'ಹ್ಯಾಟ್ರಿಕ್ ಶಾಸಕ'ರಾದ ಟಿ. ರಘುಮೂರ್ತಿಗೆ ಮಂತ್ರಿ ಭಾಗ್ಯ

ಬೆಂಗಳೂರು, ಆಗಸ್ಟ್ 3, 2026

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಕಡಬನಕಟ್ಟೆ ಗ್ರಾಮದ ರಘುಮೂರ್ತಿ ಅವರು, ಸಿವಿಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದು, ಭೂಸೇನಾ ನಿಗಮದಲ್ಲಿ ಕಾರ್ಯಪಾಲಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

  ಟಿ. ರಘುಮೂರ್ತಿ ಅವರು ಇದೇ ಮೊದಲ ಬಾರಿಗೆ ಡಿಕೆ ಶಿವಕುಮಾ‌ರ್ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವರಾಗುತ್ತಿದ್ದಾರೆ. 
  
 ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ, ರಾಜಕಾರಣಕ್ಕೆ ಧುಮುಕಿದ ರಘುಮೂರ್ತಿ ಅವರು 2013ರಲ್ಲಿ, 2018 ಮತ್ತು 2023ರಲ್ಲಿ ಸತತ ಮೂರು ಗೆಲುವು ಸಾಧಿಸುವ ಮೂಲಕ 'ಹ್ಯಾಟ್ರಿಕ್ ಶಾಸಕ' ಎಂದೇ ಖ್ಯಾತಿ ಪಡೆದಿದ್ದಾರೆ. ₹23 ಕೋಟಿಯ ಆಸ್ತಿಯಿದೆ ಎಂದು ಟಿ. ರಘುಮೂರ್ತಿ ಅವರು ಘೋಷಿಸಿದ್ದಾರೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium