ಒರಾಯನ್‌ ಮಾಲ್‌ನಲ್ಲಿ ಸೆಪ್ಟೆಂಬರ್ 26ರಿಂದ 'ವಿಮೆನ್ಸ್ ಕಾಫಿ ಅಲಯನ್ಸ್ ಇಂಡಿಯಾ'ದಿಂದ ಕಾಫಿ ಸಂತೆ ಆಯೋಜನೆ


ಬೆಂಗಳೂರು ಸೆಪ್ಟೆಂಬರ್ 24, 2026 

ಜಾಜಿನಗರದ ಒರಾಯನ್ ಮಾಲ್‌ನಲ್ಲಿ ವಿಮೆನ್ಸ್ ಕಾಫಿ ಅಲಯನ್ಸ್ ಇಂಡಿಯಾವು (ಡಬ್ಲ್ಯುಸಿಎಐ) ಇದೇ 26, 27ರಂದು ಕಾಫಿ ಸಂತೆ ಆಯೋಜಿಸಿದೆ.

18ನೇ ಆವೃತ್ತಿಯ ಸಂತೆಯು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದೆ. ವಿವಿಧ ಕಾಫಿ ಉತ್ಪನ್ನಗಳ ಪ್ರದರ್ಶನ ಇರಲಿದ್ದು, ಸ್ವಾದವನ್ನು ಸವಿಯಬಹುದು' ಎಂದು ಸಂಸ್ಥೆಯ ಅಧ್ಯಕ್ಷೆ ಆರತಿ ಸೋಮಯ್ಯ, ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

“ಕಲಾ ಸ್ಪರ್ಧೆಗಳು, ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೆಫೆ ಕಂಪು ಸಂಸ್ಥೆಯ ಪುನೀತ್ ಪರಮೇಶ್, ಚಿತ್ರಶ್ರೀ, ಅಮೆರಿಕದ ಗಾರ್ಡನ್ ಸ್ಟೈಕ್, ಸ್ವಿಟ್ಟರ್ಲೆಂಡ್‌ನ ಗ್ಲೋರಿಯಾ ಪೆದ್ರೋಜಾ, ಲಂಡನ್‌ ಪ್ರಿನ್ಸಿಲ್ಲಾ ಡೇನಿಯಲ್, ದಕ್ಷಿಣ ಕೊರಿಯಾದ ಕಿಮ್ ಹೈಯಿನ್ ಸೇರಿದಂತೆ ಕಾಫಿ ತಜ್ಞರೊಂದಿಗೆ ಸಂವಾದ ಇರಲಿದೆ' ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಓಮನಾ ಚೇತನ್, ಸೊನಾಲಿನಿ, ರಾಧಿಕಾ, ಅಮೂಲ್ಯಾ, ದೀಪಾಲಿ ಪಾಲ್ಗೊಂಡಿದ್ದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium