದುಪಡಿಗಳು ಈ ವಿಚಾರಗಳಿಗೆ ವಿರುದ್ಧವಾಗಿರುತ್ತದೆ.

ಕಾಮಗಾರಿ ನಿರ್ವಹಣಾ ಪಾವತಿ 09. ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯು 2023 ರ ಇಸವಿಯವರೆಗೂ ಸರ್ಕಾರಿ ರಾಜಧನ ಇಲಾಖೆಗಳಲ್ಲಿ ವ್ಯವಸ್ಥೆಯು ಸರ್ಕಾರಕ್ಕೆ ರಾಜಧನ ಸಂದಾಯವಾಗಬೇಕೆನ್ನುವ ಕೂಡಾ ನಿಯಮಬಾಹಿರವಾಗಿದ್ದರೂ ជូ Works Executing Departments & Agencies (WEDAs) ក ដ ಪಾವತಿಸಲು ಅನುವು ಮಾಡಿಕೊಟ್ಟಿರುತ್ತಾರೆ. ಈ ಬಗ್ಗೆ ನಮ್ಮ ಸಂಘಟನೆಯ ವತಿಯಿಂದ  -05-

ಹಲವಾರು ಬಾರಿ ಸರ್ಕಾರಕ್ಕೆ ಮನವರಿಕೆ ಮಾಡಿದಾಗ 2023ನೇ ಇಸವಿಯಿಂದ ಸರ್ಕಾರಿ ನಿರ್ವಹಣಾ ಇಲಾಖೆಗಳಲ್ಲಿ ರಾಜಧನ ಕಟಾಯಿಸದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳಲ್ಲಿ ಸುತ್ತೋಲೆಗಳನ್ನು ಹೊರಡಿಸಿರುತ್ತಾರೆ. ಆದರೂ ಇದುವರೆಗೂ ಇದು ಕಾರ್ಯಗತವಾಗಿರುವುದಿಲ್ಲ. ಇದನ್ನು ಮನಗಂಡು ನಮ್ಮ ಸಂಘಟನೆಯಾದ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್(ರಿ), ನಂ. 57, ವಿಶ್ವನಾಥರಾವ್ ರಸ್ತೆ, ಯಾದವ ಕಾಲೇಜು ಹತ್ತಿರ, ಮಾಧವನಗರ, ಬೆಂಗಳೂರು-560001 ಈಗಾಗಲೇ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಂಖ್ಯೆ: 21919/2025 ರಂತೆ (PIL) ಅನ್ನು ಸಲ್ಲಿಸಿರುತ್ತೇವೆ. ಇದನ್ನು ಹೈಕೋರ್ಟ್ ಪರಿಶೀಲಿಸಿ ವಿಚಾರಣೆಗೆ ಕೈಗೆತ್ತಿಕೊಂಡು ಪ್ರಸ್ತುತ ವಿಚಾರಣೆಯಲ್ಲಿರುತ್ತದೆ. ಆದರೂ ಈಗಲೂ ಕೂಡಾ ಸರ್ಕಾರಿ ಕಾಮಗಾರಿ ನಿರ್ವಹಣಾ ಕಾಮಗಾರಿ ಇಲಾಖೆಗಳಲ್ಲಿ ರಾಜಧನವನ್ನು ಪಾವತಿಸುವ ವ್ಯವಸ್ಥೆಯನ್ನು ಮುಂದುವರಿಸಿರುತ್ತೀರಿ. ಆದ್ದರಿಂದ ಈ ಸಂದರ್ಭದಲ್ಲಿ ರಾಜಧನದ ಮೇಲೆ ದಂಡ ವಿಧಿಸುವುದು ಕಾನೂನುಬಾಹಿರ ಕ್ರಮವಾಗಿರುತ್ತದೆ.

ಲಗತ್ತಿಸಿರುವ ದಾಖಲೆಗಳು:-

01. ಶ್ರೀ ಕೃಷ್ಣ ಬೈರೇಗೌಡರವರ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕ-ಪತ್ರಗಳ ಸಮಿತಿಯ ವರದಿ.

02. ಭಾರತದ ಲೆಕ್ಕಪರಿಶೋಧಕರು ಮತ್ತು ಮಹಾಲೇಖಕರ ಕಂದಾಯ ವಲಯದ ವರದಿ-2017.

03. ಮಾನ್ಯ ಸಚಿವರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ 周, Q: 12.10.2023.

04.ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಛೇರಿಗಳಿಂದ ದೃಢೀಕರಣ ಪತ್ರ ಪಡೆದು ಸರ್ಕಾರಿ ಕಾಮಗಾರಿಗಳ ಬಿಲ್ ಪಾವತಿಯಾಗಬೇಕೆಂದು ಮಾನ್ಯ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಂಗಳೂರು. ಇವರ ಕಛೇರಿಯ ಸುತ್ತೋಲೆಗಳು, ದಿನಾಂಕ: 06.02.2024 2 14.02.2024.

05. ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 2023-24 ಮತ್ತು 2024-25ನೇ ಸಾಲಿನಲ್ಲಿ ಬೇರೆ-ಬೇರೆ ಇಲಾಖೆಗಳಿಂದ ಕಾನೂನುಬಾಹಿರವಾಗಿ ಸಂದಾಯವಾಗಿರುವ ರಾಜಧನ/ ದಂಡದ ಮಾಹಿತಿ.

06. ರಾಮನಗರ ಜಿಲ್ಲೆ ಲಾರಿ ಮಾಲಕ ಶ್ರೀ ನಾಗೇಶ್‌ರವರ ಆತ್ಮಹತ್ಯೆಯ ಫೋಟೋ.

07.ವಿದ್ಯುತ್ ಬಿಲ್‌ನೊಂದಿಗೆ ಕ್ರಷರ್ ಘಟಕದ ಉತ್ಪಾದನಾ ಸಾಮರ್ಥ್ಯವನ್ನು ಲೆಕ್ಕ ಹಾಕಿ ದಂಡ ವಿಧಿಸಿ ನೀಡಿರುವ ನೋಟೀಸ್.08.ಗಣಿಗುತ್ತಿಗೆದಾರರಿಗೆ ಡೋಣ್ ಸರ್ವೆ ಮಾಡಲು ನೀಡಿರುವ ನೋಟೀಸ್.

09. ವಾಹನಗಳಿಗೆ ದಂಡ ವಿಧಿಸಿ ನೋಟೀಸ್ ನೀಡಿರುವ ದಾಖಲೆಗಳು.

10. ಅಂದಿನ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಸವರಾಜು ಬೊಮ್ಮಾಯಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡಾವಳಿಗಳು.

11. ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೊಸಿಯೇಷನ್ (ರಿ), ನಂ.57, ವಿಶ್ವನಾಥ ರಾವ್ ರಸ್ತೆ, ಯಾದವ ಕಾಲೇಜು ಹತ್ತಿರ, ಮಾಧವ ನಗರ. ಬೆಂಗಳೂರು-560 001 ಇವರು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಂಖ್ಯೆ:

21919/2025 (ಪಿಐಎಲ್).

,

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.