ಅಂತರರಾಷ್ಟ್ರೀಯ ಉದ್ಯಮಿ ಭಾರತ ಸಮಾವೇಶ ಮತ್ತು ಪ್ರದರ್ಶನ 2026 - ಬೆಂಗಳೂರಿನಲ್ಲಿ ಆಯೋಜನೆ
ಬೆಂಗಳೂರು, ಸೆಪ್ಟೆಂಬರ್ 1, 2026
ಜಾಗತಿಕ ಮಟ್ಟದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಮಹತ್ವಾಕಾಂಕ್ಷಿ ಉದ್ದೇಶದೊಂದಿಗೆ, ಅಂತರರಾಷ್ಟ್ರೀಯ ಉದ್ಯಮಿ ಭಾರತ ಸಮಾವೇಶ ಮತ್ತು ಪ್ರದರ್ಶನ 2026 ಇದೇ ಡಿಸೆಂಬರ್ 4,5, ಮತ್ತು 6, 2026 ರಂದು ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (BIEC) ನಲ್ಲಿ ಭವ್ಯವಾಗಿ ನಡೆಯಲಿದೆ.
ಈ ಮೂರು ದಿನಗಳ ಅಂತರರಾಷ್ಟ್ರೀಯ ಸಮಾವೇಶವು ಭಾರತ ಸೇರಿದಂತೆ ವಿವಿಧ ದೇಶಗಳಿಂದ ಉದ್ಯಮಿಗಳು, ಸ್ಟಾರ್ಟ್ ಅಪ್ ಗಳು, ಹೂಡಿಕೆದಾರರು, ತಂತ್ರಜ್ಞಾನ ತಜ್ಞರು ಮತ್ತು ಉದ್ಯಮಾಸಕ್ತರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಹೊಸ ಉದ್ಯಮ ಆರಂಭಿಸಲು, ಈಗಿನ ವ್ಯವಹಾರವನ್ನು ವಿಸ್ತರಿಸಲು ಹಾಗೂ ಜಾಗತಿಕ ಮಾರುಕಟ್ಟೆ ಪ್ರವೇಶಿಸಲು ಬಯಸುವವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ಸಮಾವೇಶದ ಪ್ರಮುಖ ಉದ್ದೇಶಗಳು:
ಭಾರತೀಯ ಉದ್ಯಮಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು
ಅಂತರರಾಷ್ಟ್ರೀಯ ಹೂಡಿಕೆ ಮತ್ತು ವ್ಯವಹಾರ ಸಹಭಾಗಿತ್ವಗಳಿಗೆ ವೇದಿಕೆ ಸೃಷ್ಟಿಸುವುದು
ಸ್ಟಾರ್ಟ್ ಅಪ್‌ಗಳು ಮತ್ತು MSMEಗಳಿಗೆ ಜಾಗತಿಕ ವಿಸ್ತರಣಾ ಅವಕಾಶ ಕಲ್ಪಿಸುವುದು
ನವೀನ ತಂತ್ರಜ್ಞಾನ ಮತ್ತು ಆಧುನಿಕ ವ್ಯವಹಾರ ಮಾದರಿಗಳನ್ನು ಪರಿಚಯಿಸುವುದು
ಪ್ರಮುಖ ಆಕರ್ಷಣೆಗಳು:
ಅಂತರರಾಷ್ಟ್ರೀಯ ಪ್ಯಾನೆಲ್ ಚರ್ಚೆಗಳು - ದೇಶೀಯ ಹಾಗೂ ವಿದೇಶಿ ತಜ್ಞರಿಂದ
Global B2B ಮತ್ತು B2C ಮೀಟಿಂಗ್ಗಳು - ವ್ಯವಹಾರ ವಿಸ್ತರಣೆಗೆ ನೇರ ಸಂಪರ್ಕ
ಸ್ಟಾರ್ಟ್ ಅಪ್ ಸೆಷನ್‌ಗಳು ಹೂಡಿಕೆದಾರರ ಮುಂದೆ ನಿಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸಲು ಅವಕಾಶ
ವರ್ಕ್‌ಶಾಪ್‌ಗಳು ಮತ್ತು ತರಬೇತಿ ಕಾರ್ಯಕ್ರಮಗಳು
ನಾವೀನ್ಯತೆ ಮತ್ತು ತಂತ್ರಜ್ಞಾನ ಎಕ್ಸ್ಪೋ -
ಯಶಸ್ವಿ ಉದ್ಯಮಿಗಳಿಂದ ಪ್ರೇರಣಾದಾಯಕ ಉಪನ್ಯಾಸಗಳು
ಪ್ರಮುಖ ವಲಯಗಳು (Sectors):
ಈ ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳ ಕಂಪನಿಗಳು ಮತ್ತು ಸಂಸ್ಥೆಗಳು ಭಾಗವಹಿಸಲಿವೆ, ಅವುಗಳಲ್ಲಿ:
(ಆಹಾರ ಉದ್ಯಮ ಮತ್ತು ಆಹಾರ
ಶಿಕ್ಷಣ ಮತ್ತು ತರಬೇತಿ (Education & Skill
ಸಂಸ್ಕರಣೆ)
ಅಭಿವೃದ್ಧಿ)
ಕೃಷಿ ಮತ್ತು ಅಗೋ-ಟೆಕ್ (Agriculture &
ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯವಹಾರ
ಕೃಷಿ ವ್ಯವಹಾರ)
ರಿಯಲ್ ಎಸ್ಟೇಟ್ ಮತ್ತು ಇನ್‌ಫ್ರಾಸ್ಟ್ರಕ್ಟರ್
ಉತ್ಪಾದನಾ ವಲಯ (Manufacturing)
(ಸೇವಾ ವಲಯ)
(ಐಟಿ ಮತ್ತು ತಂತ್ರಜ್ಞಾನ)
ಹ್ಯಾಂಡಿಕ್ರಾಫ್ಟ್ ಮತ್ತು ಗ್ರಾಮೀಣ ಉದ್ಯಮಗಳು
ಸೌಲಭ್ಯಗಳು:
ಉದ್ಯಮ ಸ್ಥಾಪನೆ, ನೋಂದಣಿ ಮತ್ತು ಮಾರುಕಟ್ಟೆ ಪ್ರವೇಶ ಕುರಿತು ಮಾರ್ಗದರ್ಶನ
ಬ್ಯಾಂಕ್‌ಗಳು, NBFCಗಳು, ವೆಂಚರ್ ಕ್ಯಾಪಿಟಲ್ ಮತ್ತು ಸರ್ಕಾರಿ ಯೋಜನೆಗಳ ಮಾಹಿತಿ
ಹಣಕಾಸಿನ ನೆರವು, ಸಬ್ಸಿಡಿ ಮತ್ತು ಗ್ರಾಂಟ್‌ಗಳ ಕುರಿತು ಮಾಹಿತಿ
ಡಿಜಿಟಲ್ ತಂತ್ರಜ್ಞಾನ, AI, Automation ಮತ್ತು E-commerce ಪರಿಹಾರಗಳು
ಜಾಗತಿಕ ಮಟ್ಟದ ನೆಟ್‌ವರ್ಕಿಂಗ್ ಮತ್ತು ಸಹಭಾಗಿತ್ವ ಅವಕಾಶಗಳು
ವಿಶೇಷ ಕಾರ್ಯಕ್ರಮಗಳು:
ಮಹಿಳಾ ಉದ್ಯಮಿಗಳಿಗಾಗಿ ವಿಶೇಷ ಸೆಷನ್‌ಗಳು
ಯುವ ಉದ್ಯಮಿಗಳಿಗಾಗಿ ಮಾರ್ಗದರ್ಶನ ಕಾರ್ಯಕ್ರಮಗಳು
ಕೃಷಿ ಮತ್ತು ಆಹಾರೋದ್ಯಮಕ್ಕೆ ವಿಶೇಷ ಪ್ಯಾನೆಲ್ ಚರ್ಚೆಗಳು
ರಫ್ತು ಮತ್ತು ಅಂತರಾಷ್ಟ್ರೀಯ ವ್ಯಾಪಾರ 2
ಈ ಅಂತರರಾಷ್ಟ್ರೀಯ ಸಮಾವೇಶವು ಉದ್ಯಮಿಗಳಿಗೆ ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು, ಜಾಗತಿಕ ಸಂಪರ್ಕಗಳನ್ನು ಬೆಳೆಸಲು ಮತ್ತು
ತಮ್ಮ ವ್ಯವಹಾರವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲು ಅಪರೂಪದ ಅವಕಾಶವನ್ನು ಒದಗಿಸುತ್ತದೆ.
ಉದ್ಯಮಿಗಳು, ಸ್ಟಾರ್ಟ್ ಅಪ್ಗಳು, ಹೂಡಿಕೆದಾರರು ಮತ್ತು ಉದ್ಯಮಾಸಕ್ತರು ಈ ಮಹತ್ವದ ವೇದಿಕೆಯಲ್ಲಿ ಭಾಗವಹಿಸಿ ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಆಹ್ವಾನಿಸಲಾಗಿದೆ.
Comments
Post a Comment