ಭಾರತೀಯ ವಿದ್ಯಾಭವನದ ವಜ್ರಮಹೋತ್ಸವ ಸಮಾರಂಭ

ಮನೆಯಲ್ಲಿ ಅಜ್ಜ-ಅಜ್ಜಿಯರ ಭಾಷೆಯಲ್ಲಿ ಮೊಮ್ಮಕ್ಕಳು ಮಾತನಾಡದೇ ಇದ್ದರೆ ಆ ಭಾಷೆ ಉಳಿಯದು ಎಂದು ಯುನೆಸ್ಕೊ ಮಾಜಿ ರಾಯಭಾರಿ ಚಿರುಜೀವ್ ಸಿಂಗ್ ಅಭಿಪ್ರಾಯಪಟ್ಟರು.

ನಗರದ ಭಾರತೀಯ ವಿದ್ಯಾಭವನದಲ್ಲಿ ವಜ್ರಮ ಹೋತ್ಸವದ ಪ್ರಯುಕ್ತ ಆಯೋಜಿಸಿರುವ 'ಕರ್ನಾಟಕ ನುಡಿತೋಟ' ಸಾಹಿತ್ಯೋತ್ಸವ ಹಾಗೂ ಸಾಂಸ್ಕೃತಿಕ ಮೇಳದಲ್ಲಿ ಮಾತನಾಡಿದ ಅವರು, ಮೊಮ್ಮಕ್ಕಳ ಭಾಷೆಯಲ್ಲಿ ಇಲ್ಲದ ಪದಗಳು ಅಜ್ಜಿಯ ಕಥೆಗಳಲ್ಲಿ ಇರುತ್ತವೆ. ಭಾಷೆ ಸಮುದಾಯದ ಸ್ಮೃತಿ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸಂಪೂರ್ಣವಾಗಿ ಭಾಷಾಂತರಿಸಲು ಕಷ್ಟವಾಗುವ ಪರಿಕಲ್ಪನೆಗಳಿರುತ್ತವೆ. ಇನ್ನೊಂದು ಭಾಷೆ ಅಸಮರ್ಥ ಎಂಬುದು ಇದಕ್ಕೆ ಕಾರಣವಲ್ಲ. ಪ್ರತಿ ಭಾಷೆಯಲ್ಲಿ ಅಂಥ ವಿಶಿಷ್ಟವಾದ ವ್ಯತ್ಯಾಸಗಳು ಇರುತ್ತವೆ ಅವುಗಳನ್ನು ನಾವು ಕಳೆದುಕೊಳ್ಳಬಾರದು ಎಂದರು.

ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಸಾಹಿತ್ಯದ ಪರಿಚಯ ಮಾಡಿಸುವ ಕೆಲಸ ಮಾಡಬೇಕು. ಮಕ್ಕಳನ್ನು ಇಂತಹ ಸ್ಥಳಗಳಿಗೆ ಕರೆದುಕೊಂಡು ಬಂದು ಸಾಹಿತ್ಯ ಪರಿಚಯಿಸಬೇಕು. ಆಗ ಮುಂದಿನ ಪೀಳಿಗೆಗೆ ಭಾಷೆ, మికి ಸಾಹಿತ್ಯ ಹಾಗೂ ಸಂಸ್ಕೃತಿಯ ಅರಿವು ಮೂಡುತ್ತದೆ ಎಂದು ಸಲಹೆ ನೀಡಿದರು. ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ, ಬಾರಿ ಸಾಹಿತ್ಯ ಅಕಾಡೆಮಿ, ಕೊಡವ ಸಾಹಿತ್ಯ ಆಕಾಡೆಮಿ. ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಜಾನಪದ ಪರಿಷತ್ ಕಾರ್ಯ ಕ್ರಮದಲ್ಲಿಭಾಗಿಯಾಗಿದ್ದವು. ಚಿತ್ರ ಭಾರತಿ ಹೆಸರಿನಲ್ಲಿ ಆಯೋಜಿಸಲಾಗಿದ್ದ ಚಿತ್ರಗಳ ಪ್ರದರ್ಶನ, ವಿವಿಧ ಪ್ರಕಾಶನಗಳ ಪುಸ್ತಕ ಮಳಿಗೆ ಎಲ್ಲರ ಗಮನಸೆಳೆದವು. ಪ್ರೆಸ್ಟೀಜ್ ಸಮೂಹ ಸಂಸ್ಥೆಯ ಮುಖ್ಯ ಮುಖ್ಯಸ್ಥ ಇರ್ಫಾನ್ ರಜಾಕ್ ಅವರು ಉಪಸ್ಥಿತರಿದ್ದರು. 

ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಎಚ್. ಎನ್. ಸುರೇಶ್, ಚಿರಂಜೀವ್ ಸಿಂಗ್ ಮತ್ತಿತರರು ಪುಷ್ಪ ನಮನ ಸಲ್ಲಿಸಿದರು.

ಯಾವ ಭಾಷೆ, ಸಂಸ್ಕೃತಿಯು ಆ ಸಮುದಾಯದ ಬದುಕಿನ ಅವಿಭಾಜ್ಯ ಅಂಗವಾಗಿ ಉಳಿಯದೇ ಇದ್ದರೆ ಇನ್ನು ನೂರು ವರ್ಷಗಳಲ್ಲಿ ಅಂಥ ಭಾಷೆ, ಸಂಸ್ಕೃತಿ ನಾಶವಾಗುತ್ತದೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium