Posts

ಬೆಂಗಳೂರಿನ ಗಾಂಧಿಭವನದಲ್ಲಿ 'ದಲಿತ ಸಂಘಟನೆಗಳ ಒಕ್ಕೂಟ'ದ ವತಿಯಿಂದ ಡಾ|| ಎಂ. ವೆಂಕಟಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.

Image
ಬೆಂಗಳೂರು, ಜುಲೈ 17, 2025    ಬೆಂಗಳೂರಿನ ಗಾಂಧಿಭವನದಲ್ಲಿ 'ದಲಿತ ಸಂಘಟನೆಗಳ ಒಕ್ಕೂಟ'ದ ವತಿಯಿಂದ ಡಾ|| ಎಂ. ವೆಂಕಟಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.   ಬೌದ್ಧ ಧರ್ಮದ ಪದ್ಧತಿಯಂತೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ದೀಪ ಬೆಳಗುವ ಮುಖೇನ ಅಭಿನಂದನಾ ಸಮಾರಂಭವನ್ನು ಉದ್ಘಾಟನೆ ಮಾಡಲಾಯಿತು.  ಈ ಸಮಾರಂಭವು 'ಕರ್ನಾಟಕ ಭೀಮ ಸೇನೆ' ಸಂಘಟನೆಯ ಅಧ್ಯಕ್ಷರಾದ ಶಂಕರ್ ಅವರ ನೇತೃತ್ವದಲ್ಲಿ ನಡೆಯಿತು. ಸಮತಾ ಸೈನಿಕ ದಳ ಹಾಗೂ ಇನ್ನಿತರ ದಲಿತ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು.

'ಶಕ್ತಿ ಯೋಜನೆ' ಯಿಂದ ರಾಜ್ಯದಲ್ಲಿ ಮಹಿಳೆಯರ ಸಬಲೀಕರಣ ಸಾಧ್ಯವಾಗಿದೆ - ಎಲ್. ಜಯರಾಮ್

Image
 'ಶಕ್ತಿ ಯೋಜನೆಯ 500 ಕೋಟಿ ಮಹಿಳಾ ಪ್ರಯಾಣಿಕರ ದಾಖಲೆ' ಹಿನ್ನಲೆ ಬೆಂಗಳೂರಿನ ಕೆ.ಆರ್. ಪುರ ಬಸ್ ನಿಲ್ದಾಣದ ಮುಂದೆ ಬಿಎಂಟಿಸಿ ಬಸ್ ಗೆ ಪೂಜೆ ಹಾಗೂ ಪ್ರಯಾಣಿಕರಿಗೆ ಸಿಹಿ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕೆ. ಆರ್. ಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಎಲ್. ಜಯರಾಮ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.  ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ಬಿಎಂಟಿಸಿ ಚಾಲಕರಿಗೆ ನಿರ್ವಾಹಕರಿಗೆ ಪ್ರಯಾಣಿಕರಿಗೆ ಸಿಹಿ ಹಂಚಿ ಶಕ್ತಿ ಯೋಜನೆಯ ಸಂಭ್ರಮಾಚರಣೆಯನ್ನು ಮಾಡಲಾಯಿತು.

'ಶಕ್ತಿ ಯೋಜನೆ' ಯಿಂದ ರಾಜ್ಯದಲ್ಲಿ ಮಹಿಳೆಯರ ಸಬಲೀಕರಣ ಸಾಧ್ಯವಾಗಿದೆ - ಎಲ್. ಜಯರಾಮ್

Image
'ಶಕ್ತಿ ಯೋಜನೆಯ 500 ಕೋಟಿ ಮಹಿಳಾ ಪ್ರಯಾಣಿಕರ ದಾಖಲೆ' ಹಿನ್ನಲೆ ಬೆಂಗಳೂರಿನ ಕೆ.ಆರ್. ಪುರ ಬಸ್ ನಿಲ್ದಾಣದ ಮುಂದೆ ಬಿಎಂಟಿಸಿ ಬಸ್ ಗೆ ಪೂಜೆ ಹಾಗೂ ಪ್ರಯಾಣಿಕರಿಗೆ ಸಿಹಿ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕೆ. ಆರ್. ಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಎಲ್. ಜಯರಾಮ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.  ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ಬಿಎಂಟಿಸಿ ಚಾಲಕರಿಗೆ ನಿರ್ವಾಹಕರಿಗೆ ಪ್ರಯಾಣಿಕರಿಗೆ ಸಿಹಿ ಹಂಚಿ ಶಕ್ತಿ ಯೋಜನೆಯ ಸಂಭ್ರಮಾಚರಣೆಯನ್ನು ಮಾಡಲಾಯಿತು.

ಬೆಂಗಳೂರಿನ ಗಾಂಧಿಭವನದಲ್ಲಿ 'ಕರ್ನಾಟಕ ಮಾದರ ಮಹಾಸಭಾ'ದ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Image
ಬೆಂಗಳೂರು, ಜುಲೈ 13, 2025   ಸಮುದಾಯದ ಬಲವರ್ದನೆಗಾಗಿ ಸದಸ್ಯತ್ವದ ಅಭಿಯಾನದಲ್ಲಿ ನೊಂದಣಿ ಮಾಡಿಸಿ; ಬಲಿಷ್ಠ ಸಂಘದ ನಿರ್ಮಾಣ ನಮ್ಮ ಸಂಕಲ್ಪ; ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ   ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ನೋಂದಣಿ ಅಭಿಯಾನ ಸಭೆಯನ್ನು ಇಂದು ಬೆಂಗಳೂರಿನ ಗಾಂಧೀ ಭವನದಲ್ಲಿ ಆಯೋಜಿಸಿದ್ದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ. ರವರು ಉದ್ಘಾಟಿಸಿದರು. ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಮಾದರ ಮಹಾಸಭೆಯ ಸದಸ್ಯರಾಗಲು ಸಾಮಾನ್ಯ ಸದಸ್ಯತ್ವ 500 ರೂಗಳು ಅಜೀವ ಸದಸ್ಯತ್ವ 25 ಸಾವಿರ ,ಪೋಷಕ ಸದಸ್ಯತ್ವ 50 ಸಾವಿರ ಮಹಾ ಪೋಷಕ ಸದಸ್ಯತ್ವ ಸದಸ್ಯರಾಗಲು 1ಲಕ್ಷರೂಗಳನ್ನು ನಿಗದಿಪಡಿಸಿದ್ದು ಎಲ್ಲಾ ಸಮುದಾಯದ ಸದಸ್ಯರು ನೊಂದಣಿ ಮಾಡಲು ಮನವಿ ಮಾಡಿದರು. ನಂತರ ಮಾತನಾಡಿದ ಸಚಿವರು,ಈ ಸಮುದಾಯದ ಸಂಘದ ಪ್ರಾರಂಭ ಸುಮಾರು 12 ವರ್ಷಗಳಿಂದಲೂ ನಡೆಯುತ್ತಿದೆ ಆದರೆ ಇದಕ್ಕೆ ಸರಿಯಾದ ನೆಲೆ ಇಲ್ಲಾ ಆಗಾಗಿ ನಾವು ಈಗ ತೀರ್ಮಾನಿಸಿದ್ದು ಮಾದರ ಮಹಾಸಭಾ ಎಂಬುದು ಒಕ್ಕಲಿಗರ ಸಂಘ ,ವೀರಶೈವ ಮಹಾಸಭಾ,ಕುರುಬರ ಸಂಘದ ರೀತಿಯಲ್ಲಿ ನಮ್ಮ ಮಾದರ ಮಹಾಸಭಾ ಕಟ್ಟಲು ತೀರ್ಮಾನಿಸಿದ್ದು ನಮ್ಮ ಸಂಘದ ಪಧಾದಿಕಾರಗಳು ಸಮುದಾಯದ ಸದಸ್ಯತ್ವ ನೊಂದಣಿ ಮಾಡಿಸಲು ಮುಂದಾಗ...

ಬೆಂಗಳೂರಿನ ಗಾಂಧಿಭವನದಲ್ಲಿ 'ಕರ್ನಾಟಕ ಮಾದರ ಮಹಾಸಭಾ'ದ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Image
ಬೆಂಗಳೂರು, ಜುಲೈ 13, 2025  ಬೆಂಗಳೂರಿನ ಗಾಂಧಿಭವನದಲ್ಲಿ 'ಕರ್ನಾಟಕ ಮಾದರ ಮಹಾಸಭಾ'ದ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.   ಸಮುದಾಯದ ಬಲವರ್ದನೆಗಾಗಿ ಸದಸ್ಯತ್ವದ ಅಭಿಯಾನದಲ್ಲಿ ನೊಂದಣಿ ಮಾಡಿಸಿ; ಬಲಿಷ್ಠ ಸಂಘದ ನಿರ್ಮಾಣ ನಮ್ಮ ಸಂಕಲ್ಪ; ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ   ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ನೋಂದಣಿ ಅಭಿಯಾನ ಸಭೆಯನ್ನು ಇಂದು ಬೆಂಗಳೂರಿನ ಗಾಂಧೀ ಭವನದಲ್ಲಿ ಆಯೋಜಿಸಿದ್ದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ. ರವರು ಉದ್ಘಾಟಿಸಿದರು. ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಮಾದರ ಮಹಾಸಭೆಯ ಸದಸ್ಯರಾಗಲು ಸಾಮಾನ್ಯ ಸದಸ್ಯತ್ವ 500 ರೂಗಳು ಅಜೀವ ಸದಸ್ಯತ್ವ 25 ಸಾವಿರ ,ಪೋಷಕ ಸದಸ್ಯತ್ವ 50 ಸಾವಿರ ಮಹಾ ಪೋಷಕ ಸದಸ್ಯತ್ವ ಸದಸ್ಯರಾಗಲು 1ಲಕ್ಷರೂಗಳನ್ನು ನಿಗದಿಪಡಿಸಿದ್ದು ಎಲ್ಲಾ ಸಮುದಾಯದ ಸದಸ್ಯರು ನೊಂದಣಿ ಮಾಡಲು ಮನವಿ ಮಾಡಿದರು. ನಂತರ ಮಾತನಾಡಿದ ಸಚಿವರು,ಈ ಸಮುದಾಯದ ಸಂಘದ ಪ್ರಾರಂಭ ಸುಮಾರು 12 ವರ್ಷಗಳಿಂದಲೂ ನಡೆಯುತ್ತಿದೆ ಆದರೆ ಇದಕ್ಕೆ ಸರಿಯಾದ ನೆಲೆ ಇಲ್ಲಾ ಆಗಾಗಿ ನಾವು ಈಗ ತೀರ್ಮಾನಿಸಿದ್ದು ಮಾದರ ಮಹಾಸಭಾ ಎಂಬುದು ಒಕ್ಕಲಿಗರ ಸಂಘ ,ವೀರಶೈವ ಮಹಾಸಭಾ,ಕುರುಬರ ಸಂಘದ ರೀತಿಯಲ್ಲಿ ನಮ್ಮ ಮಾದರ ಮಹಾ...

ಬೆಂಗಳೂರಿನ ಕೋರ್ಟ್‌ಯಾರ್ಡ್ ಬೈ ಮ್ಯಾರಿಯಟ್ ನಲ್ಲಿ 'ಯುವ ಪುಸ್ತಕ ಸರಣಿ' ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

Image
ಬೆಂಗಳೂರು, ಜುಲೈ 12, 2025 ಬೆಂಗಳೂರಿನ ಕೋರ್ಟ್‌ಯಾರ್ಡ್ ಬೈ ಮ್ಯಾರಿಯಟ್ ನಲ್ಲಿ 'ಯುವ ಪುಸ್ತಕ ಸರಣಿ' ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.  ದೀಪ ಬೆಳಗುವ ಮುಖೇನ ಈ ಕಾರ್ಯಕ್ರಮವನ್ನು ಸಂಸದರಾದ ಸುಧಾ ಮೂರ್ತಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯ‌ರ್, ಮಧುಸೂದನ್ ಸಾಯಿ ಅವರು ಉದ್ಘಾಟನೆ ಮಾಡಿದರು.  ಫೌಂಡೇಷನ್‌ ಫಾರ್ ಇಂಡಿಯನ್ ಹಿಸ್ಟಾರಿಕಲ್ ಆ್ಯಂಡ್ ಕಲ್ಬರಲ್ ರಿಸರ್ಚ್ ಸಂಸ್ಥೆಯು 'ಯುವ ಪುಸ್ತಕ ಸರಣಿ' ಕಾರ್ಯಕ್ರಮವನ್ನು ಆಯೋಜಿಸಿತ್ತು.  ಈ ಕಾರ್ಯಕ್ರಮದಲ್ಲಿ ಪ್ರಮುಖ ಲೇಖಕರ ಪುಸ್ತಕಗಳನ್ನು ಸುಧಾ ಮೂರ್ತಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯ‌ರ್ ಅವರು ಬಿಡುಗಡೆ ಮಾಡಿದರು.     ಈ ಸಂದರ್ಭದಲ್ಲಿ ದೇಶದ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವಂತಹ ಕನ್ನಡ, ತೆಲುಗು, ತಮಿಳು ಹಾಗೂ ಭಾಷಾಂತರಗೊಂಡ ಪುಸ್ತಕಗಳನ್ನು ಬಿಡುಗಡೆ ಮಾಡಿದರು.  ಈ ಕಾರ್ಯಕ್ರಮದಲ್ಲಿ ಇತಿಹಾಸದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ವಿವಿಧ ಶಾಲೆಗಳ ಮಕ್ಕಳು ಭಾಗಿಯಾಗಿದ್ದರು.

ಮೌಂಟ್ ಕಾರ್ಮೆಲ್ ಕಾಲೇಜು ಸಂಸ್ಥಾಪನಾ ದಿನ; ಬೂಕರ್ ವಿಜೇತೆ ಬಾನು ಮುಶ್ತಾಕ್ ಅವರಿಂದ ವಿಶೇಷ ಉಪನ್ಯಾಸ.

Image
ಬೆಂಗಳೂರು, ಜುಲೈ 12, 2025  ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಶ್ತಾಕ್ ಅವರ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜು ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾನು ಮುಶ್ತಾಕ್, ನಾನು ಬಾಲ್ಯದ ದಿನಗಳಲ್ಲಿ ಉರ್ದು ಮತ್ತು ಕನ್ನಡ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆದೆ.ನನ್ನ ಬರವಣಿಗೆಯನ್ನು ಜೀವನದುದ್ದಕ್ಕೂ ನಿಲ್ಲಿಸಿಲ್ಲ, ಕಥೆ,ಕಾದಂಬರಿ, ಕವನಗಳನ್ನು ಬರೆದಿದ್ದೇನೆ,ಲಂಕೇಶ್ ನಂತಹ ವಾರ ಪತ್ರಿಕೆಯಲ್ಲಿ ನನ್ನ ನಿರಂತರ ಬರವಣಿಗೆ ಇತ್ತು,ನಿಜವಾಗಿಯೂ ನೇರವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಬೂಕರ್ ನಂತಹ ಪ್ರತಿಷ್ಢಿತ ಪ್ರಶಸ್ತಿಗಳು ಪಡೆದೆ ಎಂದು ಹೇಳಿದರು. ನನ್ನ ಕಥೆಯಾದ ಹಸೀನಾ ಕತೆಯ ಸಿನಿಮಾವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಪ್ರಶಸ್ತಿ ಪಡೆದಿದೆ. ನನ್ನ ಸ್ನೇಹಿತೆ ದೀಪಾ ಬಾಸ್ತಿ "ಎದೆಯ ಹಣತೆ" ಪುಸ್ತಕವನ್ನು ಒದುವ ಮೂಲಕ ಇಂಗ್ಲಿಷ್‌ ಗೆ ಭಾಷಾಂತರಿಸಿದರು.ನನ್ನ ಎದೆಯ ಪುಸ್ತಕ ಕಾಮನ್ ವೆಲ್ತ್ ಪ್ರಶಸ್ತಿಗೆ ಆಯ್ಕೆಯಾದ ಹದಿಮೂರು ಪುಸ್ತಕಗಳಲ್ಲಿ ಒಂದಾಗಿತ್ತು.ನನ್ನ ಪುಸ್ತಕ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದಾಗ ಅಶ್ಚರ್ಯ ಉಂಟಾಗಿತ್ತು. ನನ್ನ ಪಾಡಿಗೆ ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದಾಗ ಬೆಳಗ್ಗೆ ಮಾಧ್ಯಮದವರು ಮನೆಯ ಮುಂದೆ ಬಂದಾಗ ದೊಡ್ಡ ಆಶ್ಚರ್ಯವು ಕಾದಿತ್ತು ಎಂದು ಹೇಳಿದರು. ಬೂಕರ್ ಪ್ರಶಸ್ತಿ ಸ್ವೀಕರ...