'ಶ್ರೀ ಕೃಷ್ಣ ಜನ್ಮಾಷ್ಠಮಿ' ಪ್ರಯುಕ್ತ ವಿದ್ವಾನ್ ಅಂಜಲಿ ಶ್ರೀರಾಮ್ ಅವರಿಂದ ಅದ್ಭುತವಾದ ಸಂಗೀತ ಕಾರ್ಯಕ್ರಮ
ಬೆಂಗಳೂರಿನ ಸಿ.ಐ.ಎಲ್ ಲೇಔಟ್ ಶ್ರೀ ರಾಧಾಕೃಷ್ಣ ದೇಗುಲದಲ್ಲಿ 'ಶ್ರೀ ಕೃಷ್ಣ ಜನ್ಮಾಷ್ಠಮಿ' ಪ್ರಯುಕ್ತ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿದ್ವಾನ್ ಅಂಜಲಿ ಶ್ರೀರಾಮ್ ಅವರು ಅದ್ಭುತವಾಗಿ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣನ ಆರಾಧನೆಯ ಪ್ರಸಿದ್ಧ ಹಾಡುಗಳನ್ನು ಹಾಡಿ, ದೇಗುಲಕ್ಕೆ ಬಂದಿದ್ದ ನೂರಾರು ಕೃಷ್ಣ ಭಕ್ತರಿಗೆ ಸಂಗೀತ ಸುಧೆಯನ್ನು ಉಣಬಡಿಸಲಾಯಿತು.
ವಿದ್ವಾನ್ ಮಥುರ್ ಶ್ರೀನಿಧಿ ಅವರಿಂದ ವೀಣಾವಾದನ, ವಿದ್ವಾನ್ ಅನಿರುದ್ದ್ ಭಟ್, ಖಂಜಿರಾ ವಾದ್ವವನ್ನು ವಿದ್ವಾನ್ ಕಿರಣ್ ಕುಮಾರ್ ಅವರು ನುಡಿಸಿ ಭಕ್ತರ ಮನರಂಜಿಸಿದರು.
ಪ್ರತಿ ವರ್ಷವೂ ಶ್ರೀ ರಾಧಾಕೃಷ್ಣ ದೇಗುಲದಲ್ಲಿ 'ಶ್ರೀ ಕೃಷ್ಣ ಜನ್ಮಾಷ್ಠಮಿ'ಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶ್ರೀ ಕೃಷ್ಣನ ದರ್ಶನ ಪಡೆಯಲು ಈ ದೇಗುಲಕ್ಕೆ ಸಾವಿರಾರು ಜನರು ಭೇಟಿ ನೀಡುತ್ತಾರೆ.
Comments
Post a Comment