ಜಿಬಿಎ ಕೇಂದ್ರ ಕಛೇರಿ ಸರ್.ಎಂ.ವಿ.ಜನ್ಮದಿನಾಚರಣೆ, ಸಾಧಕ ಇಂಜನಿಯರ್ ಗಳಿಗೆ ಸನ್ಮಾನ
ಬೆಂಗಳೂರು, ಸೆಪ್ಟೆಂಬರ್ 15, 2026
ಜಿಬಿಎ ಕೇಂದ್ರ ಕಛೇರಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ- ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪಾಲಿಕೆಯ ಇಂಜಿನಿಯರಿಂಗ್‌ಗಳ ದಿನ ಕಾರ್ಯಕ್ರಮ.
ಓರಿಸ್ಸಾ ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡರು,ಮುಖ್ಯ ಆಯುಕ್ತರಾದ ಎಂ. ಮಹೇಶ್ವರರಾವ್, ಸಾಹಿತಿ ಮಲ್ಲೇಪುರಂ ವೆಂಕಟೇಶ್, ವಿಶೇಷ ಆಯುಕ್ತರಾದ ಕೆ.ನಿತೀಶ್, ಆರ್.ವೆಂಕಟಾಚಲಪತಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ, ಮುಖ್ಯ ಕಾರ್ಯ
ನಿರ್ವಾಹಣಾಧಿಕಾರಿ ಕರಿಗೌಡ, ಜಿಬಿಎ ಪ್ರಧಾನ ಅಭಿಯಂತರ ಬಿ.ಎಸ್. ಪ್ರಹ್ಲಾದ್, ಮುಖ್ಯ ಅಭಿಯಂತರಾದ ಬಸವರಾಜ್ ಕಬಾಡೆ,ಮುಖ್ಯ ನಗರ ಯೋಜಕ ಬಿ.ಎನ್. ಗಿರೀಶ್, ನಿವೃತ್ತ ಮುಖ್ಯ ಅಭಿಯಂತರ ಕೆ.ಟಿ. ನಾಗರಾಜು, ಜಿಬಿಎ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
*ವಿಶ್ರಾಂತ ನ್ಯಾಯಮೂರ್ತಿ ಗಳಾದ ಕೃಷ್ಣ ಎಸ್.ದೀಕ್ಷಿತ್* ರವರು ಮಾತನಾಡಿ ವಿಶ್ವೇಶ್ವರಯ್ಯ ನೆನಪಿನ ಅರ್ಥದಲ್ಲಿ ಇಂಜನಿಯರ್ಸ್ ದಿನವಾಗಿ ಅಚರಿಸಲಾಗುತ್ತಿದೆ. ಅವರ ನಡೆದ ಹಾದಿಯಲ್ಲಿ ನಾವು ನಡೆದು, ಮುಂದಿನ ಪೀಳಿಗೆಗೆ ನೆನಪಿಸಬೇಕು.
ಸರ್.ಎಂ.ವಿ.ತಾಂತ್ರಿಕ ಕೌಶಲ್ಯವುಳ್ಳವರು, ಜ್ಞಾನವನ್ನು ಪೂಜಿಸುವ ರಾಷ್ಚ್ರ ನಮ್ಮ ದೇಶ.
ಜ್ಞಾನದಷ್ಟು ಪವಿತ್ರವಾದದ್ದು ಇನ್ನೂಂದು ಇಲ್ಲ.
ಮದಗದ ಕೆರೆ, ಬಾಚಣಿಕೆ ಡ್ಯಾಂ ಮಣ್ಣಿನಿಂದ ಉಪಯೋಗಿಸಿದ ನಿರ್ಮಾಣ ಮಾಡಿದ್ದರು. ಡ್ಯಾಂ ಕುಸಿಯುವ ಸಂದರ್ಭ ಹಂತದಲ್ಲಿ ಕುಸಿಯದಂತೆ ತಡೆಯಲು ಪರಿಹಾರ ಸೂಚಿಸಿದರು. ವಿಶ್ವೇಶ್ವರಯ್ಯ ರವರು ಥೇಮ್ಸ್ ನದಿಯ ಡ್ಯಾಂ ನಿರ್ಮಾಣದಲ್ಲಿ ಮೇಲಿನಿಂದ ವೀಕ್ಷಣೆ ಮಾಡಿದಾಗ ಇಂಡಿಯಾ ಎಂಬ ಶಬ್ಬ ಕಾಣುತ್ತದೆ ಅದರಲ್ಲಿ ಒಂದು ಕಲ್ಲು ತೆಗೆದರು ಡ್ಯಾಂ ಉಳಿಯುವುದಿಲ್ಲ ಅ ರೀತಿಯಲ್ಲಿ ನಿರ್ಮಿಸಲಾಗಿತ್ತು.
ಸರ್.ಎಂ.ವಿ.ಶಿಸ್ತು, ಸಂಯಮ ಜ್ವಾನವಂತರಾಗಿದ್ದರು. 102ವರ್ಷವಾದರು ಜ್ಞಾನದಾಹ ತೀರಲ್ಲಿಲ. ಪುಸ್ತಕಗಳ ಅಪಾರ ವ್ಯಾಮೋಹ ಹೊಂದಿದ್ದರು. ಸಾಹಿತಿ ಡಿ.ವಿ.ಗುಂಡಪ್ಪರವರ ಜೊತೆಯಲ್ಲಿ ನಿಕಟ ಸಂಪರ್ಕ ಹೊಂದಿದ್ದರು. ಕನ್ನಡ ಭಾಷೆಯ ಅಪಾರ ಒಲವು ಹೊಂದಿದ್ದರು ಸರ್.ಎಂ.ವಿ.
ಕೆ.ಆರ್.ಎಸ್.ಡ್ಯಾಂನಿಂದ ಲಕ್ಷಾಂತರ ಎಕರೆ ಜಾಗ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿ, ಉದ್ಯೋಗ ಸೃಷ್ಟಿಯಾಯಿತು. ಡ್ಯಾಂ ಕಟ್ಟುವಾಗ ಕಟ್ಟಿನಿಟ್ಟಿನ ನಿಯಮ ಪಾಲಿಸುತ್ತಿದ್ದರು.
*ಮುಖ್ಯ ಆಯುಕ್ತರಾದ ಎಂ.ಮಹೇಶ್ವರರಾವ್* ರವರು ಮಾತನಾಡಿ ವಿಶ್ವೇಶ್ವರಯ್ಯ ರವರ ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು. ಬೆಂಗಳೂರಿಗೆ ವಿದ್ಯುತ್ ಸಂಪರ್ಕ ಬೆಂಗಳೂರಿಗೆ ಬಂತು. ಕೆ.ಆರ್.ಎಸ್. ಮತ್ತು ಸೇತುವೆಗಳ ನಿರ್ಮಾಣ ಮಾಡಿದರು.
ದೊಡ್ಡ, ದೊಡ್ಡ ಕಾಮಗಾರಿ ಮಾಡಬೇಕಾದಾಗ ನಮ್ಮ ಪ್ಲಾನ್ ಗಳಿಗೆ ಪ್ರೇರಣೆ ಎಂದರೆ ಸರ್.ಎಂ.ವಿ.ಸ್ಪೂರ್ತಿಯಾಗಿದ್ದಾರೆಬೆಂಗಳೂರಿನಲ್ಲಿ ಕಾಮಗಾರಿಗಳಾದ ಕಟ್ಟಡ, ರಸ್ತೆಗಳು ಉತ್ತಮ ಗುಣಮಟ್ಟದಲ್ಲಿ ಇದೆ. ಇಂಜನಿಯರ್ಸ್ ಗಳು ಕಾಮಗಾರಿ ನಡೆಯುವ ಸ್ಥಳದಲ್ಲಿ ಇರಬೇಕು ಕಛೇರಿಯಲ್ಲಿ ಕುಳಿತು ಕೆಲಸ ಮಾಡಿದರೆ ಕಾಮಗಾರಿ ಗುಣಮಟ್ಟ ಬರುವುದಿಲ್ಲ.ಯುವ ಇಂಜನಿಯರ್ ಗಳು ಮುಂದೆ ಬರಬೇಕು ಎಂದು ಹೇಳಿದರು.
*ಬಿ.ಎಸ್.ಪ್ರಹ್ಲಾದ್ ರವರು* ಮಾತನಾಡಿ ಸರ್.ಎಂ.ವಿಶ್ವೇಶ್ವರಯ್ಯ ಪರಿಶ್ರಮದಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು. ಅವರ ಮಾಡಿದ ಸಾಧನೆಗಳನ್ನು ನೆನಪು ಮಾಡುವ ದಿನವೇ ಇಂಜನಿಯರ್ಸ್ ದಿನಾಚರಣೆ ಅಚರಿಸಲಾಗುತ್ತಿದೆ. ಬೆಂಗಳೂರುನಲ್ಲಿ ಟ್ರಾಫಿಕ್ ಸಮಸ್ಯೆ ಬಹಳ ಇದೆ ಅ ಸಮಸ್ಯೆಗಳು ನಿವಾರಣೆ ಮಾಡಬೇಕು ಎಂದು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ಟ್ರಾಪಿಕ್ ಮ್ಯಾನೇಜೆಮೆಂಟ್ ಪ್ಲಾನ್ ಮಾಡಿ ಟ್ರಾಫಿಕ್ ಸಮಸ್ಯೆ ನಿವಾರಣೆ ಕ್ರಮ ಕೈಗೊಳ್ಳಲಾಯಿತು.
ಇಂಜನಿಯರ್ಸ್ ಹೆಮ್ಮೆಯಿಂದ ಕೆಲಸ ಮಾಡಬೇಕು, ನಗರ ಅಭಿವೃದ್ದಿಗೆ ಕೊಡುಗೆ ನೀಡಬೇಕು. ಸಂತೋಷದಿಂದ ಕೆಲಸ ಮಾಡಬೇಕು, ಟೈಮ್ ಸರಿಯಾಗಿ ಕೆಲಸ ಮಾಡಬೇಕು ಇಂಜನಿಯರ್ಸ್ ಗಳು ಎಂದು ಹೇಳಿದರು.
Comments
Post a Comment