ಫೋಟೋ ಜರ್ನಲಿಸ್ಟ್ಸ್ ಅಸೋಸಿಯೇಷನ್ ವತಿಯಿಂದ 'ಫ್ರೋಜನ್ ಮೆಮೊರೀಸ್' ಛಾಯಾಚಿತ್ರ ಪ್ರದರ್ಶನ

ಬೆಳಕು-ನೆರಳಿನ ಕಾವ್ಯ, ಕಾಲವನ್ನೇ ಕಟ್ಟಿಹಾಕುವ ದೃಶ್ಯ ವೈಭವ! ಎಂದು ಬಣ್ಣಿಸಿದ ಸಿಎಂ ಡಿ. ಕೆ. ಶಿವಕುಮಾರ್ 

 ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ ಫೋಟೋ ಜರ್ನಲಿಸ್ಟ್ಸ್ ಅಸೋಸಿಯೇಷನ್ ಬೆಂಗಳೂರು (ರಿ.) ವತಿಯಿಂದ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಆಯೋಜಿಸಲಾಗಿದ್ದ 'ಫ್ರೋಜನ್ ಮೆಮೊರೀಸ್' ಛಾಯಾಚಿತ್ರ ಪ್ರದರ್ಶನದಲ್ಲಿ ಸಿಎಂ ಡಿ. ಕೆ. ಶಿವಕುಮಾರ್ ಅವರು ಭಾಗಿಯಾಗಿದ್ದರು. 

ಈ ಸಂದರ್ಭದಲ್ಲಿ ಪ್ರದರ್ಶನದಲ್ಲಿದ್ದ ಹಲವಾರು ಅರ್ಥಪೂರ್ಣ ಛಾಯಾಚಿತ್ರಗಳನ್ನು ವೀಕ್ಷಿಸಿದ ನಂತರ ಡಿ. ಕೆ. ಶಿವಕುಮಾರ್ ಕ್ಯಾಮೆರಾ ಹಿಡಿದು ಒಂದು ಫೋಟೋವನ್ನು ಕ್ಲಿಕ್ ಮಾಡಿದರು.
 

ಸಮಾಜದ ನೈಜ ಪ್ರತಿಬಿಂಬವನ್ನು ತಮ್ಮ ಕ್ಯಾಮೆರಾ ಕಣ್ಣುಗಳ ಮೂಲಕ ಸೆರೆಹಿಡಿದು ಜನರಿಗೆ ತಲುಪಿಸುವ ಎಲ್ಲಾ ಫೋಟೋ ಜರ್ನಲಿಸ್ಟ್ ಹಾಗೂ ಛಾಯಾಗ್ರಾಹಕ ಮಿತ್ರರ ಶ್ರಮ ಮತ್ತು ಪ್ರತಿಭೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium