ನವಜಾತ ಶಿಶುವನ್ನು ಕ್ಯಾನ್ಸ‌ರ್ ಮೃತ್ಯುಕೂಪದಿಂದ ಹೊರಗೆಳೆದ ಎಚ್‌ಸಿಜಿ ಆಸ್ಪತ್ರೆ ವೈದ್ಯರು!!

ಬೆಂಗಳೂರು, ಜುಲೈ 15, 2026

ಅತ್ಯಂತ ಅಪರೂಪದ 'ಫೈಬೊಸಾರ್ಕೊಮಾ' ಎಂಬ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 28 ದಿನಗಳ ನವಜಾತ ಶಿಶುವಿಗೆ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು ನಡೆಸಿದ್ದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಈ ಬಗ್ಗೆ ಬುಧವಾರ ಇಲ್ಲಿ ಸುದ್ದಿಗೋಷ್ಠಿಯ-ಲ್ಲಿ ಮಾಹಿತಿ ನೀಡಿದ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಪ್ರಮೋದ್ ಎಸ್. ಚಿಂದರ್, 'ಈ ಶಸ್ತ್ರಚಿಕಿತ್ಸೆ ನಡೆಸಿ ಒಂದೂವರೆ ವರ್ಷ ಕಳೆದಿದ್ದು, ಮಗು
ಸಂಪೂರ್ಣ ಗುಣಮುಖವಾಗಿದೆ. ಕ್ಯಾನ್ಸರ್ ಮತ್ತೆ ಕಾಣಿಸಿಕೊಂಡಿಲ್ಲ' ಎಂದು ಮಾಹಿತಿ ನೀಡಿದರು. 

'ಈ ಕ್ಯಾನ್ಸರ್ ವಾಸಿ ಮಾಡಲು ಮಗುವಿನ ಕೈ ಕತ್ತರಿಸುವುದೇ ಅಂತಿಮ ಮಾರ್ಗವೆಂದು ಪರೀಕ್ಷೆ ನಡೆಸಿದ್ದ ಆಸ್ಪತ್ರೆಗಳ ವೈದ್ಯರು ಕೈಚೆಲ್ಲಿದ್ದರು. ಎಚ್‌ಸಿಜಿಗೆ ದಾಖಲಾದ ಬಳಿಕ 16 ವೈದ್ಯರ ತಂಡವು ಸುಧಾರಿತ ತಂತ್ರಜ್ಞಾನದ ನೆರವಿನೊಂದಿಗೆ ಮಗುವಿನ ಜೀವ ಹಾಗೂ ಕೈ ಉಳಿಸುವಲ್ಲಿ ಯಶಸ್ವಿಯಾಗಿದೆ. ಸುಮಾರು ₹ 35 ಲಕ್ಷ ವೆಚ್ಚದ ಈ ಅತ್ಯಾಧುನಿಕ ಚಿಕಿತ್ಸೆಯ ವೆಚ್ಚವನ್ನು ದಾನಿಗಳು ಹಾಗೂ ವಿವಿಧ ಮೂಲಗಳಿಂದ ಹೊಂದಿಸಲಾಗಿದೆ' ಎಂದು ಹೇಳಿದರು.

'ಹೆಣ್ಣು ಮಗುವಿನ ಬಲ ಮುಂಗೈನಲ್ಲಿ ಕಾಣಿಸಿಕೊಂಡ ಸಣ್ಣ ಊತ. ಕೆಲವೇ ದಿನಗಳಲ್ಲಿ ಅದು 11.3X9.8 ಸೆಂ.ಮೀ ಗಾತ್ರದ ಗಡ್ಡೆಯಾಗಿ ಬೆಳೆದಿತ್ತು. ಆಸ್ಪತ್ರೆಗೆ ದಾಖಲಾದಾಗ ಮಗು ತೀವ್ರ ರಕ್ತಹೀನತೆಯಿಂದ ಬಳಲುತ್ತಿತ್ತು. ಗಡ್ಡೆಯು ಪ್ರಮುಖ ರಕ್ತನಾಳ ಮತ್ತು ನರಗಳನ್ನು ಸಂಪೂರ್ಣವಾಗಿ ಅವರಿಸಿದ್ದರಿಂದ, ಶಸ್ತ್ರಚಿಕಿ-ತ್ರೆ ಸುಲಭವಾಗಿರಲಿಲ್ಲ. ಕೀಲು ಮತ್ತು ನರಗಳಿಗೆ ಯಾವುದೇ ಹಾನಿಯಾಗದಂತೆ ಗಡ್ಡೆಯನ್ನು ಹೊರತೆಗೆಯಲಾಗಿತ್ತು' ಎಂದು ವಿವರಿಸಿದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium