Posts

ನೇಮಕಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸದಿರುವುದನ್ನು ವಿರೋಧಿಸಿ ಬಗ್ಗೆ ಉಗ್ರ ಹೋರಾಟ ಮಾಡುವುದಾಗಿ ಡಾ|| ಎನ್.ಮೂರ್ತಿ ಅವರು ಎಚ್ಚರಿಕೆ ನೀಡಿದರು.

Image
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಬಿ) ರಾಷ್ಟೀಯ ಅಧ್ಯಕ್ಷರಾದ ಡಾ|| ಎನ್.ಮೂರ್ತಿ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ನೇಮಕಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸದಿರುವುದನ್ನು ವಿರೋಧಿಸಿ ಬಗ್ಗೆ ಉಗ್ರ ಹೋರಾಟ ಮಾಡುವುದಾಗಿ ಡಾ|| ಎನ್.ಮೂರ್ತಿ ಅವರು ಎಚ್ಚರಿಕೆ ನೀಡಿದರು.  ಪರಿಶಿಷ್ಟರ ಮೀಸಲಾತಿ 101 ಪರಿಶಿಷ್ಟ ಜಾತಿಗಳ ನಡುವೆ ಸಮಾನವಾಗಿ ಹಂಚಿಕೆಯಾಗಿಲ್ಲ. ಆದ್ದರಿಂದ ಮೀಸಲಾತಿಯನ್ನು ವರ್ಗೀಕರಣ ಮಾಡಬೇಕು ಎಂದು ಮಾದಿಗ ಮತ್ತು ಸಂಭಂದಿತ ಜಾತಿಗಳು ಕಳೆದ 35 ವರ್ಷಗಳಿಂದ ನಿರಂತರ ಹೋರಾಟ ನಡೆಸಿವೆ. ಈ ಹೋರಾಟಕ್ಕೆ ಮಣಿದು ಸುಪ್ರೀಂಕೋರ್ಟ್‌ನ 7 ಜನ ನ್ಯಾಯಾದೀಶರ ಪೀಠ ವರ್ಗೀಕರಣಕ್ಕೆ ತೀರ್ಪು ನೀಡಿತು. ಈ ತೀರ್ಪನ್ನು ಪರಿಗಣಿಸಿ ರಾಜ್ಯ ಸರ್ಕಾರ ರಚಿಸಿದ ಗೌರವಾನ್ವಿತ ನ್ಯಾಯ ಮೂರ್ತಿ ನಾಗಮೋಹನ್‌ದಾಸ್ ಆಯೋಗ ವರದಿಯ ಶಿಫಾರಸ್ಸುಗಳನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರ 'ಎ'-ಮಾದಿಗ ಮತ್ತು ಸಂಬಂಧಿತ ಶೇ.6%, 'ಬಿ' ಹೊಲೆಯ ಮತ್ತು ಸಂಬಂಧಿತ ಶೇ.6%, 'ಸಿ'- '- ಸ್ಪೃಶ್ಯ ಮತ್ತು ಜಾತಿಗಳು ಶೇ.5%, ಒಟ್ಟು ಮೀಸಲಾತಿ ಶೇ.17% ಎಂದು ವಗೀಕರಿಸಿ ವಿಧೇಯಕ ಸಹ ತಂದಿತು. ರಾಜಕೀಯ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಮಾನ್ಯ ಶ್ರೀ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಗೌರವಾನ್ವಿತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಗೆ ವೈತಿರಿಕ್ತ ನಡೆಯು ಹೈಕೋರ್ಟ್ ಮೆಟ್ಟಿಲ...

ಬೆಂಗಳೂರಿನಲ್ಲಿ ನಾರಾಯಣ ಸೇವಾ ಸಂಸ್ಥಾನ ವತಿಯಿಂದ ಮಾರ್ಚ್ 1ರಂದು ಕೃತಕ ಕಾಲು ಹಾಗೂ ಕ್ಯಾಲಿಪರ್ ಅಳವಡಿಕಾ ಶಿಬಿರ ಆಯೋಜನೆ

Image
ನಾರಾಯಣ ಸೇವಾ ಸಂಸ್ಥಾನ ವತಿಯಿಂದ ಮಾರ್ಚ್ 1ರಂದು ಕೃತಕ ಕಾಲು ಹಾಗೂ ಕ್ಯಾಲಿಪರ್ ಅಳವಡಿಕಾ ಶಿಬಿರ ಆಯೋಜನೆ ಸುಮಾರು 640 ವಿಕಲಚೇತನರಿಗೆ ಕೃತಕ ಕಾಲು ಹಾಗೂ ಕ್ಯಾಲಿಪರ್ ಅಳವಡಿಕಾ ಶಿಬಿರ ಆಯೋಜನೆ ಬೆಂಗಳೂರು ಫೆಬ್ರವರಿ 27, 2026:  ದೇಶದಲ್ಲಿನ ವಿಕಲಚೇತನರಿಗೆ ಅನುಕೂಲವಾಗುವ ಉದ್ದೇಶದಿಂದ ಉದಯಪುರ ಮೂಲದ ನಾರಾಯಣ ಸೇವಾ ಸಂಸ್ಥಾನವು ನೆರವು ಒದಗಿಸುವ ಉಡುದಾರರಾದ ಜನರಲ್ ಮೋಟಾರ್ಸ್, టిటివి టెశ్నాలజిగా మత్తు ఎసిఐ వల్లోకి వ్యెడా నవతిగడఅందిన మాన్ 16 ಭಾನುವಾರದಂದು ಬೆಂಗಳೂರಿನಲ್ಲಿ ನಗೆ ಸ್ನೇಹಹಯತಕ ಕಾಲು ಮತ್ತು ಕ್ಯಾಲಿಪರ್ ಅಳವಡಿಕಾ ಶಿಬಿರ' ಹಾಗೂ ದಾನಿಗಳಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಿದೆ. ಈ ಕಾಚಿತ ಶಿಬಿರವು ಬಸವನಗುಡಿಯ ವಿ.ವಿ. ಪುರಂನಲ್ಲಿರುವ ನ್ಯಾಷನಲ್ ಹೈಸ್ಕೂಲ್ ರಸ್ತೆಯ ಮಹಾವೀರ ಧರ್ಮಶಾಲಾ (ಸಂಖ್ಯೆ 17) ದಲ್ಲಿ ಬೆಳಿಗೆ, 8:00 ರಿಂದ ಸಂಜೆ 600 ರವರೆಗೆ ನಡೆಯಲಿದೆ. ಪೂರ್ವಾಹ್ನ 11:00 ಗಂಟೆಗೆ ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆ ನೆರವೇರಲಿದೆ. ಈ ಹಿಂದೆ ಈ ಯೋಜನೆಗೆ ಆಯ್ಕೆಯಾದ ವಿಕಲಚೇತನರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಈ ಶಿಬಿರದಲ್ಲಿ ಸುಮಾರು 640 ವಿಕಲಚೇತನರಿಗೆ ಉಚಿತವಾದಿ ಕೃತಕ ಕಾಲು ಮತ್ತು ಕ್ಯಾಲಿಪರ್ ಗಳನ್ನು ಅಳವಡಿಸಲಾಗುತ್ತಿದ್ದು ಇದು ಈ ಭಾಗದ ಅತಿದೊಡ್ಡ ನೆರವು ಯೋಜನೆಗಳಲ್ಲಿ ಒಂದಾಗಿದೆ. ಸುಮಾರು 550 ಫಲಾನುಭವಿಗಳಿಗೆ ಸುಧಾರಿತ ಅತ್ಯಾಧುನಿಕ 'ನಾರಾಯಣ ಕೃತ...

