ರಾಕಿಂಗ್ ಸ್ಟಾರ್ ಯಶ್ ನಟನೆಯ ಮತ್ತು ಗೀತು ಮೋಹನದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರ ಆಗಸ್ಟ್ 26ಕ್ಕೆ ಬಿಡುಗಡೆ : ಮುಂಗಡ ಟಿಕೆಟ್ ಬುಕಿಂಗ್ ನಲ್ಲಿ ದಾಖಲೆ!

ಯಶ್ ನಟನೆಯ ಮತ್ತು ಗೀತು ಮೋಹನದಾಸ್ ನಿರ್ದೇಶಿಸಿರುವ ಟಾಕ್ಸಿಕ್ ಸಿನಿಮಾ ಈ ತಿಂಗಳು 26 ಕ್ಕೆ ತೆರೆಮೇಲೆ ರಾರಾಜಿಸಲಿದ್ದು ಟಿಕೆಟ್ ಬುಕಿಂಗ್ ನಲ್ಲಿ ಸಿನಿಮಾ ದಾಖಲೆ ಮಾಡುತ್ತಿದೆ. 

ಮತ್ತೊಂದು, ಮಗದೊಂದು, ರೀತಿಯ ಅಬ್ಬರ, ಆರ್ಭಟ, ಆಟೋಪ ನೋಡುವುದಕ್ಕೆ ರೆಡಿಯಾಗುತ್ತಿದೆ ಟಾಕ್ಸಿಕ್ ಸಿನಿಮಾ ಎಂದರೆ ತಪ್ಪಾಗಲಾರದು. ಏಕೆಂದರೆ ಟಾಕ್ಸಿಕ್ ಟ್ರೈಲರ್ ನೋಡಿದಮೇಲೆ ಕನ್ನಡ ಅಭಿಮಾನಿಗಳು ಸೇರಿದಂತೆ ಪ್ರಪಂಚದಾದ್ಯಂತ ಯಶ್ ಅಭಿಮಾನಿಗಳು ಸಿನಿಮಾ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ, ಅಷ್ಟರ ಮಟ್ಟಿಗೆ ಟ್ರೈಲರ್ ಮೂಡಿಬಂದಿದೆ. 

ಟಾಕ್ಸಿಕ್ ಸಿನಿಮಾ ನಿಜಕ್ಕೂ ಒಂದು ಅದ್ಬುತ ಯಶಸ್ಸು ಕಾಣಬೇಕು KGF ಸಿನಿಮಾವನ್ನು ಮೀರಿಸಬೇಕು ಮತ್ತೊಮ್ಮೆ ಕನ್ನಡದ ಸಿನಿಮಾ ಮತ್ತು ಯಶ್ ವಿಶ್ವದ ಮುಂದೆ ತಲೆಯೆತ್ತಿ ನಿಲ್ಲಬೇಕು ಎಂಬುದು ಎಲ್ಲರ ಕೋರಿಕೆಯಾಗಿದೆ ಎಂಬುದು ಅವರ ಅಭಿಮಾನಿಗಳ ಮನದಮಾತು. 

ಇನ್ನೂ ನಮ್ಮ ಕನ್ನಡದ ಯಶ್ KGF ನಂತರ ನಟಿಸಿ ಸಹ ನಿರ್ಮಾಪಕರಾಗಿ ಬಂಡವಾಳ ಹೂಡಿಕೆ ಮಾಡಿರುವ ಸಿನಿಮಾವಿದು, ಹಾಗಾಗಿ ಈ ಸಿನಿಮಾಗೆ ಎಷ್ಟರ ಮಟ್ಟಿಗೆ ಕೆಲಸ ಮಾಡಿರುತ್ತಾರೆ ಎಂದು ಸಿನಿಮಾ ಬಿಡುಗಡೆಯಾದ ನಂತರ ಗೊತ್ತಾಗಲಿದೆ, TOXIC ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದು ಗೀತು ಮೋಹನದಾಸ್ ರವರು ಯಾವ ರೀತಿ ನಿರ್ದೇಶನ ಮಾಡಿರುತ್ತಾರೆ ಎಂದು ಕುತೂಹಲ ಮಾಡಿಸಿರುವುದಂತೂ ನಿಜ, ನಿರ್ದೇಶಕರು ಏನೋ ಹೇಳಲು ಹೊರಟಿದ್ದಾರೆ ಎಂಬುದು ಟ್ರೈಲರ್ ನಲ್ಲಿ ಕಾಣಿಸುತ್ತಿದೆ, ಪ್ರತಿ ಸನ್ನಿವೇಶದಲ್ಲಿ ವಿಧವಿಧವಾದ ಕಥೆ ಕಟ್ಟಬಹುದು ಮತ್ತು ಕಥೆಯನ್ನು ತಿಳಿಯಲು ಪ್ರೇಕ್ಷಕರನ್ನು ಯೋಚನೆಗೆ ಬೀಳಿಸುವುದು ಯೋಚಿಸಬೇಕಾದ ಸಂಗತಿಯೆಂದರೆ ತಪ್ಪಾಗಲಾರದು. 

ಪ್ರಮುಖ ಪಾತ್ರಗಳಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ರವರು ನಟಿಸಿರುವುದು ಸಿನಿಮಾಗೆ ಪ್ಲಸ್ ಪಾಯಿಂಟ್. 

ಸುಮಾರು 6 ಭಾಷೆಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದ್ದು, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಮಾಡಲಾಗಿದೆ ಎನ್ನಲಾಗಿದೆ, ಇನ್ನು ನಿರ್ಮಾಪಕರು ವೆಂಕಟ್ ಕೆ. ನಾರಾಯಣ ರವರು ಕೆವಿಎನ್ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಸಿನಿಮಾಗೆ ಒಂದು ರೀತಿಯ ಪ್ಲಸ್ ಪಾಯಿಂಟ್, ಬುಕ್ ಮೈ ಶೋ ನಲ್ಲಿ ಸಿನಿಮಾ ಟಿಕೆಟ್ ಬುಕಿಂಗ್ ಗದ್ದಲ ಶುರುವಾಗಿದೆ ಯಶ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣವಿದೆ ಹಾಗೂ ಕಟೌಟ್ ಗಳ ಅಬ್ಬರ ಶುರುವಾಗಿದೆ, ಪ್ರತಿ ಊರಿನಲ್ಲಿ ಯಶ್ ಅಭಿಮಾನಿಗಳು ಟಾಕ್ಸಿಕ್ ಸಿನಿಮಾದ ಪೋಸ್ಟರ್ ನ ಜೊತೆಗೆ ತಮ್ಮ ಫೋಟೋಗಳನ್ನು ಬ್ಯಾನರ್ಗಳ ಮೂಲಕ ಶುಭಾಶಯ ಕೋರುತ್ತಿರುವುದು ಸಂತಸದ ವಿಷಯವಾಗಿದೆ. 

ಏನೇ ಇರಲಿ ನಮ್ಮ ಕನ್ನಡ ಸಿನಿಮಾ ಗೆಲ್ಲಬೇಕು, ನಮ್ಮ ಕನ್ನಡ ನಟ ಗೆಲ್ಲಬೇಕು, ಕೊನೆಗೆ ಕನ್ನಡ ಚಿತ್ರರಂಗ ಉಳಿಯಬೇಕು, ಕನ್ನಡದ ಕೀರ್ತಿ ವಿಶ್ವ ಭೂಪಟದಲ್ಲಿ ಎದ್ದು ಕಾಣಬೇಕು ಎಂಬುದು ಪ್ರತಿಯೊಬ್ಬರ ಕನಸು, ಹಾಗಾಗಿ ಸಿನಿಮಾ ಇದೆ ತಿಂಗಳು 26ಕ್ಕೆ ಬಿಡುಗಡೆ ಆಗುತ್ತಿದೆ ಪ್ರತಿಯೊಬ್ಬ ಪ್ರೇಕ್ಷಕನ ಕಣ್ಣು toxic ಸಿನಿಮಾ ಮೇಲಿದೆ ಎಂಬುದು ಕಾಣುತ್ತಿದೆ. 


ಮುನಿರಾಜ್ 
ಹಿರಿಯ ವರದಿಗಾರರು 
ಸಿನಿಮಾ ವಿಭಾಗ 
VNK ಸ್ಟಾರ್ News 24/7

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium