Posts

ಬೆಳವಾಲ್ ಫೌಂಡೇಶನ್ ನಿಂದ 'ಒಂದು ಕೋಟಿ ಮರ ನೆಡುವ ಅಭಿಯಾನ'ವು ಫೆಬ್ರವರಿ 1 ರಿಂದ - ಜೂನ್ 5 ರವರೆಗೆ ನಡೆಯಲಿದೆ.

Image
ಬೆಳವಾಲ್ ಫೌಂಡೇಶನ್ ನಿಂದ 'ಒಂದು ಕೋಟಿ ಮರ ನೆಡುವ ಅಭಿಯಾನ'ವು ಫೆಬ್ರವರಿ 1 ರಿಂದ - ಜೂನ್ 5 ರವರೆಗೆ ನಡೆಯಲಿದೆ.  ಪ್ರತಿ ವ್ಯಕ್ತಿ ಒಂದು ಮರ ನೆಡಲು ಮನವಿ ತಾಯಿ ಭೂಮಿಯನ್ನು ಮತ್ತು ಪರಿಸರವನ್ನು ಉಳಿಸಿ. ಆರೋಗ್ಯಕರ ಜೀವನಕ್ಕೆ ಹಾಗೂ ಶುದ್ಧ ಗಾಳಿಗೆ ನಮ್ಮ ಹಕ್ಕನ್ನು ಕಾಪಾಡೋಣ 2024ರ ಮಾರ್ಚ್ ವರದಿ ಪ್ರಕಾರ, ಕರ್ನಾಟಕದಲ್ಲಿ ಈಗಾಗಲೇ *86,308 ಹೆಕ್ಟೇರ್ ಕಾಡು ಪ್ರದೇಶ ಅಕ್ರಮವಾಗಿ ಅತಿಕ್ರಮಣವಾಗಿದೆ* ಇಂದು 'ಮರ ನೆಡುವುದು ಅತ್ಯಂತ ಅಗತ್ಯವಾಗಿದೆ. ಭೂಮಿ ಸಹಾಯಕ್ಕಾಗಿ ಅಳುತ್ತಿದೆ. ಮರಗಳು ಅದರ ಮೌನ ರಕ್ಷಕರು. ಒಂದು ಕಾಲದಲ್ಲಿ ಹಸಿರು ಕಾಡುಗಳಿಂದ ತುಂಬಿದ್ದ ನಮ್ಮ ಭೂಮಿ, ಇಂದು ಅರಣ್ಯ ನಾಶ ಮತ್ತು ಮಾಲಿನ್ಯದ ಕಾರಣ ಉಸಿರಾಡಲು ಕಷ್ಟಪಡುತ್ತಿದೆ. ಪ್ರತಿ ಮರ ಕಡಿದಾಗ, ನಾವು ಅಪಾಯಕರ ಭವಿಷ್ಯದತ್ತ ಒಂದು ಹೆಜ್ಜೆ ಇಡುತ್ತಿದ್ದೇವೆ. ಹೆಚ್ಚುತ್ತಿರುವ ಬಿಸಿಲು, ಮಾಲಿನ್ಯಗೊಂಡ ಗಾಳಿ. ಒಣಗುತ್ತಿರುವ ನದಿಗಳು ಮತ್ತು ಅನಿಶ್ಚಿತ ಹವಾಮಾನ ಇವು ಪ್ರಕೃತಿಯ ನೋವಿನ ಸಂಕೇತಗಳು, ಮರಗಳು ಕೇವಲ ಸಸ್ಯಗಳಲ್ಲ, ಅವು *ಜೀವದಾತರು*. ಅವು ನಮಗೆ ಉಸಿರಾಡಲು ಆಮ್ಲಜನಕ, ನೆರಳಿಗಾಗಿ ಛಾಯೆ, ಆಹಾರಕ್ಕಾಗಿ ಹಣ್ಣುಗಳು ಮತ್ತು ಅನೇಕ ಪಕ್ಷಿ-ಪ್ರಾಣಿಗಳಿಗೆ ಆಶ್ರಯ ನೀಡುತ್ತವೆ. ಮಣ್ಣು ರಕ್ಷಣೆ, ಮಳೆ ಮತ್ತು ಪ್ರಕೃತಿಯ ಸಮತೋಲನ-ಇವು ಮರಗಳಿಂದಲೇ ಸಾಧ್ಯ. ಮರಗಳಿಲ್ಲದೆ ಭೂಮಿಯ ಮೇಲೆ ಜೀವನ ಸಾಧ್ಯವಿಲ್ಲ. *ಮರ ನೆಡುವುದು ಇಂದಿ...

ಸ್ವಚ್ಛತಾ ಘನತ್ಯಾಜ್ಯ ಚಾಲಕರು, ಸಹಾಯಕರುಗಳ ನೇರಪಾವತಿ ಯೋಜನೆಗೆ ಒಳಪಡಿಸುವಂತೆ ಪ್ರತಿಭಟನೆ

Image
ಬೆಂಗಳೂರು ಜನವರಿ 30, 2026  ಸ್ವಚ್ಛತಾ ಕಾರ್ಮಿಕರ ಜ್ವಲಂತ ಸಮಸ್ಯೆಗಳ ಹಿನ್ನೆಲೆಯಲ್ಲಿ ಘನತ್ಯಾಜ್ಯ ಚಾಲಕರು, ಸಹಾಯರುಗಳನ್ನು ಕೂಡಲೇ ನೇರಪಾವತಿ ಯೋಜನೆಗೆ ಒಳಪಡಿಸುವಂತೆ ಕಾರ್ಮಿಕ ಸಂರಕ್ಷಣಟ ಟ್ರೇಡ್ ಯೂನಿಯನ್ ವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ನೂರಾರು ಪೌರಕಾರ್ಮಿಕರು ಭಾಗವಹಿಸಿದ್ದರು. ಸಮಿತಿ ರಾಜ್ಯಾಧ್ಯಕ್ಷ ತ್ಯಾಗರಾಜ್ ಮಾತನಾಡಿ, ರಾಜ್ಯ ಸರ್ಕಾರ ನೇರ ಪಾವತಿ ಯೋಜನೆಗೆ ಘನತಾಜ್ಯ ಚಾಲಕರು ಸಹಾಯಕರನ್ನು ನೇರಪಾವತಿ ಯೋಜನೆಯಡಿ ಒಳಪಡಿಸುವಂತೆ ಆದೇಶಿಸಬೇಕು, ಕೊಟ್ಟ ಮಾತಿಗೆ ತಪ್ಪಿದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಸ್ವಚ್ಛತಾ ಕೆಲಸಕ್ಕೆ ಬಹುಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದ ಜನಾಂಗದವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತ ಸಂವಿಧಾನದ ಆಶಯದಂತೆ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳ ಆಡಿಯಲ್ಲಿ ವಿಶೇಷ ಆಧ್ಯತೆ ಮೇರೆಗೆ ಈ ಜನಾಂಗವನ್ನು ಎಲ್ಲಾ ಶೋಷಣೆಯಿಂದ ಸಂವಿಧಾನದ ಅನುಚ್ಛೇದ 46ರ ಪ್ರಕಾರ ರಕ್ಷಣೆ ಮಾಡಬೇಕಾದ ಹೊಣೆಯು ಸರ್ಕಾರದ ಮೇಲೆ ಇದೆ ಎಂದು ಹೇಳಿದರು. ಉಪ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಧರಣಿನಿರತ ಕೆಲವು ನಾಯಕರನ್ನು ತಮ್ಮ ಕಛೇರಿಗೆ ಕರೆಸಿಕೊಂಡು ಮತ್ತೆ ಆಶ್ವಾಸನೆ ನೀಡಿ,ಈ ಸಿಬ್ಬಂದಿಯನ್ನು ಅಗತ್ಯ ಸೇವೆ ಎಂದು ಪರಿಗಣಿಸಲಾಗಿದ್ದ...

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಜನತಾ ಚಳುವಳಿ ಭಾರತ ಪಕ್ಷ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

Image
ಬೆಂಗಳೂರು ಜನವರಿ 29, 2026: ಜನತಾ ಚಳುವಳಿ ಭಾರತ ಪಕ್ಷದ ವತಿಯಿಂದ ಮುಂಬರುವ ಮಹತ್ವದ ಚುನಾವಣೆಗಳ ಸಿದ್ಧತೆ ಮತ್ತು ರಾಜಕೀಯ ವಿದ್ಯಮಾನಗಳ ಕುರಿತು ಪತ್ರಿಕಾಗೋಷ್ಠಿಗಾಗಿ ಸಿದ್ಧಪಡಿಸಿದ ಸಮಗ್ರ ಮಾಹಿತಿ ಇಲ್ಲಿದೆ. 1. ಮುಂಬರುವ ಚುನಾವಣೆಗಳ ಸಿದ್ಧತೆ ಮತ್ತು ಉಸ್ತುವಾರಿಗಳ ನೇಮಕ ಪಕ್ಷವು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಚುನಾವಣೆಗಳನ್ನು ಎದುರಿಸಲು ಸಜ್ಜಾಗಿದ್ದು, ಈ ಕೆಳಗಿನಂತೆ ಉಸ್ತುವಾರಿಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ: * ಪಂಚ ರಾಜ್ಯಗಳ ಚುನಾವಣೆ (2026): ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ರಾಷ್ಟ್ರೀಯ ಮಟ್ಟದ ಹಿರಿಯ ನಾಯಕರನ್ನು 'ಚುನಾವಣಾ ವೀಕ್ಷಕರು' ಹಾಗೂ 'ರಾಜ್ಯ ಉಸ್ತುವಾರಿ'ಗಳಾಗಿ ನೇಮಕ ಮಾಡಲಾಗುವುದು. ಕರ್ನಾಟಕ ವಿಧಾನಸಭಾ ಉಪಚುನಾವಣೆಗಳು: ತೆರವಾಗಿರುವ ಕ್ಷೇತ್ರಗಳಿಗೆ (ಉದಾಹರಣೆಗೆ: ಬಾಗಲಕೋಟೆ, ದಾವಣಗೆರೆ ದಕ್ಷಿಣ ಇತ್ಯಾದಿ) ಸ್ಥಳೀಯವಾಗಿ ಪ್ರಭಾವಿ ಹೊಂದಿರುವ ಮತ್ತು ಸಂಘಟನಾ ಚತುರರನ್ನು ಉಸ್ತುವಾರಿಗಳಾಗಿ ಘೋಷಿಸಲಾಗುವುದು. * ಸ್ಥಳೀಯ ಸಂಸ್ಥೆಗಳ ಚುನಾವಣೆ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆಗೆ ಪ್ರತಿ ಜಿಲ್ಲೆಗೂ ಒಬ್ಬರು ಜಿಲ್ಲಾ ಚುನಾವಣಾ ಸಂಚಾಲಕ'ರನ್ನು ನೇಮಿಸಲಾಗುವುದು. 2. ಪಕ್ಷದ ಸಮಗ್ರ ನೀಲಿ ನಕ್ಷೆ (Roadmap 2026) * ಸಂಘಟನೆ ಬಲವರ...

ವಿಶೇಷ ಶಾಲಾ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾರ್ವತ್ರಿಕ ಮುಷ್ಕರ.

Image
ಬೆಂಗಳೂರು ಜನವರಿ 29, 2026 ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ ಹಾಗೂ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ್ ಪ್ರತಿಭಟನೆಯನ್ನು ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಯಾವುದೇ ಅನುದಾನ ದೊರಕದೆ ಇರುವ 25 ವರ್ಷ ಮೀರಿದ ವಯಸ್ಕ ಬುದ್ದಿಮಾಂದ್ಯ ಯುವಕ-ಯುವತಿಯರು ಹಾಗೂ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.  ಸಂಘದ ಅಧ್ಯಕ್ಷ ಡಾ.ಕಾಂತಿ ಹರೀಶ್, ಒಕ್ಕೂಟದ ಅಧ್ಯಕ್ಷ ಸೋಮನಾಥ್ ಮಹಾಜನ್ ಶೆಟ್ಟರ್,ಮಾಧ್ಯಮ ಸಂಚಾಲಕ ಸಂಜಯ್ ಸಬರದ್ ಮಾತನಾಡಿ, ರಾಜ್ಯದ ಕೆಲವೊಂದು 34 ವಿಶೇಷ ಶಾಲೆಗಳಿಗೆ ಮಾತ್ರ 1982 ಅನುದಾನ ನೀತಿಯಂತೆ ಅನುದಾನ ನೀಡುತ್ತಿದೆ. ಅನುದಾನ ಇಲ್ಲದೆಯೇ ಸರಕಾರಿಯೇತರ ಸಂಸ್ಥೆಗಳು ವಿಶೇಷ ಶಾಲೆಗಳನ್ನು ನಡೆಸಿಕೊಂಡು ಬರುತ್ತಿವೆ, ರಾಜ್ಯ ಸಂಘದ ಪ್ರಬಲ ಹೋರಾಟದ ಫಲವಾಗಿ 2010-11ರಿಂದ ಅನುದಾನ ನೀಡಲು ನಿರ್ಧರಿಸಿದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನೂತನ ಅನುದಾನ ನೀತಿಯನ್ನು ಜಾರಿಗೆ ತಂದಿತ್ತು, "ಶಿಶು ಕೇಂದ್ರಿಕೃತ ಸಹಾಯಧನ ಯೋಜನೆ" ಈ ಯೋಜನೆಯಡಿಯಲ್ಲಿ ಶಿಕ್ಷಕರಿಗೆ ವೇತನವಾಗಲಿ, ಆರ್ಥಿಕ ಭದ್ರತೆಯಾಗಲೀ ಇರಲಿಲ್ಲ, ಕೇವಲ ಗೌರವಧನ ಮಾತ್ರ, 2010-11ರಲ್ಲಿ ವಿಶೇಷ ಶಿಕ್ಷಕರಿಗೆ ರೂ. ...

"ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ ಹೋಟೆಲ್" ಅನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

Image
ಮೈಲಾರಿ ಹೋಟೆಲ್ ನ ದೋಸೆಗೆ ಮನಸೋತ ಮುಖ್ಯಮಂತ್ರಿ ಸಿದ್ದರಾಮಯ್ಯ "ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ ಹೋಟೆಲ್" ಅನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.  ಬೆಂಗಳೂರಿನ ಇಂದಿರಾನಗರದ ಹಳೇ ತಿಪ್ಪಸಂದ್ರದಲ್ಲಿ ನೂತನವಾಗಿ ಆರಂಭಿಸಲಾದ "ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ ಹೋಟೆಲ್" ಅನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಅಲ್ಲದೆ, ಹೋಟೆಲ್‌ನಲ್ಲಿ ಬೆಳಗಿನ ಉಪಹಾರ ಸೇವಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ. 1938ರಲ್ಲಿ ಮೈಸೂರಿನಲ್ಲಿ ಆರಂಭವಾದ ಮೈಲಾರಿ ಹೋಟೆಲ್ ತನ್ನ ರುಚಿ ಹಾಗೂ ಗುಣಮಟ್ಟದ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ನನ್ನ ಕಾಲೇಜು ದಿನಗಳಲ್ಲಿ ಆಗಾಗ್ಗೆ ಈ ಹೋಟೆಲ್‌ಗೆ ಹೋಗುತ್ತಿದ್ದೆ, ಈಗಲೂ ಮೈಸೂರಿಗೆ ಹೋದ ವೇಳೆ ಬಿಡುವಾದಾಗ ಭೇಟಿ ನೀಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.  'ನನ್ನೂರಿನ ಮೈಲಾರಿಯ ರುಚಿಕರ ತಿಂಡಿ ಸವಿಯುವ ಅವಕಾಶ ಬೆಂಗಳೂರಿನ ಜನರಿಗೆ ಈಗ ಸಿಗುತ್ತಿರುವುದು ಖುಷಿಯ ವಿಚಾರ. ಶುಭವಾಗಲಿ' ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಉಪಾಹಾರ ಸವಿಯುತ್ತಿರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಲ್ಯಾಂಡ್ ಲಾರ್ಡ್ ಸಿನಿಮಾ ಒಂದು ಅದ್ಬುತ ಕಥೆ, ಉಳ್ಳವರ ಮಾನಸಿಕ ಸ್ಥಿತಿ, ಮನೋಭಾವ ಅನಾವರಣ