ಬೆಂಗಳೂರಿನ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಹಾಗೂ ಹಿರಿಯ ನಾಗರಿಕರ ಸಮಸ್ಯೆಗಳ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

Image
ಬೆಂಗಳೂರಿನ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಹಾಗೂ ಹಿರಿಯ ನಾಗರಿಕರ ಸಮಸ್ಯೆಗಳ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತ್ತು.   ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದಸಿ.ಎಸ್‌. ಷಡಾಕ್ಷರಿ ಅವರು ಉದ್ಘಾಟನೆ ಮಾಡಿದರು.  ಈ ಸಂದರ್ಭದಲ್ಲಿ 75 ವರ್ಷಕ್ಕೂ ಮೇಲ್ಪಟ್ಟ ನಿವೃತ್ತ ನೌಕರರಿಗೆ ಅಭಿನಂದನಾ ಸಮಾರಂಭ ನಡೆಯಿತು. 250 ಕ್ಕೂ ಹೆಚ್ಚು ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.  ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಅಧ್ಯಕ್ಷರಾದ ಬೈರಪ್ಪ ಅವರ ನೇತೃತ್ವದಲ್ಲಿ ಈ ಸಮಾರಂಭ ನಡೆಯಿತು.

ಸಕ್ಕರೆನಾಡಲ್ಲಿ ಸಿದ್ದಗಂಗಾಶ್ರೀಗಳ ಸಸ್ಯಧಾಮ ಸದ್ದುಗದ್ದಲವಿಲ್ಲದ ಸಾಧಕ- ಪ್ರಕೃತಿಯ ಆರಾಧಕ - 'ಹಸಿರಿನ ನಾಯಕ' ಕಾಯಕಯೋಗಿ ಶಿವಕುಮಾರ್

Image
ಮಂಡ್ಯ : ಮಾಡುವಂತಿರಬೇಕು, ಮಾಡದಂತಿರಬೇಕು, ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು ಎಂಬ ಅಣ್ಣ ಬಸವಣ್ಣನವರ ವಚನದಂತೆ ಸದ್ದುಗದ್ದಲವಿರದೆ ಸಮಾಜ ಸೇವೆಯಲ್ಲಿ ನಿರತವಾಗಿರುವ ಪತ್ರಕರ್ತ ಎಂ.ಶಿವಕುಮಾರ್.   ಟೀಕೆಗಳು ಸಾಯುತ್ತವೆ ಕೆಲಸಗಳು ಮಾತ್ರ ಉಳಿಯುತ್ತವೆ ಎಂಬ ತತ್ವಕ್ಕೆ ಅಂಟಿಕೊಂಡ ಅಸಾಧ್ಯ ಸಾಧಕ.   `ಕಾಯಕವೇ ಕೈಲಾಸವೆಂಬ' ದಿವ್ಯಮಂತ್ರವನ್ನು ಆದರ್ಶವನ್ನಾಗಿಸಿಕೊಂಡು ಸದಾ ಜನೋಪಯೋಗಿ ಕಾರ್ಯದಲ್ಲಿ ನಿರತರಾಗಿರುವ ಕಾಯಕಯೋಗಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಹಿರಿಯಪತ್ರಕರ್ತ ಎಂ.ಶಿವಕುಮಾರ್ ತಮ್ಮ ಕಾಯಕದ ದುಡಿಮೆಯ ಹಣದಿಂದ ನೂರಾರು ಮಂದಿ ರೈತರಿಗೆ, ಮಹಿಳೆಯರಿಗೆ, ಸಂಘ ಸಂಸ್ಥೆಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸುತ್ತಾ ಬಂದಿದ್ದಾರೆ.  ಹಸಿರೀಕರಣದ ಜಾಗೃತಿ ಮೂಡಿಸುತ್ತಿರುವ ಶಿವಕುಮಾರ್ ಅವರ ಸಾಧನೆಗೆ ಮಂಡ್ಯನಗರದ ಸ್ವರ್ಣಸಂದ್ರ ಬಡಾವಣೆಯ ಪರಮಪೂಜ್ಯ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿಯವರ ಉದ್ಯಾನವನ ಹಾಗೂ ಧ್ಯಾನಕೇಂದ್ರ ಸಾಕ್ಷಿಯಾಗಿ ನಿಂತಿದೆ. ಬಿರುಬೇಸಿಗೆಯಲ್ಲೂ ಬಾಡದ ಹಸಿರು, ಮನಸ್ಸಿಗೆ ಮುದ ನೀಡುವ ಸಿದ್ದಗಂಗಾಶ್ರೀಗಳ ಧ್ಯಾನಕೇಂದ್ರ, ಪ್ರಾಣಿ ಪಕ್ಷಿಗಳಿಗೂ ನೀರಿನ ಹೊಂಡ, ಅಹ್ಲಾದಕರ ಹಾಗೂ ಪ್ರಶಾಂತ ವಾತಾವರಣ. ಹಸಿರಿನ ಉದ್ಯಾನವನ ಮಾತ್ರವಲ್ಲ ಸಿದ್ದಗಂಗಾಶ್ರೀಗಳು ನೆಲೆಸಿರುವ ದೇವರವನ ಎನ್ನುವಷ್ಟರ ಮಟ್ಟಿಗೆ ಮನೋಲ್ಲಾಸ ನೀಡುವ ನೆಮ್ಮದಿಯ ತಾಣದ ನಂದನವನ ಮಂಡ್ಯದಲ್ಲಿ...

ರಾಷ್ಟ್ರೀಯ ಔಷಧೀಯ ಸಸ್ಯ ಮಂಡಳಿಯಿಂದ ಗಾರ್ಡನ್ ಸಿಟಿ ವಿಶ್ವವಿದ್ಯಾಲಯಕ್ಕೆ ಶತಾವರಿ ಯೋಜನೆ ಮಂಜೂರು

Image
ಬೆಂಗಳೂರಿನ ಗಾರ್ಡನ್ ಸಿಟಿ ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಔಷಧೀಯ ಸಸ್ಯ ಮಂಡಳಿ, ಆಯುಷ್ ಸಚಿವಾಲಯ (National Medicinal Plants Board, Ministry of AYUSH) , ಭಾರತ ಸರ್ಕಾರ, ನವದೆಹಲಿ ಇವರಿಂದ “Species Specific Campaign on Shatavari – For Better Health” ಅಭಿಯಾನದಡಿ ಪ್ರತಿಷ್ಠಿತ ಶತಾವರಿ ಯೋಜನೆ ಮಂಜೂರಾಗಿದೆ. ಈ ಯೋಜನೆಗೆ ಬೆಂಗಳೂರಿನ Karnataka State Medicinal Plants Authority (KaMPA) ಬೆಂಬಲ ನೀಡುತ್ತಿದೆ. ಈ ಮಹತ್ವದ ಮಾನ್ಯತೆಯ ಭಾಗವಾಗಿ, ಶತಾವರಿ ಯೋಜನೆ ಉದ್ಘಾಟನಾ ಸಭೆ ಫೆಬ್ರವರಿ 20, 2026 ರಂದು ಜಿಸಿಯು ಆವರಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ KaMPAನ ಹಿರಿಯ ಸಲಹೆಗಾರರಾದ ಡಾ. ಎಂ. ಜೆ. ಪ್ರಭು ಗೌರವ ಅತಿಥಿಯಾಗಿ ಆಗಮಿಸಿದರು. ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿಗಳಾದ ಡಾ. ಎಂ. ರಾಮಚಂದ್ರ ಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಉಪಕುಲಪತಿಗಳಾದ ಡಾ. ರಾಮಚಂದ್ರ ಗೌಡ ಅವರು ಶತಾವರಿ ಅಭಿಯಾನದ ಉದ್ದೇಶಗಳು ಮತ್ತು ಗುರಿಗಳನ್ನು ವಿವರಿಸಿ, ವಿಶೇಷವಾಗಿ ಗ್ರಾಮೀಣ ಸಮುದಾಯಗಳಲ್ಲಿ ಔಷಧೀಯ ಸಸ್ಯಗಳ ಮಹತ್ವವನ್ನು ಒತ್ತಿಹೇಳಿದರು. ಉದ್ಘಾಟನಾ ಸಮಾರಂಭದ ನಂತರ ಡಾ. ಎಂ. ಜೆ. ಪ್ರಭು ಅವರ ಸಂಚಾಲನೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಪ್ಯಾನೆಲ್‌ನಲ್ಲಿ ಡಾ. ಈರಣ್ಣ ಈಶ್ವರಪ್ಪ ಹುಗಾರ್ , ಶ್ರೀಮತಿ ಸೀಮಾ ಸುಭಾಷ್ ಮಾಳಿ,...

ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘಕ್ಕೆ ನೂತನ ರಾಜ್ಯಾಧ್ಯಕ್ಷರಾಗಿ ಶ್ರೀಮತಿ ಶೈಲಾ ಕೆ.ಡಿ ಆಯ್ಕೆ

Image
ಬೆಂಗಳೂರು, ಫೆಬ್ರವರಿ 17, 2026  ಹಿಂದಿನ ರಾಜ್ಯಾಧ್ಯಕ್ಷರ ರಾಜೀನಾಮೆಯಿಂದ ತರವಾದ ಸ್ಥಾನಕ್ಕೆ ನಡೆದ ಆಯ್ಕೆಯಲ್ಲಿ ನೂತನ ರಾಜ್ಯಾಧ್ಯಕ್ಷರಾಗಿ ಶ್ರೀಮತಿ ಶೈಲಾ ಕೆ.ಡಿ. ರವರನ್ನು ಇಂದು ನಡೆದ ರಾಜ್ಯ ಪರಿಷತ್ ಸಭೆಯಲ್ಲಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಇಂದಿನ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಉಪಾಧ್ಯಕ್ಷರಾದ ಶ್ರೀ ಜಿ. ನೀಲಕಂಠ ಸ್ವಾಮಿರವರು ಸುದ್ದಿ ಗೋಷ್ಠಿಯಲ್ಲಿ ಘೋಷಿಸಿದರು ದಿನಾಂಕ:28-02-2026ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಜರುಗುವ ರಾಜ್ಯ ಪರಿಷತ್ ಸಭೆಯಲ್ಲಿ ನೂತನ ರಾಜ್ಯಾಧ್ಯಕ್ಷರ ಪದಗ್ರಹಣದ ಕಾರ್ಯಕ್ರಮ ಮಾಡುವ ಬಗ್ಗೆ ತೀರ್ಮಾನಿಸಲಾಗಿರುವದರ ಮತ್ತು ವಿವಿದ ಬೇಡಿಕೆಗಳ ಬಗ್ಗೆ ಚರ್ಚಿಸಲು ಕರೆದಿರುವ ಮಹತ್ವದ ಸಭೆಗೆ ಸಂಘದ ಸರ್ವ ಪದಾಧಿಕಾರಿಗಳು, ನಿರ್ದೇಶಕರು ಸದಸ್ಯರುಗಳು, ಹಾಜರಾಗಲು ರಾಜ್ಯ ಜಂಟಿ ಕಾರ್ಯದಶಿಗಳಾದ ಶ್ರೀಲಾಲ್ ಸಾಬ್ ಎಂ ಮನಿಯಾರ್ ರವರು ಕರೆ ನೀಡಿದರು. ನೂತನ ರಾಜ್ಯಾಧ್ಯಕ್ಷರ ಗುರಿ ಮತ್ತು ಸವಾಲುಗಳು 1. ನೆನಗುದಿಗೆ ಬಿದ್ದಿರುವ ಪೌರಸೇವಾ ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕಳೆದ 16 ವರ್ಷಗಳು ಗತಿಸಿದ್ದರು ಸಹ ಮುನಿಸಿಪಲ್ ವೃಂದದ ಮತ್ತು ನೇಮಕಾತಿ (C& R) ತಿದ್ದು ಪಡಿ ಮಾಡವ ವಿಚಾರ 2. ಕುಟುಂಬ ಕಲ್ಯಾಣ ನಿಧಿಯಿಂದ (FBF) -GIS ಗೆ ಒಳಪಡಿಸುವುದು. 3. ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ KGID ಯನ್ನು ಮುನಿಸಿಪಲ್ ನೌಕರರಿಗೂ ಜಾರಿ...

