ಏಸರ್‌ನಿಂದ ಸಿಎಸ್‌ಆರ್ ಬದ್ಧತೆ ವಿಸ್ತರಣೆ: ನೇತ್ರದೀಪ್ ಕಣ್ಣಿನ ಆರೈಕೆ ಕೇಂದ್ರ ಆರಂಭ
ಬಡವರಿಗೆ ಉಚಿತ ಮತ್ತು ರಿಯಾಯ್ತಿ ದರದಲ್ಲಿ ಕಣ್ಣಿನ ಆರೈಕೆ
ಶಾಸಕರಾದ ಎನ್.ಎ.ಹ್ಯಾರೀಸ್ ಅವರ ಬೆಂಬಲದೊಂದಿಗೆ ಇಂದಿರಾನಗರ ರೋಟರಿ ಬೆಂಗಳೂರು ಸಹಭಾಗಿತ್ವದಲ್ಲಿ ಈ ಆರೈಕೆ ಕೇಂದ್ರ ಆರಂಭ
ಬಿಪಿಎಲ್ ಕಾರ್ಡುದಾರರಿಗೆ ಉಚಿತ ಮತ್ತು ಇತರರಿಗೆ ರಿಯಾಯ್ತಿ ದರದಲ್ಲಿ ಚಿಕಿತ್ಸೆ ನೀಡುವ ಉದ್ದೇಶ
ಬೆಂಗಳೂರು, 9 ಸೆಪ್ಟೆಂಬರ್ 2026: ಏಸರ್ ಇಂಡಿಯಾ, ತನ್ನ ಪ್ರಮುಖ CSR ಉಪಕ್ರಮವಾದ ಪ್ರಾಜೆಕ್ಟ್ ಹೂಮ್ಯಾನಿಟಿ ಮೂಲಕ ಅರ್ಥಪೂರ್ಣ ಸಾಮಾಜಿಕ ಪರಿಣಾಮವನ್ನು ಸೃಷ್ಟಿಸುವ ತನ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದು, ಇಂದು ಬೆಂಗಳೂರಿನ ದೊಮ್ಮಲೂರಿನಲ್ಲಿ ನೇತ್ರದೀಪ್ ಕಣ್ಣಿನ ಆರೈಕೆ ಕೇಂದ್ರವನ್ನು ಸ್ಥಾಪಿಸಿರುವುದಾಗಿ ಘೋಷಿಸಿದೆ.
ರೋಟರಿ ಬೆಂಗಳೂರು ಇಂದಿರಾನಗರದ ಸಹಯೋಗದಲ್ಲಿ ಹಾಗೂ ಕರ್ನಾಟಕ ವಿಧಾನಸಭೆಯ ಶಾಂತಿನಗರ ಕ್ಷೇತ್ರದ ಸದಸ್ಯರಾದ ಶ್ರೀ ಎನ್. ಎ. ಹ್ಯಾರಿಸ್ ಅವರ ಬೆಂಬಲದೊಂದಿಗೆ ಸ್ಥಾಪಿಸಲಾದ ಈ ವಿಶೇಷ ಕೇಂದ್ರವು BPL ಕಾರ್ಡ್ ಹೊಂದಿರುವವರಿಗೆ ಉಚಿತ ಕಣ್ಣಿನ ಆರೈಕೆ ಸೇವೆಗಳನ್ನು ಮತ್ತು ಇತರರಿಗೆ ಸಬ್ಸಿಡಿ ದರದಲ್ಲಿ ಕಣ್ಣಿನ ಆರೈಕೆ ಸೇವೆಗಳನ್ನು ಒದಗಿಸಲಿದೆ. ಸಮಯೋಚಿತ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಪಡೆಯುವುದಕ್ಕೆ ಅಡ್ಡಿಯಾಗುವ ಆರ್ಥಿಕ ಹಾಗೂ ಆರೋಗ್ಯ ಸೇವೆಗಳ ಲಭ್ಯತೆಯ ಸಮಸ್ಯೆಗಳನ್ನು ನಿವಾರಿಸಲು ಈ ಕೇಂದ್ರ ಸಹಾಯ ಮಾಡಲಿದೆ.
ನೇತ್ರದೀಪ್ ಕೇಂದ್ರವನ್ನು ಸುಲಭವಾಗಿ ಲಭ್ಯವಾಗುವ ಹಾಗೂ ಗುಣಮಟ್ಟದ ಕಣ್ಣಿನ ಆರೈಕೆ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ವೈದ್ಯಕೀಯ ಸಮಾಲೋಚನೆ. ರೋಗನಿರ್ಣಯ ಪರೀಕ್ಷೆಗಳು, ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳು ಮತ್ತು ಇತರ ಕಣ್ಣಿನ ಆರೈಕೆ ಸೇವೆಗಳು ಒಳಗೊಂಡಿರುತ್ತವೆ. ವಿಶೇಷವಾಗಿ, ಸಮಯೋಚಿತ ಮತ್ತು ಕೈಗೆಟುಕುವ ಕಣ್ಣಿನ ಆರೈಕೆ ಸೇವೆಗಳನ್ನು ಪಡೆಯಲು ಕಷ್ಟವಾಗುವ ವ್ಯಕ್ತಿಗಳು ಮತ್ತು ಕುಟುಂಬಗಳ ಮೇಲೆ ಈ ಕೇಂದ್ರ ಹೆಚ್ಚಿನ ಗಮನ ಹರಿಸಲಿದೆ.
ಆರೋಗ್ಯಕರ ಕಣ್ಣುಗಳು ವ್ಯಕ್ತಿಯ ಕಲಿಕೆ, ಕೆಲಸ, ಸ್ವಾವಲಂಬನೆ ಹಾಗೂ ಆರೋಗ್ಯಕರ ಮತ್ತು ಸಂತೃಪ್ತ ಜೀವನ ನಡೆಸುವ ಸಾಮರ್ಥ್ಯಕ್ಕೆ ಅತ್ಯಂತ ಮುಖ್ಯ ಎಂಬ ನಂಬಿಕೆಯಿಂದ ಈ ಉಪಕ್ರಮವು ರೂಪುಗೊಂಡಿದೆ. ಆದರೆ, ಚಿಕಿತ್ಸೆಯ ವೆಚ್ಚ, ವಿಶೇಷ ವೈದ್ಯಕೀಯ ಸೇವೆಗಳ ಸೀಮಿತ ಲಭ್ಯತೆ ಅಥವಾ ನಿಯಮಿತ ಕಣ್ಣಿನ ತಪಾಸಣೆಯ ಮಹತ್ವದ ಬಗ್ಗೆ ಅರಿವಿನ ಕೊರತೆಯಿಂದಾಗಿ ಅನೇಕ ಜನರಿಗೆ ಕಣ್ಣಿನ ಆರೈಕೆ ಇನ್ನೂ ಕೈಗೆಟುಕದಂತಾಗಿದೆ.
ನೇತ್ರದೀಪ್ ಮೂಲಕ ಏಸರ್ ಇಂಡಿಯಾ, ರೋಟರಿ ಬೆಂಗಳೂರು ಇಂದಿರಾನಗರ ಮತ್ತು ಶ್ರೀ ಎನ್. ಎ. ಹ್ಯಾರಿಸ್ ಅವರ ಬೆಂಬಲದೊಂದಿಗೆ ಈ ಅಂತರವನ್ನು ಕಡಿಮೆ ಮಾಡಲು ಹಾಗೂ ವೃತ್ತಿಪರ ಕಣ್ಣಿನ ಆರೈಕೆಯನ್ನು ಹೆಚ್ಚಿನ ಜನರಿಗೆ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸುತ್ತಿದೆ. ಜೊತೆಗೆ, ಜನರು ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಮತ್ತು ಆರಂಭಿಕ ಹಂತದಲ್ಲಿಯೇ ಚಿಕಿತ್ಸೆಯನ್ನು ಪಡೆಯುವಂತೆ ಪ್ರೋತ್ಸಾಹಿಸಲಾಗುತ್ತದೆ. ಅನೇಕ ಕಣ್ಣಿನ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ
ಪತ್ತೆಹಚ್ಚಿದರೆ ಅವುಗಳನ್ನು ಉತ್ತಮವಾಗಿ ನಿಯಂತ್ರಿಸಬಹುದು. ಆದ್ದರಿಂದ ಸಮಯೋಚಿತ ತಪಾಸಣೆ ಮತ್ತು ವೃತ್ತಿಪರ ವೈದ್ಯಕೀಯ ಆರೈಕೆಯ ಲಭ್ಯತೆ ಅತ್ಯಂತ ಮಹತ್ವದ್ದಾಗಿದೆ.
ಇಂದಿನ ದಿನಗಳಲ್ಲಿ ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎಲ್ಲಾ ವಯೋಮಾನದವರನ್ನೂ ಬಾಧಿಸುತ್ತಿವೆ. ವಯಸ್ಸಾಗುವುದು. ಮಧುಮೇಹ, ಜೀವನಶೈಲಿಯಲ್ಲಿನ ಬದಲಾವಣೆಗಳು ಹಾಗೂ ಡಿಜಿಟಲ್ ಪರದೆಗಳಿಗೆ ಹೆಚ್ಚುತ್ತಿರುವ ಒಡ್ಡಿಕೊಳ್ಳುವಿಕೆ ಸೇರಿದಂತೆ ಹಲವು ಅಂಶಗಳು ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮತ್ತು ತಡೆಗಟ್ಟುವ ಆರೈಕೆಯ ಅಗತ್ಯವನ್ನು ಹೆಚ್ಚಿಸುತ್ತಿವೆ.
ನೇತ್ರದೀಪ್ ಮೂಲಕ, ವಿಶೇಷವಾಗಿ ಸಮಾಜದ ಹಿಂದುಳಿದ ಮತ್ತು ಅಗತ್ಯವಿರುವ ವರ್ಗಗಳ ಜನರು
ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವಂತೆ ಮತ್ತು ಸಮಸ್ಯೆಗಳು ಗಂಭೀರವಾಗುವ ಮೊದಲು ಸೂಕ್ತ ಚಿಕಿತ್ಸೆಯನ್ನು ಪಡೆಯುವಂತೆ ಪ್ರೋತ್ಸಾಹಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ. ಏಸರ್ ಇಂಡಿಯಾ ಗ್ರೂಪ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರೀಶ್ ಕೊಹ್ಲಿ ಅವರು ಮಾತನಾಡಿ, "ಏಸರ್ ಇಂಡಿಯಾದಲ್ಲಿ, ನಮ್ಮ ಜವಾಬ್ದಾರಿ ತಂತ್ರಜ್ಞಾನ ಮತ್ತು ವ್ಯವಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಸುತ್ತಮುತ್ತಲಿನ ಸಮುದಾಯಗಳ ಮೇಲೆ ಸಕಾರಾತ್ಮಕ ಮತ್ತು ಶಾಶ್ವತ ಪರಿಣಾಮವನ್ನು ಉಂಟುಮಾಡುವುದೂ ನಮ್ಮ ಜವಾಬ್ದಾರಿಯಾಗಿದೆ ಎಂದು ನಾವು ನಂಬುತ್ತೇವೆ. ಪ್ರಾಜೆಕ್ಟ್ ಮ್ಯಾನಿಟಿ ಈ ಬದ್ಧತೆಯ ಪ್ರತೀಕವಾಗಿದ್ದು, ನೇತ್ರದೀಪ್ ಈ ಪಯಣಕ್ಕೆ ಒಂದು ಮಹತ್ವದ ಸೇರ್ಪಡೆಯಾಗಿದೆ. ಉತ್ತಮ ದೃಷ್ಟಿ ಒಬ್ಬ ವ್ಯಕ್ತಿಯ ಶಿಕ್ಷಣ ಪಡೆಯುವ, ಜೀವನೋಪಾಯ ಗಳಿಸುವ, ಸ್ವತಂತ್ರವಾಗಿ ಬದುಕುವ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಅನುಭವಿಸುವ ಸಾಮರ್ಥ್ಯವನ್ನು ಪರಿವರ್ತಿಸಬಲ್ಲದು. ನೇತ್ರದೀಪ್ ಮೂಲಕ, ಆರ್ಥಿಕ ಅಡಚಣೆಗಳು ಜನರು ಗುಣಮಟ್ಟದ ಕಣ್ಣಿನ ಆರೈಕೆ ಸೇವೆಗಳನ್ನು ಪಡೆಯುವುದಕ್ಕೆ ತಡೆಯಾಗದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ಈ ಉಪಕ್ರಮವನ್ನು ಸಾಕಾರಗೊಳಿಸಲು ಬೆಂಬಲ ನೀಡಿದ ಶ್ರೀ ಎನ್. ಎ. ಹ್ಯಾರಿಸ್ ಅವರಿಗೆ ಹಾಗೂ ರೋಟರಿ ಬೆಂಗಳೂರು ಇಂದಿರಾನಗರದೊಂದಿಗಿನ ನಮ್ಮ ಸಹಯೋಗಕ್ಕೆ ನಾವು ಕೃತಜ್ಞರಾಗಿದ್ದೇವೆ. ಅಗತ್ಯವಿರುವ ಇನ್ನಷ್ಟು ಜನರಿಗೆ ಸಮಯೋಚಿತ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಲಭ್ಯವಾಗುವಂತೆ ಮಾಡಲು ನಾವು ಒಟ್ಟಾಗಿ ಪ್ರಯತ್ನಿಸುತ್ತೇವೆ" ಎಂದು ತಿಳಿಸಿದರು.
