ಧೀ ಹಾಸ್ಪಿಟಲ್ಸ್ ಮತ್ತು ಸ್ಮಿಥಮ್ ಸಹಯೋಗದೊಂದಿಗೆ "ಡೇರ್ ರನ್ 2026" ಆಯೋಜನೆ: ಕಾಂತಾರ ನಟಿ ಸಪ್ತಮಿ ಗೌಡ ಭಾಗಿ
ದೀ ಆಸ್ಪತ್ರೆ ವತಿಯಿಂದ ಡೇರ್ ರನ್ 2026 ನಡಿಗೆ ಫೋರಂ ಸೌತ್ ಬೆಂಗಳೂರುನಿಂದ ಡಿಹೆಚ್ಇಇ ಆಸ್ಪತ್ರೆವರೆಗೆ ನಡೆಯಿತು.
ವಿಶ್ವ ಸಂಧಿವಾತ ದಿನದ ಪ್ರಯುಕ ಚಲನೆಯೇ ಜೀವನ ಎಂಬ ಪ್ರಬಲ ಸಂದೇಶಕ್ಕಾಗಿ ಡೇರ್ ರನ್ 2026 ಆಯೋಜನೆ ಮಾಡಲಾಗಿತ್ತು.
ಈ ಅಕ್ಟೋಬರ್ 12 ರಂದು, ಸಂಧಿವಾತ, ಕೀಲು ಆರೋಗ್ಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸ್ಮಿಟಮ್ ಎನ್‌ಜಿಡಿ ಮತ್ತು ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ಸ್ 3191 & 3192 ಸಹಯೋಗದೊಂದಿಗೆ ದೀ ಆಸ್ಪತ್ರೆಗಳು ನಡೆಸುವ ಸ್ಪೂರ್ತಿದಾಯಕ ಸಮುದಾಯ ಚಳುವಳಿ ಡೇರ್ ರನ್ 2026 ರಲ್ಲಿ 6,000ಕ್ಕೂ ಅಧಿಕ ಹೆಚ್ಚು ಓಟಗಾರರು ಭಾಗವಹಿಸಿದ್ದಾರೆ ಎಂದು ಡಾ.ಚಂದ್ರಶೇಖರ್ ಚಿಕ್ಕಮುನಿಯಪ್ಪ ತಿಳಿಸಿದರು.
ನಟಿ ಸಪ್ತಮಿ ಗೌಡ, ಅಂತರಾಷ್ಟ್ರೀಯ ಖ್ಯಾತಿ ವೈರ್‌ಲೆಸ್ ವಾಕಿಂಗ್ ಪಿಟೀಲು ವಾದಕ ವಿಶೇಷ ಅತಿಥಿ ಡಾ. ಅನೀಶ್ ವಿದ್ಯಾಶಂಕರ್ ಅವರು ಭಾಗಿಯಾಗಿದ್ದರು.
Comments
Post a Comment