ಬೆಂಗಳೂರಿನ ಸರ್ಕಾರಿ ಸರ್ಕಾರಿ ನೌಕರರ ಸಭಾಂಗಣ ಕ್ಲಬ್‌ ನಲ್ಲಿ "ಶೋಷಿತ ಸಮುದಾಯಗಳ ವಿಮೋಚನಾ ದಿನ" ಆಚರಣೆ ಮಾಡಲಾಯಿತು.

Image
ಬೆಂಗಳೂರಿನ ಸರ್ಕಾರಿ ಸರ್ಕಾರಿ ನೌಕರರ ಸಭಾಂಗಣ ಕ್ಲಬ್‌ ನಲ್ಲಿ "ಶೋಷಿತ ಸಮುದಾಯಗಳ ವಿಮೋಚನಾ ದಿನ" ಆಚರಣೆ ಮಾಡಲಾಯಿತು.   ಈ ಕಾರ್ಯಕ್ರಮದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ, ಬಿ.ಕೃಷ್ಣಪ್ಪ ಟ್ರಸ್ಟ್ ಮುಖ್ಯಸ್ಥೆ ಇಂದಿರಾಕೃಷ್ಣಪ್ಪ ಅವರು ಉಪಸ್ಥಿತರಿದ್ದರು.  ದಸಂಸ ರಾಜ್ಯ ಪ್ರಧಾನ ” ಸಂಚಾಲಕ ಮಾವಳ್ಳಿ ಶಂಕರ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.  ಈ ಕಾರ್ಯಕ್ರಮದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿದರು. ವೈಯಕ್ತಿಕ ಜೀವನ ಎಂಬುದು ಮನುಷ್ಯನಿಗೆ ಸಹಜವಾಗಿ ಇರುವ ಮೊದಲ ಆದ್ಯತೆ. ಅದರಲ್ಲೂ ಕುಟುಂಬ ಎಂಬ ಸಮಾಜದ ಮೂಲ ಘಟಕವನ್ನು ನಿರ್ವಹಿಸುವಲ್ಲಿ ದೇಶದ ಮಹಿಳೆಯರ ಪಾತ್ರವೂ ದೊಡ್ಡದು. ಆದರೆ ದೇಶದ ಎಲ್ಲಾ ಜನರ ಬದುಕನ್ನು ಹಸನಾಗಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದ ದೇಶದ ಸಂವಿಧಾನ ಮತ್ತು ಇಲ್ಲಿನ ಶೋಷಿತರ ಬದುಕಿನ ಏಳಿಗೆಗಾಗಿ ಬಾಬಾ ಸಾಹೇಬರು ಮಾಡಿದ ಅಧ್ಯಯನ ಮತ್ತು ಪ್ರಯತ್ನಗಳ ಹಿಂದೆ ಇದ್ದವರೇ ಮಾತೆ ರಮಾ ಬಾಯಿ ಅವರು. ಅಪೌಷ್ಟಿಕತೆ, ರಕ್ತ ಹೀನತೆ ಮತ್ತು ಇನ್ನಿತರೆ ಸಮಸ್ಯೆಗಳ ಕಾರಣಕ್ಕೆ ತಮ್ಮ ಮಕ್ಕಳು ತೀರಿ ಹೋದಂತಹ ದುಃಖಕರ ಸಂದರ್ಭವನ್ನೂ ಸಹ ಗಂಡನೊಡನೆ ಹಂಚಿಕೊಳ್ಳದೇ ಎಲ್ಲರ ಬದುಕಿಗಾಗಿ ಪ್ರಯತ್ನಿಸಿ ಎಂಬ ಮಹಾನ್‌ ತ್ಯಾಗವನ್ನು ಮಾಡಿದವರು ರಮಾಬಾಯಿ ಎಂದು  ಸಚಿವ ಎಚ್.ಸಿ.ಮಹದೇವಪ್ಪ ಅವರು ತಿಳಿಸಿದರು.