ಕರ್ನಾಟಕ ವಿಧಾನಸಭೆಯ ಸದಸ್ಯರಾದ ಶ್ರೀ ಎನ್. ಎ. ಹ್ಯಾರಿಸ್ ಅವರು ಮಾತನಾಡಿ, "ಸುಲಭವಾಗಿ ಲಭ್ಯವಾಗುವ ಆರೋಗ್ಯ ಸೇವಾ ಉಪಕ್ರಮಗಳು ಜನರು ಮತ್ತು ಸಮುದಾಯಗಳ ಮೇಲೆ ನೇರವಾದ ಹಾಗೂ ಶಾಶ್ವತವಾದ ಪರಿಣಾಮವನ್ನು ಬೀರಬಲ್ಲವು. ದೃಷ್ಟಿಯು ಶಿಕ್ಷಣ, ಜೀವನೋಪಾಯ, ಸ್ವಾವಲಂಬನೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟದೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ. ಆದರೂ, ಕಣ್ಣಿನ ಸಮಸ್ಯೆ ಗಂಭೀರವಾಗುವವರೆಗೆ ಕಣ್ಣಿನ ಆರೋಗ್ಯವನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ. ಅಗತ್ಯವಿರುವವರಿಗೆ ಗುಣಮಟ್ಟದ ಕಣ್ಣಿನ ಆರೈಕೆ ಸೇವೆಗಳನ್ನು ಲಭ್ಯವಾಗಿಸುವ ಸಾಮಾನ್ಯ ಉದ್ದೇಶದೊಂದಿಗೆ ಏಸರ್ ಇಂಡಿಯಾ ಮತ್ತು ರೋಟರಿ ಬೆಂಗಳೂರು ಇಂದಿರಾನಗರ ಒಟ್ಟಾಗಿ ಕೈಗೊಂಡಿರುವ ನೇತ್ರದೀಪ್ ಉಪಕ್ರಮಕ್ಕೆ ಬೆಂಬಲ ನೀಡುತ್ತಿರುವುದು ನನಗೆ ಸಂತೋಷ ತಂದಿದೆ.
ಇಂತಹ ಉಪಕ್ರಮಗಳು ಸಂಸ್ಥೆಗಳು ಒಗ್ಗೂಡಿ ಸಮುದಾಯ ಮಟ್ಟದಲ್ಲಿ ಎದುರಾಗುತ್ತಿರುವ ಪ್ರಮುಖ ಆರೋಗ್ಯ ಅಗತ್ಯಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ತೋರಿಸುತ್ತವೆ. ನೇತ್ರದೀಪ್ ಸ್ಥಾಪನೆಗೆ ಅವಕಾಶ ಮಾಡಿಕೊಡಲು ನಾನು ಈ ಕಟ್ಟಡದಲ್ಲಿದ್ದ ನನ್ನ ಕಚೇರಿಯನ್ನು ಬಿಟ್ಟುಕೊಟ್ಟಿದ್ದೇನೆ. ಜನರ ಜೀವನದಲ್ಲಿ ಅರ್ಥಪೂರ್ಣ ಮತ್ತು ಶಾಶ್ವತವಾದ ಪರಿಣಾಮವನ್ನು ಸೃಷ್ಟಿಸುವಲ್ಲಿ ನೇತ್ರದೀಪ್ ಯಶಸ್ವಿಯಾಗಲಿ ಎಂದು ನಾನು ಹಾರೈಸುತ್ತೇನೆ" ಎಂದು ಹೇಳಿದರು.
ರೋಟರಿ ಬೆಂಗಳೂರು ಇಂದಿರಾನಗರದ ಅಧ್ಯಕ್ಷರು ಹಾಗೂ ಬೆಂಗಳೂರು ಇಂದಿರಾನಗರ ರೋಟರಿ ಟ್ರಸ್ಟ್ (BIRT)ನ ಅಧ್ಯಕ್ಷರಾದ ಶ್ರೀ ಗೋಪಿನಾಥ್ ನಾರಾಯಣನ್ ಅವರು ಮಾತನಾಡಿ, "ನೇತ್ರದೀಪ್ ಕೇವಲ ಕಣ್ಣಿನ ತಪಾಸಣಾ ಕೇಂದ್ರವಾಗಿರುವುದಿಲ್ಲ; ಇದು ಚಿಕಿತ್ಸಾ ಕೇಂದ್ರವೂ ಆಗಿರುತ್ತದೆ. ಸಮಾಜದ ಃಕಿಐ ವರ್ಗದ ಜನರಿಗೆ ಹಲವಾರು ಕಣ್ಣಿನ ಕಾಯಿಲೆಗಳಿಗೆ ಇಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.
BPL ವರ್ಗಕ್ಕೆ ಸೇರದವರಿಗಾಗಿ ನಾಮಮಾತ್ರದ ಅಉಊ ದರಗಳು ಅನ್ವಯವಾಗುತ್ತವೆ. ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಶಸ್ತ್ರಚಿಕಿತ್ಸೆಗಾಗಿ ಹೊಸಕೋಟೆಯಲ್ಲಿರುವ ಗ್ಲೋಬ್ ಐ ಫೌಂಡೇಶನ್ ಕರೆದೊಯ್ಯಲಾಗುತ್ತದೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಮರಳಿ ಕರೆತರಲಾಗುತ್ತದೆ. ಇದರಲ್ಲಿ ಕರೆದೊಯ.ಆ ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಶಸ್ತ್ರಚಿಕಿತ್ಸೆಗಳೂ ಸೇರಿವೆ. ಗ್ರಾಮೀಣ ಪ್ರದೇಶದ ಜನರಿಗೆ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗಳನ್ನು ಒದಗಿಸುವಲ್ಲಿ ರೋಟರಿ ಬೆಂಗಳೂರು ಇಂದಿರಾನಗರವು ದೊಡ್ಡ ಮಟ್ಟದಲ್ಲಿ ಬೆಂಬಲ ನೀಡುತ್ತಿದೆ. ಈಗಾಗಲೇ ಕೋಲಾರ, ತುಮಕೂರು, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ನಿಯಮಿತ ಕಣ್ಣಿನ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಡೊಣ್ಣೂರಿನ ನೇತ್ರದೀಪ್ ಕೇಂದ್ರದಲ್ಲಿ ವಕ್ರೀಭವನದ ದೋಷಗಳಿಗೆ (Refractive Errors) ಚಿಕಿತ್ಸೆ ನೀಡುವುದರ ಜೊತೆಗೆ ಲೇಸರ್ ಚಿಕಿತ್ಸಾ ವಿಧಾನಗಳು ಸೇರಿದಂತೆ ವಿವಿಧ ಕಣ್ಣಿನ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುತ್ತದೆ" ಎಂದು ಮಾಹಿತಿ ನೀಡಿದರು.
"ದೊಮ್ಮಲೂರಿನ ಕಣ್ಣಿನ ಆರೈಕೆ ಕೇಂದ್ರವು ಕಾರ್ನಿಯಾ (ಕಣ್ಣಿನ ಪಾರದರ್ಶಕ ಹೊರಪದರ), ರೆಟಿನಾ ಮತ್ತು ಗ್ಲಾಕೋಮಾ ಆರೈಕೆಯಲ್ಲಿ ವಿಶೇಷ ಸೇವೆಗಳನ್ನು ಒದಗಿಸಲಿದೆ. ಆರಂಭಿಕ ಹಂತದಲ್ಲೇ ರೋಗ ಪತ್ತೆಹಚ್ಚುವುದು, ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುವುದು ಹಾಗೂ ಸಮುದಾಯದೊಂದಿಗೆ ಸಂಪರ್ಕ ಸಾಧಿಸುವ ಕಾರ್ಯಕ್ರಮಗಳ ಮೂಲಕ ಅಂಧತ್ವವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
ದೊಮ್ಮಲೂರು ಪ್ರದೇಶದಲ್ಲಿ ವಿಶೇಷ ರೆಟಿನಾ ಮತ್ತು ಗ್ಲಾಕೋಮಾ ಚಿಕಿತ್ಸಾ ಸೇವೆಗಳ ಕೊರತೆಯಿದೆ. ಮಧುಮೇಹದಿಂದ ಉಂಟಾಗುವ ರೆಟಿನೋಪತಿ (Diabetic Retinopathy) ಮತ್ತು ಗ್ಲಾಕೋಮಾ ಮುಂತಾದ ಕಾಯಿಲೆಗಳ ಚಿಕಿತ್ಸೆಯಲ್ಲಿ ಈ ಸೇವೆಗಳು ಅತ್ಯಂತ ಪ್ರಮುಖವಾಗಿವೆ. ಇಂತಹ ಕಾಯಿಲೆಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದರೆ ಅವು ಶಾಶ್ವತ ದೃಷ್ಟಿಹೀನತೆಗೆ ಕಾರಣವಾಗಬಹುದು.