Image
ಧಣಿಗಳ ಕ್ರೌರ್ಯ, ಕ್ರೂರತೆ, ಮತ್ತು ಕಾರ್ಯಾಂಗ ವ್ಯವಸ್ಥೆಯಲ್ಲಿ ಕಠಿಣತೆಯ ಮುಂದೆ ಕೆಳವರ್ಗದ ಜನರ ಅಲ್ಪಬಲ, ಹಾಗೂ ನ್ಯಾಯಾಂಗ ಅಡಿಯಲ್ಲಿ ವಿಚಾರಣೆಗೆ ಸಿಕ್ಕಿ ಅಸಹಾಯಕನಾಗಿ ಕಾಣುವ ನಾಯಕನಟ,   ಹುಟ್ಟುಬಟ್ಟೆಗೆ, ಬದುಕಿಗೆ ಅಗತ್ಯವುಳ್ಳವ ಜನರು ಅನುಭವಿಸುವ ಕಠಿಣ ಸವಾಲು, ಜಟಿಲ ಜಂಜಾಟ, ಈ ಅಸಹಾಯಕದ ಕಥೆಯಲ್ಲಿ  ತಮ್ಮವರೇ ತಮಗೆ ಶತ್ರುಗಳು ಎಂದು ತೋರಿಸುವ ವಿಭಿನ್ನವಾದ ದೃಶ್ಯಗಳು, ಇವೆಲ್ಲವನ್ನೂ ಅನುಭವಿಸಿ, ಎದೆಯೊಡ್ಡಿ ಮೆಟ್ಟಿ ನಿಲ್ಲುವ ನಾಯಕ ದುನಿಯಾ ವಿಜಯ್ (ರಾಚೆಯ್ಯನ ಪಾತ್ರ) ಅದಕ್ಕೆ ಸಾರಥಿಯಾಗಿ ನಾಯಕ ನಟಿ  ರಚಿತಾ ರಾಮ್ (ನಿಂಗವ್ವನಾಗಿ) ತಂದೆ ತಾಯಿಗೆ ಸಾಥ್ ಕೊಡುವ ನಾಯಕ ನಟನ ಮಗಳು ಮೋನಿಕಾ ವಿಜಯ್ ( ಭಾಗ್ಯ ಪೊಲೀಸ್ ಕಾನ್ಸ್ಟೇಬಲ್ ನ ಪಾತ್ರದಲ್ಲಿ)  ಇವೆಲ್ಲರ ಪಾತ್ರಗಳು ನಿಜಕ್ಕೂ ಅದ್ಬುತ ಹಾಗೂ ಇದು ಸಿನಿಮಾದ ಕಥೆಗೆ ಒಂದು ರೀತಿಯ ಪ್ಲಸ್ ಪಾಯಿಂಟ್,  ಈ ಸಿನಿಮಾದಲ್ಲಿರುವ ಪ್ರತಿಯೊಂದು ಸೀನ್ ಈ ಸಿನಿಮಾದ ಹೊಸ ಕಥೆಯನ್ನು ಹೇಳಲು ಪ್ರಾರಂಭಿಸುತ್ತದೆ,  ನಾಯಕನಟ, ನಾಯಕಿ, ಮತ್ತು ನಾಯಕನ ಮಗಳು ತಮ್ಮಗಳ ಪಾತ್ರದಲ್ಲಿ ಹೋರಾಟಗಾರರಾಗಿ ಪರವರ್ತನೆ ಆಗುವುದು ಮತ್ತು ವ್ಯವಸ್ಥೆಯ ದಿಕ್ಕನ್ನು ಬದಲಾಯಿಸುಲು ಛಲ ತೊಡುವುದು, ಒಂದು ಸೂರಿಗಾಗಿ ಒಂದು ಇಡಿ ತುತ್ತಿಗಾಗಿ ಉಳ್ಳವರು ಇಲ್ಲದವರ ಮೇಲೆ ಮಾಡುವ ಸಂಘರ್ಷ, ಎರಡು ಎಕರೆ ಜಮೀನು ಪಡೆಯಲು ಉಮಾಶ್ರೀ ರವರ ಛಲ...

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಜೈ ಕರುನಾಡು ಮಾತೃ ಭೂಮಿ ಸಂಘ'ದ ಸದಸ್ಯರಿಂದ ಪತ್ರಿಕಾಗೋಷ್ಠಿ

Image
ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಈ. ಈ. ವಿರೂಪಾಕ್ಷ ಅವರು ಮಾತನಾಡಿದರು.   ನಮ್ಮ ಸಂಘವು ಕನ್ನಡ ಭಾಷೆ ಉಳಿಸಲು ನಿರಂತರ ಹೋರಾಟ ಮಾಡುವುದು, ನಿರುದ್ಯೋಗ ಸಮಸ್ಯೆ ಪರಿಹರಿಸಲು ಸಲಹೆ ನೀಡುವುದು, ಗ್ರಾಮೀಣ ನೈರ್ಮಲ್ಯದ ಬಗ್ಗೆ ಹೋರಾಟ ಮಾಡುವುದು, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಶಿಕ್ಷಣ ನೀಡುವುದು, ಖಾಸಗಿ ಕಂಪನಿಗಳ ಸಿ.ಎಸ್.ಆರ್ ನಿಧಿಯನ್ನು ಸಮರ್ಪಕವಾಗಿ ಬಳಸುವುದು ಹಾಗೂ ಭ್ರಷ್ಟಾಚಾರ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವುದು ನಮ್ಮ ಸಂಘದ ಉದ್ದೇಶಗಳಾಗಿವೆ ಎಂದು ತಿಳಿಸಿದರು.