ಹೊಸ ಕೇಂದ್ರವು ಹಿಂದುಳಿದ ಮತ್ತು ಅಗತ್ಯವಿರುವ ಜನಸಮುದಾಯಗಳಿಗೆ ಕೈಗೆಟುಕುವ ದರದಲ್ಲಿ ಸುಧಾರಿತ ಕಣ್ಣಿನ ಆರೈಕೆ ಸೇವೆಗಳನ್ನು ಒದಗಿಸಲಿದೆ. ಸಬ್ಸಿಡಿ ದರದ ಚಿಕಿತ್ಸೆಗಳು ಮತ್ತು ಸಮುದಾಯ ಆಧಾರಿತ ಸಂಪರ್ಕ ಕಾರ್ಯಕ್ರಮಗಳ ಮೂಲಕ ಆರ್ಥಿಕ ಅಡೆತಡೆಗಳನ್ನು ನಿವಾರಿಸಿ. ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸುಲಭವಾಗಿ ಲಭ್ಯವಾಗುವ ಮತ್ತು ಸಮಾನತೆಯ ಆಧಾರದ ಮೇಲೆ ಕಣ್ಣಿನ ಆರೈಕೆಯನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ" ಎಂದೂ ಅವರು ಮಾಹಿತಿ ನೀಡಿದರು.
ನೇತ್ರದೀಪ್, ಏಸರ್ ಇಂಡಿಯಾದ ವ್ಯಾಪಕ ಪ್ರಾಜೆಕ್ಟ್ ಹೂಮ್ಯಾನಿಟಿ CSR ವೇದಿಕೆಯ ಒಂದು ಭಾಗವಾಗಿದೆ. ಈ ವೇದಿಕೆಯ ಮೂಲಕ ಕಂಪನಿಯು ಆರೋಗ್ಯ ಸೇವೆ, ಶಿಕ್ಷಣ, ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ ವಿವಿಧ ಉಪಕ್ರಮಗಳಿಗೆ ಬೆಂಬಲ ನೀಡುತ್ತಿದೆ. ಸಮಾಜದ ನೈಜ ಅಗತ್ಯಗಳನ್ನು ಪರಿಹರಿಸುವ ಮತ್ತು ಅರ್ಥಪೂರ್ಣ. ದೀರ್ಘಕಾಲೀನ ಪರಿಣಾಮವನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುವ ಯೋಜನೆಗಳಿಗೆ ಬೆಂಬಲ ನೀಡುವ ಏಸರ್ ಇಂಡಿಯಾದ ಬದ್ಧತೆಯನ್ನು ಈ ಕಾರ್ಯಕ್ರಮ ಪ್ರತಿಬಿಂಬಿಸುತ್ತದೆ.
ನೇತ್ರದೀಪ್ ಮೂಲಕ, ತನ್ನ ಪಾಲುದಾರರು ಮತ್ತು ವಿವಿಧ ಹಿತಾಸಕ್ತಿಪಕ್ಷಗಳ ಬೆಂಬಲದೊಂದಿಗೆ ಏಸರ್ ಇಂಡಿಯಾ ತನ್ನ CSR ಬದ್ಧತೆಯನ್ನು ಸುಲಭವಾಗಿ ಲಭ್ಯವಾಗುವ ಕಣ್ಣಿನ ಆರೈಕೆ ಸೇವೆಗಳ ಕ್ಷೇತ್ರಕ್ಕೂ ವಿಸ್ತರಿಸುತ್ತಿದೆ. ಜನರು ತಮ್ಮ ಅತ್ಯಂತ ಅಮೂಲ್ಯವಾದ ಸಂಪತ್ತುಗಳಲ್ಲಿ ಒಂದಾದ ದೃಷ್ಟಿಯನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.
Comments
Post a Comment